ತೆಲುಗು ಸಿನಿಮಾ ಪ್ರೇಕ್ಷಕರಿಗೆ ಮನವಿ ಮಾಡಿದ ರಾಕಿಂಗ್ ಸ್ಟಾರ್ ಯಶ್
ನಟ ಯಶ್ ಕರ್ನಾಟಕದಲ್ಲಿ ಮಾತ್ರವಲ್ಲ, ಹಲವಾರು ರಾಜ್ಯಗಳಲ್ಲಿ ಚಿರಪರಿಚಿತರು. ಆಂಧ್ರ, ತೆಲಂಗಾಣ, ತಮಿಳುನಾಡು, ಮುಂಬೈ, ಕೇರಳಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ ನಟ ಯಶ್.
ಯಶ್ ಅವರ ಕೆಜಿಎಫ್ ಸಿನಿಮಾ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿ ಆಯಾ ಭಾಷೆಗಳಲ್ಲಿ ಭರ್ಜರಿ ಹಿಟ್ ಎನಿಸಿಕೊಂಡಿತ್ತು. ಯಶ್ ಗೆ ಬಹುಸಂಖ್ಯೆಯ ಅಭಿಮಾನಿಗಳನ್ನು ಸೃಷ್ಟಿಸಿಕೊಟ್ಟಿತ್ತು.
ಇದೀಗ ಕೆಜಿಎಫ್ 2 ಸಿನಿಮಾ ಬಿಡುಗಡೆ ಆಗುವ ಸಮಯ ಹತ್ತಿರ ಬಂದಿದೆ. ಈ ಸಮಯದಲ್ಲಿ ನಟ ಯಶ್ ತಮ್ಮ ತೆಲುಗು ಭಾಷಿಕ ಅಭಿಮಾನಿಗಳಿಗೆ, ಸಿನಿ ಪ್ರೇಕ್ಷಕರಿಗೆ ಮನವಿಯೊಂದನ್ನು ಮಾಡಿದ್ದಾರೆ. ಈ ಮನವಿ ಕೆಜಿಎಫ್ ಸಿನಿಮಾ ಕುರಿತಾದ ಮನವಿ ಆಗಿದೆ.

ತೆಲುಗು ಪ್ರೇಕ್ಷಕರಿಗೆ ಯಶ್ ಮನವಿ
ಕೆಜಿಎಫ್ ಸಿನಿಮಾ ಮೊದಲ ಬಾರಿಗೆ ತೆಲುಗು ಭಾಷೆಯಲ್ಲಿ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಕೆಜಿಎಫ್ ಸಿನಿಮಾದ ತೆಲುಗು ಡಬ್ ಸಿನಿಮಾ ಮೊದಲ ಬಾರಿಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಈ ಬಗ್ಗೆಯೇ ಯಶ್ ತೆಲುಗು ಪ್ರೇಕ್ಷಕರಿಗೆ ಮನವಿಯೊಂದನ್ನು ಮಾಡಿದ್ದಾರೆ.

ತೆಲುಗು ಭಾಷೆಯಲ್ಲಿ ಟಿವಿಗೆ ಬಂದ ಕೆಜಿಎಫ್ ಚಾಪ್ಟರ್ 1
ತೆಲುಗು ಪ್ರೇಕ್ಷಕರಿಗೆ ಅವರದ್ದೇ ಭಾಷೆಯಲ್ಲಿ ಮನವಿ ಮಾಡಿರುವ ಯಶ್, ಈ ಭಾನುವಾರ ನನ್ನ ಅಭಿನಯದ ಕೆಜಿಎಫ್ ಚಾಪ್ಟರ್ 1 ಸಿನಿಮಾ ಸ್ಟಾರ್ ಮಾ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದೆ. ಎಲ್ಲರೂ ಮನೆಯಲ್ಲೇ ಇದ್ದು ನೋಡಿ ಆನಂದಿಸಿ, ಅದ್ಭುತವಾಗಿರುತ್ತದೆ' ಎಂದಿದ್ದಾರೆ ಯಶ್.

ಸಿನಿಮಾವನ್ನು ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದ: ಯಶ್
ಇದಕ್ಕೂ ಮುನ್ನಾ ಕೆಜಿಎಫ್ ಚಾಪ್ಟರ್ 1 ಅನ್ನು ಅಷ್ಟು ದೊಡ್ಡ ಯಶಸ್ವೀ ಸಿನಿಮಾ ಆಗಿಸಿದ್ದಕ್ಕೆ ತೆಲುಗು ಪ್ರೇಕ್ಷಕರಿಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ ನಟ ಯಶ್.

ಕೆಲವು ಭಾಗದ ಚಿತ್ರೀಕರಣ ಬಾಕಿ
ಕೆಜಿಎಫ್ 2 ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು, ಕೆಲವು ಭಾಗಗಳ ಚಿತ್ರೀಕರಣವಷ್ಟೆ ಭಾಕಿ ಇದೆ. ಕೆಜಿಎಫ್ 2 ಸಿನಿಮಾವು ಅಕ್ಟೋಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಕೆಜಿಎಫ್ 2 ನಲ್ಲಿ ಸಂಜಯ್ ದತ್ ಮತ್ತು ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











