twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರು ಚಿತ್ರೋತ್ಸವ ವೇದಿಕೆಯಲ್ಲಿ ಸಿಎಂ ಬಳಿ ಬೇಡಿಕೆ ಇಟ್ಟ ನಟ ಯಶ್

    |

    12ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರು ಚಿತ್ರೋತ್ಸವವನ್ನು ಉದ್ಘಾಟಿಸಿ ಶುಭಕೋರಿದ್ದಾರೆ.

    Recommended Video

    ಸಿಎಂ ಬಳಿ ಯಶ್ ಇಟ್ಟ ವಿಶೇಷ ಬೇಡಿಕೆ ಏನು ? | Yash | Yediyurappa | Film Festival

    ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ, ಬಾಲಿವುಡ್ ಗಾಯಕ ಸೋನು ನಿಗಮ್, ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್, ಕನ್ನಡದ ನಟ ಯಶ್, ಹಾಗೂ ಹಿರಿಯ ನಟಿ ಜಯಪ್ರದ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

    ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಿದ ಸಿಎಂ ಯಡಿಯೂರಪ್ಪಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ

    ಈ ಸಮಯದಲ್ಲಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಸಿಎಂ ಯಡಿಯೂರಪ್ಪ ಬಳಿ ಒಂದು ಮನವಿ ಮಾಡಿಕೊಂಡರು. ನಿಮ್ಮನ್ನು ಏನು ಕೇಳುವುದಿಲ್ಲ ನಮಗೆ ಒಂದು ಸ್ಟುಡಿಯೋ ನಿರ್ಮಿಸಿ ಕೊಡಿ ಎಂದರು.

    Yash Request To CM Yeddyurappa For Built A Studio

    "ಸಿನಿಮಾ ಚಿಕ್ಕವಯಸ್ಸಿನಲ್ಲಿಯೆ ನನ್ನನ್ನು ಆವರಿಸಿಕೊಂಡಿತ್ತು. ಸಿನಿಮಾ ನನಗೆ ಅನ್ನ ಕೊಟ್ಟಿದೆ, ಸಿನಿಮಾ ನನಗೆ ಸ್ಫೂರ್ತಿ ಕೊಟ್ಟಿದೆ. ಸಮಾಜದಲ್ಲಿ ಒಂದು ಸ್ಥಾನ ಕೊಟ್ಟಿದೆ, ಅಂತ ಸಿನಿಮಾವನ್ನು ಎಲ್ಲರು ಸೆಲೆಬ್ರೇಟ್ ಮಾಡೋಣ. ಮುಖ್ಯ ಮಂತ್ರಿಗಳಿಗೆ ನನ್ನದೊಂದು ಮನವಿ. ದೊಡ್ಡ ಕನಸಿದೆ ನಮಗೆ ಸ್ಟುಡಿಯೋ ಕಟ್ಟಿಸಿ ಕೊಡಿ. ಅಲ್ಲಿ ಇಲ್ಲಿ, ಅಷ್ಟು ಎಕರೆ ಇಷ್ಟು ಎಕರೆ ಎನ್ನುತ್ತ ಹೋಗುತ್ತನೆ ಇದೆ" ಎಂದರು.

    "ನಾವು ಬೇರೆ ಊರಿಗೆ ಹೋಗಿ ಕೆಲಸ ಮಾಡಬೇಕು. ಅದ್ಯಾವುದೊ ಸಿಸ್ಟಮ್ ಗೆ ಹೊಂದಿಕೊಳ್ಳಬೇಕು. ಇಲ್ಲೆ ಸ್ಟುಡಿಯೋ ಕೊಡಿ ನಮಗೆ. ಟ್ಯಾಕ್ಸ್ ರೂಪದಲ್ಲಿ ಎಷ್ಟೋ ಪಾವಾಸ್ ಕೊಡುತ್ತಿವಿ ನಿಮಗೆ. ಇದರಿಂದ ಇಡೀ ಉದ್ಯಮ ಬೆಳೆಯುತ್ತೆ. 70ರ ದಶಕದಲ್ಲಿ ಕನ್ನಡ ಚಿತ್ರದಲ್ಲಿ ಒಂದು ಯುಗ ಅಂತ ಹೇಳಿದ್ರಲ್ಲ, ಹಾಗೆ ಕೆಲಸ ಮಾಡುವಂತ ಹುಡುಗರು ಇಲ್ಲೂ ಇದ್ದಾರೆ. ಅವರಿಗೆ ಶಕ್ತಿ ತುಂಬ ಬೇಕು" ಎಂದು ಹೇಳಿದ್ದರು.

    Yash Request To CM Yeddyurappa For Built A Studio

    "ಅಂದು ಚೆನ್ನೈ ಸಿನಿಮಾ ಕೆಲಸಗಳು ನಡಿಯುತ್ತಿತ್ತು. ಅಲ್ಲಗೆ ಹೋಗಿ ಎಲ್ಲರು ಕೆಲಸ ಮಾಡಿ ಕಲಿಯುತ್ತಿದ್ದರು. ಈಗ ಎಲ್ಲರು ಏಕಲವ್ಯ ಆಗಿದ್ದಾರೆ. ಎಲ್ಲೋ ನೋಡಿ ಕಲಿತು ಬೇರೆಯವರ ಜೊತೆ ಸ್ಪರ್ಧೆ ಮಾಡುತ್ತೀವಿ. ಅವರಿಗೆ ಸ್ವಲ್ಪ ಶಕ್ತಿ ಕೊಡಿ. ಇನ್ಸ್ಟಿಟ್ಯೂಷನ್, ಎಜುಕೇಶನ್ ಕೊಡಿ. ಆಗ ಕನ್ನಡಿಗರು ಸಿನಿಮಾರಂಗ ಆಳುತ್ತಾರೆ. ಇದು ನನ್ನ ಮನವಿ" ಎಂದರು.

    ಫೆಬ್ರವರಿ 26 ರಿಂದ ಮಾರ್ಚ್ 4ರ ವರೆಗೂ ಸುಮಾರು 200 ಚಿತ್ರಗಳು ಪ್ರದರ್ಶನವಾಗಲಿದೆ. ಒರೆಯಾನ್ ಮಾಲ್, ನವರಂಗ್ ಚಿತ್ರಮಂದಿರ, ಕಲಾವಿದರ ಸಂಘದ ರಾಜ್ ಕುಮಾರ್ ಭವನ, ಸುಚಿತ್ರ ಫಿಲಂ ಸಿಟಿಯಲ್ಲಿ ಸಿನಿಮಾಗಳು ಪ್ರದರ್ಶನವಾಗಲಿದೆ.

    English summary
    Kannada Actor Yash request to CM Yeddyurappa for built a studio. Yash speech in 12th Bangalore International Film Festival inaugurate function.
    Thursday, February 27, 2020, 8:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X