'ಮರಕ್ಕರ್' ಡಬ್ಬಿಂಗ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಯಶ್

ನಟ ಯಶ್ ಅವರ ಕೆಜಿಎಫ್ ಸಿನಿಮಾ ಪಂಚ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಿ ಭಾರಿ ಯಶಸ್ಸನ್ನೇ ಗಳಿಸಿತು. ಈಗ ಯಶ್ ಅವರು ಮಲೆಯಾಳಂ ಸಿನಿಮಾ ಒಂದರ ಕನ್ನಡ ಡಬ್ಬಿಂಗ್ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ಮಲಾಯಳಂ ಸೇರಿದಂತೆ ತಮಿಳು, ತೆಲುಗು ಭಾಷೆಯಲ್ಲಿ ಬಿಡುಗಡೆ ಆಗುತ್ತಿರುವ ಹಿರಿಯ ನಟ ಮೋಹನ್‌ಲಾಲ್ ನಟಿಸಿರುವ ಐತಿಹಾಸಿಕ ಚಿತ್ರ 'ಮರಕ್ಕರ್' ನ ಕನ್ನಡ ಅವತರಣಿಕೆಯ ಟ್ರೇಲರ್ ಅನ್ನು ಯಶ್ ಅವರು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ನಟ ಯಶ್, ''ಮರಿಕ್ಕರ್' ಸಿನಿಮಾದ ಅಧಿಕೃತ ಕನ್ನಡ ಟ್ರೇಲರ್ ಇಲ್ಲಿದೆ' ಎಂಬ ಪೋಸ್ಟ್‌ನೊಂದಿಗೆ ನಟ ಮೋಹನ್‌ಲಾಲ್, ನಿರ್ದೇಶಕ ಪ್ರಿಯದರ್ಶನ್, ಸುನೀಲ್ ಶೆಟ್ಟಿ, ಅರ್ಜುನ್ ಸರ್ಜಾ ಇನ್ನಿತರರಿಗೆ ಶುಭ ಕೋರಿದ್ದಾರೆ.

ಕುಂಜುಲಿ ಮರಕ್ಕರ್ ಎಂಬಾತನ ಸಾಹಸ ಕಥನ

ಕುಂಜುಲಿ ಮರಕ್ಕರ್ ಎಂಬಾತನ ಸಾಹಸ ಕಥನ

'ಮರಕ್ಕರ್' ಸಿನಿಮಾವು ಕುಂಜುಲಿ ಮರಕ್ಕರ್ ಎಂಬ ರಾಜನ ಕುರಿತದ್ದಾಗಿದ್ದು, ಆತ ಪೋರ್ಚುಗೀಸರ ಮೇಲೆ ನಡೆಸಿದ ಯುದ್ಧದ ಕತೆಯನ್ನಾಧರಿಸಿದ ಸಿನಿಮಾ ಇದಾಗಿದೆ. ಈ ಐತಿಹಾಸಿಕ ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ. ಚಿತ್ರ ಮಾರ್ಚ್ 26 ಕ್ಕೆ ಬಿಡುಗಡೆ ಆಗಲಿದೆ.

ಹಲವು ಸ್ಟಾರ್ ನಟರು ಇದ್ದಾರೆ 'ಮರಕ್ಕರ್‌' ನಲ್ಲಿ

ಹಲವು ಸ್ಟಾರ್ ನಟರು ಇದ್ದಾರೆ 'ಮರಕ್ಕರ್‌' ನಲ್ಲಿ

ಚಿತ್ರದಲ್ಲಿ ಪ್ರಮುಖ ಸಿನಿಮಾರಂಗಗಳ ಪ್ರಮುಖ ನಟರು ಅಭಿನಯಿಸಿದ್ದಾರೆ. ಹಿಂದಿಯಿಂದ ಸುನೀಲ್ ಶೆಟ್ಟಿ, ಬಹುಭಾಷಾ ನಟ ಅರ್ಜುನ್ ಸರ್ಜಾ, ತಮಿಳಿನ ಪ್ರಭು, ನಟಿಯರಾದ ಮಂಜು ವಾರಿಯರ್, ಕೀರ್ತಿ ಸುರೇಶ್ ನಟಿಸಿದ್ದಾರೆ.

ಕೆಜಿಎಫ್ 2 ಬಹು ಭಾಷೆಗೆ ಡಬ್ ಆಗಲಿದೆ

ಕೆಜಿಎಫ್ 2 ಬಹು ಭಾಷೆಗೆ ಡಬ್ ಆಗಲಿದೆ

ನಟ ಯಶ್ ಅವರು ಕೆಜಿಎಫ್ ಚಿತ್ರ ಮಲೆಯಾಳಂ ನಲ್ಲಿ ಬಿಡುಗಡೆ ಆಗಿತ್ತು. ಅಲ್ಲಿ ಉತ್ತಮ ಪ್ರತಿಕ್ರಿಯೆಯನ್ನೇ ಕೆಜಿಎಫ್ ಪಡೆದುಕೊಂಡಿತ್ತು. ಇದೀಗ ಕೆಜಿಎಫ್ 2 ಸಿನಿಮಾ ಸಹ ಮಲೆಯಾಳಂ ಗೆ ಡಬ್ ಆಗಿ ಬಿಡುಗಡೆ ಆಗಲಿದೆ.

ತಣ್ಣಗಾದ ಡಬ್ಬಿಂಗ್ ವಿರೋಧಿ ಹೋರಾಟ

ತಣ್ಣಗಾದ ಡಬ್ಬಿಂಗ್ ವಿರೋಧಿ ಹೋರಾಟ

ಈ ಮುಂಚೆ ಡಬ್ಬಿಂಗ್ ಗೆ ಭಾರಿ ವಿರೋಧಗಳು ಕನ್ನಡ ಚಿತ್ರರಂಗದಲ್ಲಿ ಕೇಳಿಬಂದಿತ್ತು. ಆದರೆ ಇತ್ತೀಚೆಗೆ ಡಬ್ಬಿಂಗ್ ವಿರೋಧಿ ಹೋರಾಟಗಳು ತಣ್ಣಗಾಗಿವೆ. ನಟ-ನಟಿಯರೇ ಡಬ್ಬಿಂಗ್‌ ಗೆ ಬಹಿರಂಗವಾಗಿ ಬೆಂಬಲ ಸೂಚಿಸುತ್ತಿದ್ದಾರೆ. ನ್ಯಾಯಾಲಯದ ಡಬ್ಬಿಂಗ್ ಪರವಾದ ಆದೇಶಗಳು ಸಹ ಹೋರಾಟ ತಣ್ಣಗಾಗಲು ಕಾರಣ ಎನ್ನಲಾಗುತ್ತಿದೆ.

More from Filmibeat

English summary
Actor Yash released Marakkal kannada dubbing movie teaser in his social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X