'ಕಿರಾತಕ-2' ಬಗ್ಗೆ ಹರಿದಾಡ್ತಿರುವ ಸುದ್ದಿಗೆ ಬ್ರೇಕ್ ಹಾಕಿದ ಯಶ್
Recommended Video

'ಕೆಜಿಎಫ್ ಚಾಪ್ಟರ್-1' ಮುಗಿಸಿ 'ಕಿರಾತಕ-2' ಸಿನಿಮಾ ಆರಂಭಿಸಿದ್ದ ರಾಕಿಂಗ್ ಸ್ಟಾರ್ ಯಶ್ ಮತ್ತೆ ಕಿರಾತಕನಿಗೆ ಬ್ರೇಕ್ ಹಾಕಿದ್ದರು. ಕೆಜಿಎಫ್ ಪ್ರಚಾರದಲ್ಲಿ ತೊಡಗಿಕೊಂಡ ಯಶ್ ಕಿರಾತಕ ಶೂಟಿಂಗ್ ನಿಲ್ಲಿಸಿದ್ದರು.
ಇದೀಗ, ಕೆಜಿಎಫ್ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಇದರ ಬೆನ್ನಲ್ಲೆ ಕೆಜಿಎಫ್ ಚಾಪ್ಟರ್ 2ಗೆ ಬೇಡಿಕೆ ಹೆಚ್ಚಿದ್ದು, ಮೊದಲು ಚಾಪ್ಟರ್ 2 ಆರಂಭಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಕೆಜಿಎಫ್ ನಂತರ ಯಶ್ ಅವರ ಇಮೇಜ್ ಬದಲಾಗಿದೆ. ನ್ಯಾಷನಲ್ ಸ್ಟಾರ್ ಆಗಿರುವ ರಾಜಾಹುಲಿ ಮತ್ತೆ ಹಳ್ಳಿ ಸಿನಿಮಾ ಮಾಡಿದ್ರೆ ಚೆನ್ನಾಗಿರಲ್ಲ ಎಂಬ ಮಾತು ಚರ್ಚೆಯಾಗ್ತಿದೆ. ಇದನ್ನ ನೋಡಿ ಬಹುಶಃ ಕಿರಾತಕ 2 ಚಿತ್ರ ನಿಂತು ಹೋಗಿರಬಹುದು ಎಂಬ ಅನುಮಾನ ಕಾಡ್ತಿತ್ತು. ಬಟ್, ಈ ಸುದ್ದಿಗೆ ಸ್ವತಃ ಯಶ್ ಅವರೇ ಸ್ಪಷ್ಟನೆ ನೀಡಿದ್ದಾರೆ.

'ಕಿರಾತಕ-2' ನಿಂತಿಲ್ಲ
ಕಿರಾತಕ 2 ಸಿನಿಮಾ ನಿಲ್ಲಿಸಲ್ಲ. ಈ ಚಿತ್ರವನ್ನ ಮಾಡ್ತೀವಿ ಎಂದು ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟನೆ ನೀಡಿದ್ದಾರೆ. ಕೆಜಿಎಫ್ ಚಿತ್ರದ ಸಕ್ಸಸ್ ಮೀಟ್ ನಲ್ಲಿ ಮಾತನಾಡಿದ ಯಶ್ ''ಕಿರಾತಕ 2 ಆಗುತ್ತೆ, ತಾಂತ್ರಿಕವಾಗಿ ಸ್ವಲ್ಪ ಸಮಸ್ಯೆ ಇರೋದ್ರಿಂದ ಒಂದು ಬ್ರೇಕ್ ಕೊಟ್ಟಿದ್ದೀವಿ, ಮಾಡ್ತೀವಿ ಎಂದರು.

'ಕಿರಾತಕ' ಚಿತ್ರಕ್ಕೆ ಎದುರಾದ ಸಮಸ್ಯೆ ಏನು
ಸ್ವತಃ ಯಶ್ ಅವರೇ ಹೇಳುವ ಪ್ರಕಾರ ಕಿರಾತಕ 2 ಚಿತ್ರಕ್ಕೆ ಗಡ್ಡ ಬೇಕಾಗಿಲ್ಲ. ಕೆಜಿಎಫ್ 2 ಚಿತ್ರಕ್ಕೆ ಗಡ್ಡ ಬೇಕಾಗಿದೆ. ಈಗ ಮೊದಲು ಕೆಜಿಎಫ್ ಮಾಡೋದಾ ಅಥವಾ ಕಿರಾತಕ ಮಾಡೋದಾ ಎಂಬ ಗೊಂದಲದಲ್ಲಿದ್ದೇವೆ. ಎಲ್ಲರೂ ನಮ್ಮವರೇ ಕೂತು ಚರ್ಚೆ ಮಾಡಿ, ಒಂದು ನಿರ್ಧಾರಕ್ಕೆ ಬರ್ತೀವಿ.

ಚರ್ಚೆ ಮಾಡ್ತಿದ್ದೀವಿ
'ಕಿರಾತಕ' ಚಿತ್ರವನ್ನ ಜಯಣ್ಣ ನಿರ್ಮಾಣ ಮಾಡ್ತಿದ್ದು, ಅನಿಲ್ ಕುಮಾರ್ ನಿರ್ದೇಶನ ಮಾಡ್ತಿದ್ದಾರೆ. ಕೆಜಿಎಫ್ ಸೀಕ್ವೆಲ್ ಚಿತ್ರವನ್ನ ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ವಿಜಯ್ ಕಿರಗಂದೂರ್ ನಿರ್ಮಾಣ ಮಾಡ್ತಿದ್ದಾರೆ. ಎಲ್ಲರೂ ನಮ್ಮವರೇ, ಕೆಜಿಎಫ್ ಮಾಡೋಕೆ ಇನ್ನು ಟೈಂ ಬೇಕು ಅನ್ನೋದಾರೇ ಕಿರಾತಕ ಮುಗಿಸ್ತೀವಿ, ಒಂದು ಕಡೆ ಕೂತು ಮಾತಾಡ್ತಿದ್ದೀವಿ'' ಎಂದು ಯಶ್ ತಿಳಿಸಿದರು.

'ದಾರಿ ತಪ್ಪಿದ ಮಗ' ಜೊತೆ ಅನಿಲ್
ಮತ್ತೊಂದೆಡೆ ಕಿರಾತಕ ಮಾಡಬೇಕಿದ್ದ ನಿರ್ದೇಶಕ ಅನಿಲ್ ಕುಮಾರ್ ಸೈಲೆಂಟ್ ಆಗಿ ಡಾ ರಾಜ್ ಕುಮಾರ್ ಅವರ ಮೊಮ್ಮಗ, ರಾಮ್ ಕುಮಾರ್ ಅವರ ಮಗ ಅಭಿನಯಿಸಲಿರುವ ದಾರಿ ತಪ್ಪಿದ ಮಗ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಹಾಗ್ನೋಡಿದ್ರೆ, ಈ ಸಿನಿಮಾದ ಬಳಿಕವೇ ಕಿರಾತಕ ಆರಂಭವಾಗುವುದು. ಮತ್ತೊಂದೆಡೆ ಕೆಜಿಎಫ್ ಚಾಪ್ಟರ್ 2 ನಂತರ ಕಿರಾತಕ ಹಣೆ ಬರಹ ನಿರ್ಧಾರವಾಗಲಿದೆ.


Click it and Unblock the Notifications











