»   » 'ಕಿಸ್' ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಿದ ಯಶ್

'ಕಿಸ್' ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಿದ ಯಶ್

Posted By:
Subscribe to Filmibeat Kannada

ನಟ ರಾಕಿಂಗ್ ಸ್ಟಾರ್ ಯಶ್ 'ಕಿಸ್' ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಿದ್ದಾರೆ. ನಿನ್ನೆ ಪ್ರೇಮಿಗಳ ದಿನದ ವಿಶೇಷವಾಗಿ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ.

ನಿರ್ದೇಶಕ ಎ.ಪಿ.ಅರ್ಜುನ್ ತಮ್ಮ 'ಕಿಸ್' ಚಿತ್ರದ ಟೀಸರ್ ಅನ್ನು ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯಿಂದ ರಿಲೀಸ್ ಮಾಡಿಸುವ ಪ್ಲಾನ್ ಮಾಡಿದ್ದರು. ಆದರೆ ರಾಧಿಕಾ ಪಂಡಿತ್ ಚಿಕಾಗೋ ಗೆ ಹೋಗಿರುವ ಕಾರಣ ಯಶ್ ಒಬ್ಬರೆ ಟೀಸರ್ ಲಾಂಚ್ ಮಾಡಿದರು. 'ಕಿಸ್' ಒಂದು ಪಕ್ಕಾ ಲವ್ ಸ್ಟೋರಿ ಸಿನಿಮಾವಾಗಿದೆ.

Yash released Kiss kannada movie first look teaser

'ಅಂಬಾರಿ', 'ಅದ್ದೂರಿ' ಖ್ಯಾತಿಯ ನಿರ್ದೇಶಕ ಎ.ಪಿ.ಅರ್ಜುನ್ ಈಗ 'ಕಿಸ್' ಸಿನಿಮಾ ಮಾಡುತ್ತಿದ್ದಾರೆ. ವಿರಾಟ್ ಮತ್ತು ಶ್ರೀ ಲೀಲಾ ನಾಯಕ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಇದು ಅವರಿಬ್ಬರ ಮೊದಲ ಸಿನಿಮಾ ಆಗಿದೆ. ಉಳಿದಂತೆ ವಿ.ಹರಿಕೃಷ್ಣ ಸಂಗೀತ, ರವಿವರ್ಮ ಸಾಹಸ ನಿರ್ದೇಶನ ಮತ್ತು ವಿ.ರವಿಕುಮಾರ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

English summary
Rocking Star Yash released Kiss kannada movie first look teaser.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X