ಫ್ಯಾನ್ಸ್ ವಾರ್ ಮಾಡುವವರಿಗೆ ಯಶ್ ಖಡಕ್ ವಾರ್ನಿಂಗ್
Recommended Video

ಕನ್ನಡ ಸಿನಿಮಾರಂಗದಲ್ಲಿ ಫಾನ್ಸ್ ವಾರ್ ಆಗಾಗ ಆಗುತ್ತಲೇ ಇರುತ್ತವೆ. ಸ್ಟಾರ್ ಗಳೇ ಯಾವುದೇ ಗಲಾಟೆ ಮಾಡಿಕೊಳ್ಳದೆ ಖುಷಿಯಾಗಿರುತ್ತಾರೆ ಆದರೆ ಅಭಿಮಾನಿಗಳು ಮಾತ್ರ ಇದು ಸರಿ ಅಲ್ಲ ಅದು ಸರಿ ಅಲ್ಲ ಕೊಂಕು ತೆಗೆಯುತ್ತಲೇ ಇರುತ್ತಾರೆ.
ಸದ್ಯ ಗಾಂಧಿನಗರದಲ್ಲಿ ಯಶ್ ಹಾಗೂ ಸುದೀಪ್ ಫ್ಯಾನ್ಸ್ ಯಶ್ ಕ್ಷಮೆ ಕೇಳಬೇಕು, ಸುದೀಪ್ ಕ್ಷಮೆ ಕೇಳಬೇಕು ಅಂತ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಜಿದ್ದಿಗೆ ಬಿದ್ದು ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಇದನ್ನ ನೋಡಿದ ಸುದೀಪ್ ತಮ್ಮ ಅಭಿಮಾನಿಗಳಿಗೆ ಈ ರೀತಿ ಮಾಡುವುದು ಸರಿಯಲ್ಲ. ನಾವು ಚೆನ್ನಾಗಿದ್ದೇವೆ ಎಂದು ತಿಳಿಸಿದ್ದರು. ಅದಕ್ಕೆ ಗೌರವ ಕೊಟ್ಟು ಕಿಚ್ಚನ ಅಭಿಮಾನಿಗಳು ತಮ್ಮ ಪೋಸ್ಟ್ ಗಳನ್ನ ಡಿಲೀಟ್ ಮಾಡಿದರು.
ಆದರೆ ಯಶ್ ಅಭಿಮಾನಿಗಳು ಅದನ್ನೇ ಅಡ್ವಾಂಟೆಜ್ ಆಗಿ ಬಳಸಿಕೊಂಡು ಸುದೀಪ್ ಅಭಿಮಾನಿಗಳಿಗೆ ಟ್ರೋಲ್ ಮಾಡಲು ಶುರು ಮಾಡಿಕೊಂಡಿದ್ರು. ಇದನ್ನ ಗಮನಿಸಿದ ರಾಕಿಂಗ್ ಸ್ಟಾರ್ ಇದು ಸರಿಯಲ್ಲ ಎಂದು ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ. ಹಾಗಾದ್ರೆ ಯಶ್ ಅಭಿಮಾನಿಗಳಿಗೆ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಬೆಳವಣಿಗೆ ಒಳ್ಳೆಯದಲ್ಲ ಎಂದ ಯಶ್
ಎಲ್ಲಾರಿಗೂ ನಮಸ್ಕಾರ. ಸಾಮಾಜಿಕ ಜಾಲತಾಣದಲ್ಲಿ ಈಗ ನಡೆಯುತ್ತಿರೋ ಬೆಳವಣಿಗೆ ಒಳ್ಳೆಯದಲ್ಲ. ಕೆಲವು ಕಮೆಂಟ್ಸ್ ಗಳನ್ನೂ ನಾನು ಗಮನಿಸಿದ್ದೇನೆ. ಸುದೀಪ್ ಅವರು ನನಗಿಂತ ಹಿರಿಯರು.ಅವರಿಗೆ ಗೌರವ ಕೊಡಲಿಲ್ಲ ಅಂದ್ರೆ, ನನಗೂ ನೀವು ಗೌರವ ಕೊಡದಂತೆಯೇ. ಘನತೆಯಿಂದ ವರ್ತಿಸಿ, ಇದನ್ನ ದೊಡ್ಡದು ಮಾಡ್ಬೇಡಿ.

ಸುದೀಪ್ ಅವರ ಮೇಲೆ ಗೌರವವಿದೆ
ನಾನು ಸಾರ್ ಅಂತ ಕರೆದರೆ ಮಾತ್ರ ಅವರಿಗೆ ಗೌರವ ಕೊಟ್ಟ ಹಾಗಲ್ಲ. ಅಥವಾ ನಾನು ಸಾರ್ ಅಂತ ಕರೆಯದೇ ಇದ್ರೂ ಅವರ ಮೇಲಿನ ಗೌರವ ಕಮ್ಮಿಯಾಗಲ್ಲ. ನಾನು ಅವರನ್ನ ತುಂಬಾ ಗೌರವಿಸ್ತೀನಿ. ನನ್ನ ಮೇಲಿನ ಅಭಿಮಾನ ತೋರಿಸಿಕೊಳ್ಳುವುದಕ್ಕಾಗಿ ಅವ್ರನ್ನ ಅಗೌರವದಿಂದ ಕಾಣೋದು ಸರಿಯಲ್ಲ. ದಯವಿಟ್ಟು ಇದನ್ನ ಇಲ್ಲಿಗೆ ಬಿಡಿ.

ಫ್ಯಾನ್ಸ್ ವಾರ್ ಯಾಕೆ ?
ಕಿಚ್ಚ ಸುದೀಪ್ ಯಶ್ ಅವರಿಗೆ ಹಮ್ ಫಿಟ್ ಥೋ ಇಂಡಿಯಾ ಫಿಟ್ ಅಭಿಯಾನದ ಚಾಲೆಂಜ್ ಹಾಕಿದ್ದರು ಅದರಂತೆಯೇ ಯಶ್ ಅವರ ಸ್ನೇಹಿತನಿಂದ ಆ ಚಾಲೆಂಜ್ ಅನ್ನು ಮಾಡಿಸಿದ್ದರು. ಅದರಲ್ಲಿ ಸುದೀಪ್ ಎಂದು ಕರೆದಿದ್ದು ತಪ್ಪು ಎನ್ನುವುದು ಕಿಚ್ಚನ ಅಭಿಮಾನಿಗಳ ಮಾತು .

ನಾನು ಯಶ್ ಅವರ ಪರವಾಗಿದ್ದೇವೆ
ಸುದೀಪ್ ಅಭಿಮಾನಿಗಳು ಯಶ್ ಅವರು ಕ್ಷಮೆ ಕೇಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಲು ಶುರು ಮಾಡಿದ ನಂತ್ರ ಯಶ್ ಅಬಿಮಾನಿಗಳು ಕೂಡ ವಿ ಆರ್ ವಿತ್ ಯಶ್ ಎನ್ನುವ ಅಭಿಯಾನ ಆರಂಭ ಮಾಡಿದರು. ಸದ್ಯ ಯಶ್ ಹಾಗೂ ಸುದೀಪ್ ಅವರ ಸೂಚನೆ ಮೇರೆಗೆ ಇಬ್ಬರ ಅಭಿಮಾನಿಗಳು ತಾವು ಮಾಡಿದ್ದ ಪೋಸ್ಟ್ ಗಳನ್ನು ಡಿಲಿಟ್ ಮಾಡಿ ಸುಮ್ಮನಾಗಿದ್ದಾರೆ.


Click it and Unblock the Notifications











