'ಕೆಜಿಎಫ್' ಚಿತ್ರದ ಮೂರನೇ ಡೈಲಾಗ್ ಬಂತು
Recommended Video

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಟ್ರೈಲರ್ ಅಕ್ಟೋಬರ್ 14 ರಂದು ಬಿಡುಗಡೆಯಾಗುತ್ತಿದೆ. ಈ ಟ್ರೈಲರ್ ನಲ್ಲಿ ಯಾವ ಡೈಲಾಗ್ ಇರುತ್ತೋ, ಯಾವ ಲುಕ್ ಇರುತ್ತೋ ಎಂಬ ಕುತೂಹಲ ಕಾಡ್ತಿದೆ.
'ಕೆಜಿಎಫ್' ಚಿತ್ರದ ಎರಡು ಡೈಲಾಗ್ ವೈರಲ್ ಆಗಿತ್ತು. ಈಗ ಮೂರನೇ ಡೈಲಾಗ್ ಬಹಿರಂಗವಾಗಿದೆ. ಹೌದು, ಟಿವಿ ಸಂದರ್ಶನದಲ್ಲಿ ಭಾಗಿಯಾಗಿದ್ದ ಯಶ್ 'ಕೆಜಿಎಫ್' ಚಿತ್ರದ ಎಕ್ಸ್ ಕ್ಲೂಸಿವ್ ಡೈಲಾಗ್ ಹೇಳಿದ್ದಾರೆ.
'ಇಫ್ ಯೂ ಆರ್ ಬ್ಯಾಡ್, ಐ ಯಾಮ್ ಯು ಆರ್ ಡ್ಯಾಡ್' ಎಂಬ ಖಡಕ್ ಡೈಲಾಗ್ ಯಶ್ ರಿವೀಲ್ ಮಾಡಿದ್ದಾರೆ.

ಇದಕ್ಕೂ ಮುಂಚೆ ಯಶ್ 'ಕೆಜಿಎಫ್' ಚಿತ್ರದ ಡೈಲಾಗ್ ಹೇಳಿದ್ದರು. ''ಇನ್ಮೇಲೆ ಅವರಪ್ಪ ನನ್ನ ಮಾವ. ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ'' ಎಂದು ಹೇಳಿದ್ದರು.
ಅದಾದ ಬಳಿಕ ''ರಕ್ತದ ವಾಸನೆ ಕಂಡು ಬೇಜಾನ್ ಮೀನುಗಳು ಒಟ್ಟಿಗೆ ಬಂದ್ ಬಿಡ್ತವೆ, ಆದರೆ ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನ ಬೇಟೆ ಆಡುವ ತಿಮಿಂಗಲದ್ದು ಅಂತ" ಎಂಬ ಇನ್ನೊಂದು ಡೈಲಾಗ್ ಬಹಿರಂಗಪಡಿಸಿದ್ದರು.

ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಸಿನಿಮಾ ಅಕ್ಟೋಬರ್ 14 ರಂದು ಟ್ರೈಲರ್ ಬಿಡುಗಡೆಯಾಗ್ತಿದೆ. ನವೆಂಬರ್ 16 ರಂದು 'ಕೆಜಿಎಫ್' ಸಿನಿಮಾ ರಿಲೀಸ್ ಆಗಲಿದೆ. ಯಶ್ ಜೊತೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.


Click it and Unblock the Notifications











