'ಕೆಜಿಎಫ್' ಒನ್ ಲೈನ್ ಕಥೆ ಬಿಚ್ಚಿಟ್ಟ ಯಶ್ ಮತ್ತು ಡೈರೆಕ್ಟರ್

Recommended Video

K.G.F Kannada movie :ಕೆ.ಜಿ.ಎಫ್ ಸಿನಿಮಾದಲ್ಲೂ ತಾಯಿ ಮಗನ ಸೆಂಟಿಮೆಂಟ್ ಇದೆ ಅಂತೆ..! | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಬಿಡುಗಡೆ ನವೆಂಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳಿಗೆ ಶಿಫ್ಟ್ ಆಗಿದೆ. ಕನ್ನಡ, ತಮಿಳು, ತೆಲುಗು, ಸೇರಿದಂತೆ ಐದು ಭಾಷೆಯಲ್ಲಿ 'ಕೆಜಿಎಫ್' ಸಿನಿಮಾ ರಿಲೀಸ್ ಆಗ್ತಿದೆ.

'ಕೆಜಿಎಫ್' ಸಿನಿಮಾದ ಕಥೆ ಏನಿರಬಹುದು ಎಂದು ಚಿತ್ರಪ್ರೇಮಿಗಳು ಕುತೂಹಲದಿಂದ ಕಾಯ್ತಿದ್ದಾರೆ. ಕೆಜಿಎಫ್ ನಲ್ಲಿ ಶೂಟಿಂಗ್ ಆಗ್ತಿರುವುದರಿಂದ ಮತ್ತು ಟೈಟಲ್ ನಲ್ಲೇ ಕೆಜಿಎಫ್ ಇರೋದ್ರಿಂದ ಇದು ಪಕ್ಕಾ ಗೋಲ್ಡ್ ಮೈನಿಂಗ್ ಸುತ್ತ ನಡೆಯುವ ಕಥೆ ಎನ್ನಲಾಗುತ್ತಿದೆ.

ಇನ್ನು ಮೇಕಿಂಗ್ ಮತ್ತು ಪೋಸ್ಟರ್ ಗಳನ್ನ ಗಮನಿಸಿದಾಗ, ಬ್ರಿಟಿಷರ ಕಾಲದಲ್ಲಿ ನಡೆಯುವ ಕಥೆಯಾಗಿದ್ದು, ಜೀತದಾಳು ಪದ್ಧತಿ ಅಥವಾ ಅಡಿಯಾಳುಗಳ ಕಥೆಯನ್ನ ಹೊಂದಿರಬಹುದು ಎಂದು ಗೆಸ್ ಮಾಡ್ತಿದ್ದಾರೆ. ಇದೀಗ, ಸ್ವತಃ ನಿರ್ದೇಶಕ ಮತ್ತು ನಾಯಕ ನಟ ಯಶ್ ಅವರೇ ಕೆಜಿಎಫ್ ಚಿತ್ರದ ಕಥೆಯ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ....

ಯುನಿವರ್ಸಲ್ ಕಥೆ

ಯುನಿವರ್ಸಲ್ ಕಥೆ

ಕೆಜಿಎಫ್ ಸಿನಿಮಾವನ್ನ ಕನ್ನಡದವರು ನೋಡಲು ಕಾರಣವಿದೆ. ಯಾಕಂದ್ರೆ ಇದು ಕನ್ನಡ ಸಿನಿಮಾ, ಇದರಲ್ಲಿ ಅಭಿನಯಿಸಿರುವುದು ಕನ್ನಡ ನಟ ಯಶ್. ಮತ್ತು ಸಿನಿಮಾ ಕಂಪ್ಲೀಟ್ ಚಿತ್ರೀಕರಣ ಆಗಿರುವುದು ಕರ್ನಾಟಕದ ಚಿನ್ನದ ಗಣಿ ಕೆಜಿಎಫ್ ನಲ್ಲಿ. ಆದ್ರೆ, ಪರಭಾಷಿಗರು ಈ ಚಿತ್ರವನ್ನ ಯಾವ ಕಾರಣದಿಂದ ನೋಡ್ತಾರೆ ಎನ್ನುವುದಕ್ಕೆ ನಿರ್ದೇಶಕರು ಕೊಟ್ಟ ಉತ್ತರ ಇದು 'ಯುನಿವರ್ಸಲ್ ಕಥೆ'. ಹಾಗಾಗಿ, ಎಲ್ಲ ಭಾಷೆಯವರು ನೋಡಬಹುದಂತೆ.

ಆಕ್ಷನ್ ಜಾನರ್ ಸಿನಿಮಾ

ಆಕ್ಷನ್ ಜಾನರ್ ಸಿನಿಮಾ

ಕೆಜಿಎಫ್ ಚಿತ್ರದ ಮೇಕಿಂಗ್, ಪೋಸ್ಟರ್ ನೋಡಿದ್ರೆ ಇದು ಒಂದು ಘಟನೆಯಾಧರಿತ ಮತ್ತು ಒಬ್ಬ ವ್ಯಕ್ತಿಯಾಧರಿತ ಕಥೆ ಇರಬಹುದು ಎಂಬ ಆಲೋಚನೆ ಬರುತ್ತೆ. ಈ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ. ಆದ್ರೆ, ಇದು ಆಕ್ಷನ್ ಜಾನರ್ ನಲ್ಲಿ ಬರುವಂತಹ ಸಿನಿಮಾ ಎಂದು ಚಿತ್ರತಂಡ ಬಹಿರಂಗಪಡಿಸಿದೆ. ಅಲ್ಲಿಗೆ ಆಕ್ಷನ್ ಪ್ರಿಯರಿಗೆ ಕೆಜಿಎಫ್ ಭರ್ಜರಿ ಬಾಡೂಟ ಆಗಲಿದೆ.

ತಾಯಿ-ಮಗನ ಸೆಂಟಿಮೆಂಟ್

ತಾಯಿ-ಮಗನ ಸೆಂಟಿಮೆಂಟ್

ಕೆಜಿಎಫ್ ಚಿತ್ರದಲ್ಲಿ ತಾಯಿ ಮತ್ತು ಮಗನ ಸೆಂಟಿಮೆಂಟ್ ಚೆನ್ನಾಗಿದೆ ಎಂದು ನಟ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಯಶ್ ಗೆ ತಾಯಿ ಪಾತ್ರದಲ್ಲಿ ಹೊಸ ಕಲಾವಿದೆಯೊಬ್ಬರು ನಟಿಸಿದ್ದಾರಂತೆ. ಇದು ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲಿ ಒಂದು ಎನ್ನುತ್ತಿದ್ದಾರೆ.

ಕಥೆ ಬಗ್ಗೆ ಊಹೆಗಳು ಹೆಚ್ಚಿವೆ

ಕಥೆ ಬಗ್ಗೆ ಊಹೆಗಳು ಹೆಚ್ಚಿವೆ

ಇನ್ನು 'ಕೆಜಿಎಫ್' ಚಿತ್ರದಲ್ಲಿ ಜೀತದಾಳು ಪದ್ಧತಿಯ ಛಾಯೆ ಎದ್ದು ಕಾಣುತ್ತಿತ್ತು. ಬ್ರಿಟಿಷರ ಕಾಲದಲ್ಲಿ ಜನರನ್ನ ಅಡಿಯಾಳಾಗಿಟ್ಟುಕೊಂಡಿದ್ದರು. ನಂತರ ಅದರ ವಿರುದ್ಧ ಅಲ್ಲಿನ ಜನರೇ ತಿರುಗಿ ಬಿದ್ದಾಗ ಅದು ಹೇಗೆ ಅಂಡರ್ ವರ್ಲ್ಡ್ ಕಡೆ ಸಾಗುತ್ತೆ ಎಂಬುದು ಕಥೆ ಇರಬಹುದು ಎಂದು ಉಹಿಸಲಾಗಿತ್ತು.

ಸದ್ಯಕ್ಕೆ ಚಾಪ್ಟರ್ ಒಂದು

ಸದ್ಯಕ್ಕೆ ಚಾಪ್ಟರ್ ಒಂದು

ಕೆಜಿಎಫ್ ಸಿನಿಮಾ ಎರಡು ಚಾಪ್ಟರ್ ಗಳಲ್ಲಿ ತಯಾರಾಗಿದೆ. ಸದ್ಯ, ಮೊದಲನೇ ಭಾಗ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಐದು ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಲಾಗಿದೆ. ಎರಡನೇ ಚಾಪ್ಟರ್ ನಲ್ಲಿ ಮತ್ತೆ ಯಶ್ ಗಡ್ಡ ಬಿಡಬೇಕಂತೆ. ಅದು ಯಾವಾಗ ರಿಲೀಸ್ ಎಂಬುದರ ಬಗ್ಗೆ ಮಾಹಿತಿ ಕೊಟ್ಟಿಲ್ಲ.

More from Filmibeat

English summary
Kannada movie 'KGF', which was scheduled to be released on November 16 has been postponed to a future date. The movie is now going to release either on December 21 or December 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X