For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕರಿಂದ ಪಡೆದ ಹಣವನ್ನು ಬಡ್ಡಿ ಸಮೇತ ವಾಪಸ್ ನೀಡಿದ ಯಶ್

  |

  ನಟ ಯಶ್‌ ಈಗ ಪ್ಯಾನ್ ಇಂಡಿಯಾ ಸ್ಟಾರ್. ಯಶ್ ಸಿನಿಮಾ ಆಯ್ಕೆ ಸಹ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿಯೇ ಇದೆ. ತಮ್ಮ ಈಗಿನ ಇಮೇಜ್‌ಗೆ ಸೂಟ್‌ ಆಗುವಂಥಹಾ ಚಿತ್ರಗಳನ್ನಷ್ಟೆ ಒಪ್ಪಿಕೊಳ್ಳಲು ಯಶ್ ನಿರ್ಧರಿಸಿದ್ದಾರೆ.

  ಕಿರಾತಕ 2 ಸಿನಿಮಾ ಮಾಡಲ್ಲ, ನಿಮ್ಮ ದುಡ್ಡು ವಾಪಾಸ್ ತಗೋಳಿ ಎಂದ ಯಶ್

  'ಕೆಜಿಎಫ್' ಸಿನಿಮಾದಿಂದ ಯಶ್‌ಗೆ ಬಹುದೊಡ್ಡ ಖ್ಯಾತಿ ಬಂದಿದೆ. ಕೆಜಿಎಫ್ ಬಿಡುಗಡೆ ಆಗುವುದಕ್ಕೆ ಮೊದಲು ಯಶ್ 'ಕಿರಾತಕ 2' ಹೆಸರಿನ ಸಿನಿಮಾ ಒಪ್ಪಿಕೊಂಡಿದ್ದರು. ಸಿನಿಮಾದ ಫೋಟೊಶೂಟ್ ಆಗಿ, ಕೆಲವು ದಿನಗಳ ಚಿತ್ರೀಕರಣವೂ ಆಗಿತ್ತು. ಆದರೆ ಆ ವೇಳೆಗೆ 'ಕೆಜಿಎಫ್' ಸಿನಿಮಾ ಬಿಡುಗಡೆ ಆಗಿ ಯಶ್‌ ತಾರಾಮೌಲ್ಯ ದುಪ್ಪಟ್ಟಾಗಿಬಿಟ್ಟಿತು.

  ಯಶ್ ಇಮೇಜು ಆಕಾಶ ಮುಟ್ಟಿದ ಕಾರಣ ಆ ಇಮೇಜಿಗೆ ಹೊಂದಿಕೆಯಾಗುವ ಸಿನಿಮಾಗಳಲ್ಲಿ ಮಾತ್ರವೇ ನಟಿಸಲು ನಿರ್ಧರಿಸಿ, ಚಿತ್ರೀಕರಣ ಆರಂಭವಾಗಿದ್ದ 'ಕಿರಾತಕ 2' ಸಿನಿಮಾದ ಚಿತ್ರೀಕರಣದಿಂದ ಯಶ್ ಹಿಂದೆ ಸರಿದರು. ನಂತರ 'ಕೆಜಿಎಫ್ 2' ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

  ಆದರೆ 'ಕಿರಾತಕ 2' ಸಿನಿಮಾದ ಮೇಲೆ ಬಂಡವಾಳ ಹೂಡಿದ್ದ ನಿರ್ಮಾಪಕ ಜಯಣ್ಣಗೆ ಭಾರಿ ನಷ್ಟವಾಗಿತ್ತು. 'ಕಿರಾತಕ 2' ಸಿನಿಮಾದ ಚಿತ್ರೀಕರಣಕ್ಕೆ ಈಗಾಗಲೇ ಜಯಣ್ಣ ಹಣ ತೊಡಗಿಸಿದ್ದರು. ಇದರಲ್ಲಿ ಯಶ್‌ಗೆ ನೀಡಿದ್ದ ಅಡ್ವಾನ್ಸ್ ಹಣವೂ ಸೇರಿತ್ತು. ಹಣವನ್ನು ವಾಪಸ್ ಮಾಡುವಂತೆ ಯಶ್‌ ಅವರಲ್ಲಿ ಜಯಣ್ಣ ಕೇಳಿದ್ದರು.

  ದೊಡ್ಡ ಮೊತ್ತದ ಹಣ ವಾಪಸ್ ಮಾಡಿದ ಯಶ್

  ದೊಡ್ಡ ಮೊತ್ತದ ಹಣ ವಾಪಸ್ ಮಾಡಿದ ಯಶ್

  ಇದೀಗ ಯಶ್‌ ಜಯಣ್ಣ ಅವರ ಎಲ್ಲ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸಿದ್ದಾರೆ. 'ಕಿರಾತಕ 2' ಸಿನಿಮಾಕ್ಕೆ ಜಯಣ್ಣ ಖರ್ಚು ಮಾಡಿದ್ದ ಒಟ್ಟು ಹಣ ಹಾಗೂ ತಮಗೆ ನೀಡಲಾಗಿದ್ದ ಅಡ್ವಾನ್ಸ್ ಹಣ ಎಲ್ಲಕ್ಕೆ ಶೇ 3% ಬಡ್ಡಿ ಕೂಡಿಸಿ ಒಟ್ಟು 13 ಕೋಟಿ ಹಣವನ್ನು ಯಶ್ ವಾಪಸ್‌ ನೀಡಿದ್ದಾರೆ ಎನ್ನಲಾಗುತ್ತಿದೆ. ಶೂಟಿಂಗ್‌ಗೆ ಮಾತ್ರವೇ 3 ಕೋಟಿ ಹಣವನ್ನು ಜಯಣ್ಣ ಖರ್ಚು ಮಾಡಿದ್ದರು.

  ಸಿನಿಮಾ ನಿಂತಿಲ್ಲ ಎಂದಿದ್ದ ಯಶ್

  ಸಿನಿಮಾ ನಿಂತಿಲ್ಲ ಎಂದಿದ್ದ ಯಶ್

  ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಯಶ್, ''ಕಿರಾತಕ 2 ಸಿನಿಮಾ ನಿಲ್ಲಿಸಲ್ಲ. ಈ ಚಿತ್ರವನ್ನ ಮಾಡ್ತೀವಿ ಎಂದು ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟನೆ ನೀಡಿದ್ದಾರೆ. ಕೆಜಿಎಫ್ ಚಿತ್ರದ ಸಕ್ಸಸ್ ಮೀಟ್ ನಲ್ಲಿ ಮಾತನಾಡಿದ ಯಶ್ 'ಕಿರಾತಕ 2' ಆಗುತ್ತೆ, ತಾಂತ್ರಿಕವಾಗಿ ಸ್ವಲ್ಪ ಸಮಸ್ಯೆ ಇರೋದ್ರಿಂದ ಒಂದು ಬ್ರೇಕ್ ಕೊಟ್ಟಿದ್ದೀವಿ, ಮಾಡ್ತೀವಿ ಕಿರಾತಕ 2 ಚಿತ್ರಕ್ಕೆ ಗಡ್ಡ ಬೇಕಾಗಿಲ್ಲ. ಕೆಜಿಎಫ್ 2 ಚಿತ್ರಕ್ಕೆ ಗಡ್ಡ ಬೇಕಾಗಿದೆ. ಈಗ ಮೊದಲು ಕೆಜಿಎಫ್ ಮಾಡೋದಾ ಅಥವಾ ಕಿರಾತಕ ಮಾಡೋದಾ ಎಂಬ ಗೊಂದಲದಲ್ಲಿದ್ದೇವೆ. ಎಲ್ಲರೂ ನಮ್ಮವರೇ ಕೂತು ಚರ್ಚೆ ಮಾಡಿ, ಒಂದು ನಿರ್ಧಾರಕ್ಕೆ ಬರ್ತೀವಿ'' ಎಂದಿದ್ದರು. ಆದರೆ ನಂತರ 'ಕಿರಾತಕ 2' ಸಿನಿಮಾದಿಂದ ಹೊರಬಂದರು ಯಶ್.

  ಹೊಸ ಸಿನಿಮಾ ಒಪ್ಪಿಕೊಂಡಿರಬಹುದಾ?

  ಹೊಸ ಸಿನಿಮಾ ಒಪ್ಪಿಕೊಂಡಿರಬಹುದಾ?

  'ಕೆಜಿಎಫ್; ಚಾಪ್ಟರ್ 1' ಸಿನಿಮಾವು 2018 ರಲ್ಲಿ ಬಿಡುಗಡೆ ಆಗಿತ್ತು. ಅದಾದ ಬಳಿಕ 'ಕೆಜಿಎಫ್ 2' ಬಿಟ್ಟರೆ ಇನ್ನಾವ ಸಿನಿಮಾದಲ್ಲಿಯೂ ಯಶ್ ನಟಿಸಿಲ್ಲ. ಈ ನಡುವೆ ಎರಡು ಜಾಹೀರಾತಿನಲ್ಲಷ್ಟೆ ಯಶ್ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ ಭಾರಿ ದುಬಾರಿ ಮನೆಯೊಂದನ್ನು ಸಹ ಯಶ್ ಖರೀದಿ ಮಾಡಿದ್ದಾರೆ. ಹೀಗೆಲ್ಲ ಇರುವಾಗ ಒಮ್ಮೆಗೆ 13 ಕೋಟಿ ಹಣವನ್ನು ಹೇಗೆ ಹೊಂದಿಸಿದರು ಯಶ್? ಹೊಸ ಸಿನಿಮಾ ಒಪ್ಪಿಕೊಂಡು ಅದರ ಹಣ ಜಯಣ್ಣಗೆ ನೀಡಿರಬಹುದಾ? ಎಂಬ ಲೆಕ್ಕಾಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಏಪ್ರಿಲ್ 14 ರಂದು ಸಿನಿಮಾ ಬಿಡುಗಡೆ ಆಗಲಿದೆ

  ಏಪ್ರಿಲ್ 14 ರಂದು ಸಿನಿಮಾ ಬಿಡುಗಡೆ ಆಗಲಿದೆ

  ಯಶ್ ನಟಿಸಿರುವ 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಈವೇಳೆಗಾಗಲೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಇದೆ. 2022ರ ಏಪ್ರಿಲ್ 14 ರಂದು ಸಿನಿಮಾ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ಘೋಷಿಸಿದೆ. 'ಕೆಜಿಎಫ್' ಸಿನಿಮಾದ ಮುಂದುವರೆದ ಭಾಗವಾಗಿರುವ 'ಕೆಜಿಎಫ್ 2' ಸಿನಿಮಾದಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ರವೀನಾ ಟಂಡನ್, ಪ್ರಕಾಶ್ ರೈ ಸಹ ಇದ್ದಾರೆ. ಸಿನಿಮಾವನ್ನು ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.

  English summary
  Actor Yash returned the expense of Kirataka 2 shoot and His remuneration advance to Jayanna Films with 13% interest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X