ಕೆಜಿಎಫ್ ಸೆಟ್‌ನಿಂದ ದೊಡ್ಡ ಸಿಗ್ನಲ್ ಕೊಟ್ಟ ರಾಕಿ ಭಾಯ್
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಇಂದಿನಿಂದ ಮತ್ತೊಂದು ಹಂತದ ಚಿತ್ರೀಕರಣ ಆರಂಭಿಸಿದೆ. ಕೊರೊನಾ ವೈರಸ್ ಕಾರಣದಿಂದ ಶೂಟಿಂಗ್‌ಗೆ ಬ್ರೇಕ್ ಹಾಕಿದ್ದ ಚಿತ್ರತಂಡ ಕಳೆದ ತಿಂಗಳು ಬೆಂಗಳೂರಿನಲ್ಲಿ ಚಿತ್ರೀಕರಣ ಪುನರಾರಂಭಿಸಿತ್ತು.
ಇದೀಗ, ಬೆಂಗಳೂರಿನಿಂದ ಮಂಗಳೂರಿಗೆ ಶೂಟಿಂಗ್ ಸ್ಥಳಾಂತರ ಮಾಡಿದೆ. ವಿಶೇಷ ಅಂದ್ರೆ ಇಂದಿನಿಂದ ಚಿತ್ರೀಕರಣದಲ್ಲಿ ರಾಕಿ ಭಾಯ್ ಪಾಲ್ಗೊಂಡಿದ್ದಾರೆ. ಯಶ್ ಜೊತೆ ನಾಯಕಿ ಶ್ರಿನಿಧಿ ಶೆಟ್ಟಿ ಸಹ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.
ಯಶ್ ಚಿತ್ರೀಕರಣದಲ್ಲಿ ಭಾಗಿಯಾದ ನಂತರ ಫೇಸ್‌ಬುಕ್‌ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು ದೊಡ್ಡ ಸಿಗ್ನಲ್ ಕೊಟ್ಟಿದ್ದಾರೆ. ''ಸಮುದ್ರದ ಅಲೆಗಳನ್ನು ನಿಲ್ಲಿಸಲಾಗುವುದಿಲ್ಲ ಆದರೆ ನೌಕಾಯಾನ ಮಾಡಲು ನೀವು ಕಲಿಯಬಹುದು .. ದೀರ್ಘ ವಿರಾಮದ ನಂತರ ರಾಕಿ ಇಂದಿನಿಂದ ನೌಕಾಯಾನ ಶುರು ಮಾಡಲಿದ್ದಾನೆ'' ಎಂದು ಕ್ಯಾಪ್ಷನ್ ಹಾಕಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ ಸಂಜಯ್ ದತ್ ಸಹ ಕೆಜಿಎಫ್ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದ್ರೆ, ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ದತ್, ಶೂಟಿಂಗ್ ಮಾಡಲು ಸಾಧ್ಯವಾಗಲಿಲ್ಲ.
ಇದೀಗ, ಸಂಜಯ್ ದತ್ ಇಲ್ಲದೇ ಕೆಜಿಎಫ್ ಶೂಟಿಂಗ್ ಪ್ರಾರಂಭಿಸಿದೆ. ಸದ್ಯಕ್ಕೆ ದತ್ ಲಭ್ಯತೆ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸಂಜು ಬಾಬು ಚೇತರಿಕೆ ಕಂಡ ಮೇಲೆ ಶೂಟಿಂಗ್ ಮಾಡಬಹುದು ಅಥವಾ ಮುಂದೆ ಏನು ಎನ್ನುವುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಬಹುದು.


Click it and Unblock the Notifications











