Yash KGF 2 Remuneration : 'ಕೆಜಿಎಫ್ 2' ಚಿತ್ರಕ್ಕೆ ಯಶ್ ಸಂಭಾವನೆ ಪಡೆದಿಲ್ಲ!
ಕನ್ನಡದ ನಟ ಯಶ್ ರಾಕಿ ಭಾಯ್ ಅಂತಲೇ ಚಿರಪರಿಚಿತ. ಅಷ್ಟರ ಮಟ್ಟಿಗೆ 'ಕೆಜಿಎಫ್' ಚಿತ್ರದ ಹವಾ ಸೃಷ್ಟಿಯಾಗಿದೆ. ಆ ಕ್ರೇಜ್ 'ಕೆಜಿಎಫ್ 2' ಚಿತ್ರಕ್ಕೂ ಮುಂದುವರೆದಿದೆ. ಚಿತ್ರದ ಬಗ್ಗೆ ದೇಶಾದ್ಯಂತ ನಿರೀಕ್ಷೆ ಇರುವ ಕಾರಣಕ್ಕೆ ಚಿತ್ರತಂಡ ಅಬ್ಬರದ ಪ್ರಚಾರ ಮಾಡಲು ಸಿದ್ಧತೆ ಮಾಡಿಕೊಂಡಿದೆ. ದೆಹಲಿ ಇಂದ ಚಿತ್ರದ ಪ್ರಚಾರ ಕಾರ್ಯವನ್ನು ಶುರು ಮಾಡಲಾಗಿದೆ.
ಆದರೆ ಈಗ ಚಿತ್ರದ ಬಗ್ಗೆ ಹೇಳುವುದಕ್ಕಿಂತ ಹೆಚ್ಚಾಗಿ ನಟ ಯಶ್ ಬಗ್ಗೆ ಹೇಳ ಬೇಕು. 'ಕೆಜಿಎಫ್' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಈ ಚಿತ್ರಕ್ಕೆ ನಟ ಯಶ್ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ಬಗ್ಗೆ ಕುತೂಹಲ ಸಹಜವಾಗಿಯೇ ಇರುತ್ತದೆ. ಅದಕ್ಕೀಗ ಉತ್ತರ ಸಿಕ್ಕಿದೆ.
ನಟ ಯಶ್ ಸಂಭಾವನೆ ಕೂಡ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಅದರಲ್ಲೂ ಕೆಜಿಎಫ್ ಸಕ್ಸಸ್ ಬಳಿಕ ನಟ ಯಶ್ ಪಡೆಯುವ ಪೇಮೆಂಟ್ ಹೆಚ್ಚಾಗಿದೆ. ಯಶ್ ಸಿನಿಮಾ ಜರ್ನಿಯನ್ನು ನೋಡಿದರೆ 'ಕೆಜಿಎಫ್'ಗೂ ಮುನ್ನ, 'ಕೆಜಿಎಫ್' ನಂತರ ಅಂತ ಹೇಳಬಹದು. ಆದರೆ 'ಕೆಜಿಎಫ್ 2' ಚಿತ್ರಕ್ಕೆ ನಟ ಯಶ್ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂದು ಹುಡುಕಿದರೆ ಲೆಕ್ಕ ಸಿಗಲ್ಲ. ಯಾಕೆಂದರೆ ಅವರು ಈ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ.
Recommended Video


ಕೆಜಿಎಫ್ 2 ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ ಯಶ್!
ನಟ ಯಶ್ 'ಕೆಜಿಎಫ್ 2' ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಅಂತ ಪ್ರಶ್ನೆ ಹುಟ್ಟಿದ್ದರೆ ಅದಕ್ಕೆ ಉತ್ತರ ಸಿಗುವುದಿಲ್ಲ. ಯಾಕೆಂದರೆ ಯಶ್ ಈ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ. ಸಿನಿಮಾ ಶೂಂಟಿಂಗ್ ಮುಗಿದು, ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಆದರು ಇನ್ನೂ ಸಂಭಾವನೆ ಪಡೆದಿಲ್ಲ ಎಂದರೆ ಅಚ್ಚರಿ ಆಗ ಬಹುದು. ಆದರೆ ಯಸ್ ಬೇರೆಯದ್ದೇ ಪ್ಲ್ಯಾನ್‌ನಲ್ಲಿ ಇದ್ದಾರೆ. ಪೇಮೆಂಟ್ ಪಡೆದಿಲ್ಲ ಅಂದ ಮಾತ್ರಕ್ಕೆ ಸಿನಿಮಾವನ್ನು ಫ್ರೀಯಾದಿ ಮಾಡಿದ್ದಾರೆ ಅಂತಲ್ಲ. ಸಿನಿಮಾದಲ್ಲಿ ಅವರು ಸಂಭಾವನೆ ಬದಲಿಗೆ ಶೇರ್ ಪಡೆದುಕೊಳ್ಳುತ್ತಾರೆ.

ಸಂಭಾವನೆ ಇಲ್ಲ, ಶೇರ್ ಪಡೆದುಕೊಳ್ಳಲಿದ್ದಾರೆ ಯಶ್!
ನಟ ಯಶ್ ಚಿತ್ರಕ್ಕೂ ಮೊದಲೇ ಇಷ್ಟು ಅಂತ ಸಂಭಾವನೆ ಪಡೆಯುವುದಿಲ್ಲ. ಬದಲಿಗೆ ಅವರು ಚಿತ್ರದಲ್ಲಿ ಶೇರ್ ಪಡೆದುಕೊಳ್ಳುತ್ತಾರೆ. ಚಿತ್ರದಲ್ಲಿ ಎಷ್ಟೇ ಲಾಭ ಬಂದರು ಇಂತಿಷ್ಟು ಪರ್ಸೆಂಟ್ ಶೇರ್ ಅವರಿಗೆ ಹೋಗ ಬೇಕು ಎಂದು ಇರುತ್ತದೆ. ಇದು ಇದಕ್ಕೆ ನಿಗಧಿತ ಮೊತ್ತ ಇರುವುದಿಲ್ಲ. ಲಾಭ ಹೆಚ್ಚಾದರೆ ಬರುವ ಮೊತ್ತ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಹಿಟ್ ಅಗಲಿಲ್ಲವಾದರೆ ಬರುವ ಮೊತ್ತ ಕಡಿಮೆ ಆಗುತ್ತದೆ. ಸಂಭಾವನೆ ಪಡೆದರೆ ಅಷ್ಟಕ್ಕೆ ಸೀಮಿತ ಆಗಬೇಕಾಗುತ್ತದೆ. ಯಶ್ ಮಾತ್ರ ಅಲ್ಲ ಸುದೀಪ್ ಸೇರಿದಂತೆ, ಹಲವರು ಹೀಗೆ ಸಂಭಾವನೆ ಬದಲಿಗೆ ಶೇರ್ ಪಡೆದುಕೊಳ್ಳುತ್ತಾರೆ. ನಾಯಕ ನಟರು ಶೇರ್ ಪಡೆದುಕೊಳ್ಳುವ ಅಭ್ಯಾಸ ಇತ್ತೀಚೆಗೆ ಹೆಚ್ಚಾಗುತ್ತಿದೆ.

'ಕೆಜಿಎಫ್ 2' ಗಳಿಕೆ ಮೇಲೆ ಕಣ್ಣು!
'ಕೆಜಿಎಫ್ ಚಾಪ್ಟರ್ 1' ದುಪ್ಪಟ್ಟು ಗಳಿಕೆ ಮಾಡಿ ದಾಖಲೆ ಬರೆದಿದೆ. ಈ ಚಿತ್ರದಲ್ಲು ನಟ ಯಶ್‌ಗೆ ಉತ್ತಮ ಶೇರ್ ಹೋಗಿರುತ್ತದೆ. ಚಿತ್ರತಂಡದ ಅಧಿಕೃತ ಹೇಳಿಕೆ ಪ್ರಕಾರ ಕೆಜಿಎಫ್ 1, 250 ಕೋಟಿ ಕಲೆ ಹಾಕಿದೆ. 80 ಕೋಟಿ ರೂ ವೆಚ್ಚದಲ್ಲಿ ತಯಾರಾದ ಚಿತ್ರ 200 ಕೋಟಿಗೂ ಅಧಿಕ ಮೊತ್ತ ಕಲೆಹಾಕಿದೆ. ಇನ್ನು ಕೆಜಿಎಫ್ 2, 100 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ. ಹಾಗಾಗಿ ಚಿತ್ರದ ಗಳಿಕೆ ಯಾವ ಮಟ್ಟಿಗೆ ಇರಬಹುದು ಎನ್ನುವ ಕುತೂಹಲ ಇದೆ.

ಸದ್ಯ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿ!
ಇದೇ ಏಪ್ರಿಲ್ 14ಕ್ಕೆ ಕೆಜಿಎಫ್ ಸಿನಿಮಾ ರಿಲೀಸ್ ಆಗತ್ತಿದೆ. ಹಾಗಾಗಿ ಚಿತ್ರತಂಡ ಸದ್ಯ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದೆ. ದೆಹಲಿಯಿಂದ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಲಾಗಿದೆ. ಚಿತ್ರದ ಬಗ್ಗೆ ಇನ್ನು ಮುಂಬೈ, ಕೊಚ್ಚಿ, ತಮಿಳು ನಾಡು, ಆಂಧ್ರ-ತೆಲಂಗಾಣ ಸೇರಿದಂತೆ, ಕರ್ನಾಟಕದಲ್ಲೂ ಚಿತ್ರದ ಪ್ರಚಾರವನ್ನು ಕೈಗೊಂಡಿದೆ ಚಿತ್ರತಂಡ. ಕೆಜಿಎಫ್ ಅಭಿಮಾನಿಗಳು ಚಿತ್ರಮಂದಿರದಲ್ಲಿ ಸಿನಿಮಾ ಕಣ್ತುಂಬಿಕೊಳ್ಳಲು ದಿನಗಳನ್ನು ಲೆಕ್ಕಾ ಹಾಕುತ್ತಿದ್ದಾರೆ.


Click it and Unblock the Notifications











