Yash: ರಾಕಿ ಭಾಯ್ ಬಟ್ಲರ್ ಇಂಗ್ಲಿಷ್ ರಹಸ್ಯ ಹೇಳಿದ ಯಶ್!

ನಟ ಯಶ್ ಅಭಿನಯದ 'ಕೆಜಿಎಫ್ 2' ಚಿತ್ರ ರಿಲೀಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. 'ಕೆಜಿಎಫ್ 2' ಸಿನಮಾದಲ್ಲಿ ನಟ ಯಶ್ ರಾಕಿ ಭಾಯ್ ಆಗಿ ಅಬ್ಬರಿಸಲಿದ್ದಾರೆ. 'ಕೆಜಿಎಫ್ ಚಾಪ್ಟರ್ 1'ನಲ್ಲಿ ರಾಕಿ ಸಾಮ್ರಾಜ್ಯ ಕಣ್ತುಂಬಿಕೊಂಡ ಪ್ರೇಕ್ಷಕರು 'ಕೆಜಿಎಫ್ 2'ಗಾಗಿ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

ಇಡೀ ಕೆಜಿಎಫ್ ಕಹಾನಿ ನಿಂತಿರುವುದೇ ರಾಕಿ ಭಾಯ್ ಪಾತ್ರದ ಮೇಲೆ. ಈ ಪಾತ್ರ ಹೇಗೆ ಹುಟ್ಟುತ್ತೆ? ಹೇಗೆ ಬೆಳೆಯುತ್ತೆ? ಎನ್ನುವುದನ್ನು 'ಕೆಜಿಎಫ್ 1' ರಲ್ಲಿ ಹೇಳಲಾಗಿದೆ. ಇನ್ನು ಈ ರಾಕಿ ಭಾಯ್ ಪಾತ್ರ ಹೇಗೆ ಆಳುತ್ತೆ? ಮತ್ತು ಹೇಗೆ ಅಂತ್ಯ ಕಾಣುತ್ತದೆ ಎನ್ನುವುದನ್ನು 'ಕೆಜಿಎಫ್ 2' ಒಳಗೊಂಡಿದೆ. ಸದ್ಯ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ರಾಕಿ ಭಾಯ್ ಪಾತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟು ಹಾಕಿದೆ.

ಈ ಪಾತ್ರ 'ಕೆಜಿಎಫ್ 2'ನಲ್ಲಿ ಹೇಗೆ ಇರಲಿದೆ. ಯಾವ ರೀತಿ ನಡೆದುಕೊಳ್ಳಲಿದೆ ಎನ್ನುವ ಬಗ್ಗೆ ಈಗ ಸುಳಿವು ಸಿಕ್ಕಿದೆ. ಈ ಸುಳಿವು ಬಿಟ್ಟು ಕೊಟ್ಟಿದ್ದು ಮತ್ಯಾರೂ ಅಲ್ಲ. ಸ್ವತಃ ರಾಕಿ ಭಾಯ್ ಪಾತ್ರಧಾರಿ ಯಶ್. ಟ್ರೈಲರ್‌ನಲ್ಲಿ ಯಶ್ ಹೊಡೆಯುವ ಡೈಲಾಗ್ ಶೈಲಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

'ಕೆಜಿಎಫ್ 2' ಟ್ರೈಲರ್‌ನಲ್ಲಿ ರಾಕಿ ಬಟ್ಲರ್ ಇಂಗ್ಲಿಷ್!

'ಕೆಜಿಎಫ್ 2' ಟ್ರೈಲರ್‌ನಲ್ಲಿ ರಾಕಿ ಬಟ್ಲರ್ ಇಂಗ್ಲಿಷ್!

ಟ್ರೈಲರ್ ರಿಲೀಸ್ ಸುದ್ದಿ ಗೋಷ್ಠಿಯಲ್ಲಿ ನಟ ಯಶ್‌ಗೆ ಡೈಲಾಗ್ ಬಗ್ಗೆ ಪ್ರಶ್ನೆ ಎದುರಾಗಿದೆ. ಟ್ರೈಲರ್‌ನಲ್ಲಿ ಇಂಗ್ಲಿಷ್ ಡೈಲಾಗ್ ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ. ಜೊತೆಗೆ ಆ ಡೈಲಾಗ್ ಶೈಲಿಯ ಬಗ್ಗೆಯೂ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಯಶ್ "ಆ ಪಾತ್ರ ಕಾರ್ಪೊರೇಷನ್ ಶಾಲೆಯಲ್ಲಿ ಓದಿದ ಪಾತ್ರ, ಕಾನ್ವೆಂಟ್‌ನಲ್ಲಿ ಅಲ್ಲ. ಅದು ಒಂದು ರೀತಿ ಟೀಸ್ ಮಾಡುವ ಹಾಗೆ ಇರುವ ಡೈಲಾಗ್. ಅದಕ್ಕೆ ಬಟ್ಲರ್ ಇಂಗ್ಲಿಷ್ ರೀತಿ ಹೇಳಲಾಗಿದೆ." ಎಂದಿದ್ದಾರೆ. ಈ ಮೂಲಕ 'ಕೆಜಿಎಫ್ 2' ಚಿತ್ರದಲ್ಲಿ ರಾಕಿ ಭಾಯ್ ರಾಷ್ಟ್ರ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಮ್ರಾಜ್ಯವನ್ನು ಬೆಳೆಸುತ್ತಾನೆ ಎನ್ನುವ ಸೂಚನೆ ಸಿಕ್ಕಿದೆ.

ಆರಂಭದಲ್ಲೇ ಇಂಗ್ಲಿಷ್ ಡೈಲಾಗ್ಸ್!

ಆರಂಭದಲ್ಲೇ ಇಂಗ್ಲಿಷ್ ಡೈಲಾಗ್ಸ್!

'ಕೆಜಿಎಫ್ 2' ಚಿತ್ರದ ಟ್ರೈಲರ್‌ನಲ್ಲಿ 1 ನಿಮಿಷ 22 ಸೆಕೆಂಡಿಗೆ ರಾಕಿ ಭಾಯ್ ಎಂಟ್ರಿ ಆಗುತ್ತೆ. ಎಂಟ್ರಿಯ ಮೊದಲ ಡೈಲಾಗ್‌ ಇಂಗ್ಲಿಷ್ನಲ್ಲಿ ಇದೆ. " ವೈಲೆನ್ಸ್... ವೈಲೆನ್ಸ್... ವೈಲೆನ್ಸ್... ಐ ಡೋಂಟ್ ಲೈಕ್ ಇಟ್. ಐ ಆವಾಯ್ಡ್. ವೈಲೆನ್ಸ್ ಲೈಕ್ಸ್ ಮಿ. ಐ ಕಾನ್ಟ್ ಆವಾಯ್ಡ್." ಎನ್ನುವ ಡೈಲಾಗ್ ಇದೆ. ಇದು ಚಿತ್ರದಲ್ಲಿ ಮತ್ತಷ್ಟು ವೈಲೆನ್ಸ್ ಇರಲಿದೆ ಎನ್ನುವುದನ್ನು ಸೂಕ್ಷ್ಮ ಹೇಳಲಾಗಿದೆ. ಈ ಡೈಲಾಗ್ ಯಶ್ ಅಭಿಮಾನಿ ಬಳಗದಲ್ಲಿ ವೈರಲ್ ಆಗಿದೆ.

ಟ್ರೈಲರ್ ಅಂತ್ಯದಲ್ಲೊಂದು ಇಂಗ್ಲಿಷ್ ಡೈಲಾಗ್!

ಟ್ರೈಲರ್ ಅಂತ್ಯದಲ್ಲೊಂದು ಇಂಗ್ಲಿಷ್ ಡೈಲಾಗ್!

ಇನ್ನು ರಾಕಿ ಬಾಯಿ ಮತ್ತೊಂದು ಇಂಗ್ಲಿಷ್ ಡೈಲಾಗ್ ಟ್ರೈಲರ್‌ನ ಕೊನೆಯಲ್ಲಿ ಬರುತ್ತದೆ. "ಬ್ಯುಸಿನೆಸ್ ಮಾಡೋಣಾ? ಆಫರ್ ಕ್ಲೋಸಸ್ ಸೂನ್" ಎಂದು ಡೈಲಾಗ್ ಹೊಡೆಯುತ್ತಾರೆ. ಈ ಡೈಲಾಗನ್ನು ನಟ ಯಶ್ ಖಳನಾಯಕ ಅಧೀರನ ಕೋಟೆಯಲ್ಲಿ ನಿಂತು ಹೇಳುತ್ತಾನೆ. ಅಧೀರನ ಸಂಕೇತವಾದ ಸಿಂಹದ ಲಾಂಛನದ ಮುಂದೆ ನಿಂತು ಗನ್ ಹಿಡಿದು ಈ ಡೈಲಾಗ್ ಹೇಳುತ್ತಾರೆ. ಹಾಗಾಗಿ ಇದು ರಾಕಿ ಭಾಯ್ ಅಧೀರನಿಗೆ ಹೇಳುವ ಡೈಲಾಗ್ ಎನ್ನುವ ಸುಳಿವು ಸಿಕ್ಕಿದೆ.

ಕನ್ನಡದಲ್ಲಿ ಎರಡು ಡೈಲಾಗ್ ಹೊಡೆದ ಯಶ್!

ಕನ್ನಡದಲ್ಲಿ ಎರಡು ಡೈಲಾಗ್ ಹೊಡೆದ ಯಶ್!

ಟ್ರೈಲರ್‌ನಲ್ಲಿ ನಿಯಮಿತ ಡೈಲಾಗ್‌ಗಳು ಇವೆ. ಯಶ್‌ರ ಕೇವಲ ನಾಲ್ಕು ಡೈಲಾಗ್‌ಗಳನ್ನು ಮಾತ್ರ ಟ್ರೈಲರ್‌ನಲ್ಲಿ ಇಡಲಾಗಿದೆ. ಅದರಲ್ಲಿ ಕನ್ನಡದ ಎರಡು ಡೈಲಾಗ್‌ಗಳು ಇದೆ. "ನನಗೆ ಯಾರ ದೋಸ್ತಿನೂ ಬೇಕಾಗಿಲ್ಲ", "ನನ್ ದುಶ್ಮನಿ ಯಾವನೂ ತಡ್ಕಳಲ್ಲ" ಎನ್ನುವ ಡೈಲಾಗ್‌ಗಳಿವೆ. ಒಟ್ಟಾರೆ ಇಡಿ ಟ್ರೈಲರ್‌ ಚಿತ್ರದಲ್ಲಿರುವ ಸಮರದ ಬಗ್ಗೆಯೇ ಹೇಳಿದೆ. ಇನ್ನು ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಆದ ಮೇಲೆ ಪ್ರೇಕ್ಷಕರ ಮನ ಗೆಲ್ಲುತ್ತಾ ನೋಡಬೇಕು.

4

More from Filmibeat

English summary
Yash Reveal the Secret Of Rocky Bhai Butler English In KGF 2, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X