»   » ವೈರಲ್ ಆಯ್ತು ಯಶ್ ಕೆಜಿಎಫ್ ಚಿತ್ರದ ಖಡಕ್ ಡೈಲಾಗ್

ವೈರಲ್ ಆಯ್ತು ಯಶ್ ಕೆಜಿಎಫ್ ಚಿತ್ರದ ಖಡಕ್ ಡೈಲಾಗ್

Posted By:
Subscribe to Filmibeat Kannada
ಯಶ್ ಡೈಲಾಗ್ ಗೆ ಶಿಳ್ಳೆ ಚಪ್ಪಾಳೆ | Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದು ತಲುಪಿದೆ. 'ಕೆಜಿಎಫ್' ಚಿತ್ರ ಯಾವಾಗ ಬಿಡುಗಡೆ ಆಗುತ್ತೆ ಎಂದು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಮೇಕಿಂಗ್ ಮತ್ತು ಪೋಸ್ಟರ್ ಗಳ ಮೂಲಕ ಚಿತ್ರದ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚಾಗುತ್ತಿದೆ. ಇತ್ತೀಚಿಗಷ್ಟೆ ಯಶ್ ಖಾಸಗಿ ಕಾರ್ಯಕ್ರಮದ ವೇದಿಕೆ ಮೇಲೆ ಹೇಳಿದ 'ಕೆಜಿಎಫ್' ಚಿತ್ರದ ಮಾಸ್ ಡೈಲಾಗ್ ಸಖತ್ ವೈರಲ್ ಆಗಿದೆ.

ಈ ಹಿಂದೆಯೇ ರಾಕಿಂಗ್ ಸ್ಟಾರ್ ಯಶ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಕೆಜಿಎಫ್ ಸಿನಿಮಾದ ಡೈಲಾಗ್ ಹೇಳಿದ್ರು. ಆರಂಭದ ದಿನಗಳಲ್ಲಿ ಯಶ್ ಹೇಳಿದ್ದ ಆ ಡೈಲಾಗ್ ಸಖತ್ ವೈರಲ್ ಆಗಿತ್ತು. ಈಗ ಹೇಳಿರುವ ಡೈಲಾಗ್ ಎಲ್ಲರ ವಾಟ್ಸ್ ಆಪ್ ಗಳ ಸ್ಟೇಟಸ್ ಆಗಿ ಬದಲಾಗಿದೆ.

ಯಶ್ ಚಿತ್ರಕ್ಕಾಗಿ ಸಿದ್ದವಾಯ್ತು '80' ರ ದಶಕದ ಸೆಟ್

Yash revealed the khadak mass dialogue from KGF

"ರಕ್ತದ ವಾಸನೆ ಕಂಡು ಬೇಜಾನ್ ಮೀನುಗಳು ಒಟ್ಟಿಗೆ ಬಂದ್ ಬಿಡ್ತವೆ, ಆದರೆ ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನ ಬೇಟೆ ಆಡುವ ತಿಮಿಂಗಲದ್ದು ಅಂತ". ಈ ಮಾಸ್ ಡೈಲಾಗ್ 'ಕೆಜಿಎಫ್' ಸಿನಿಮಾದಲ್ಲಿದೆ ಎಂದು ಖುದ್ದು ಯಶ್ ಅವರೇ ಹೇಳಿದ್ದಾರೆ.

Yash revealed the khadak mass dialogue from KGF

ಯಶ್ 'ಕೆಜಿಎಫ್' ಸಿನಿಮಾ ಬಗ್ಗೆ ಹೇಳುತ್ತಿರುವ ಎರಡನೇ ಡೈಲಾಗ್ ಇದಾಗಿದ್ದು ಇದರಿಂದಲೇ ಪ್ರೇಕ್ಷಕರು, ಅಭಿಮಾನಿಗಳು ಸಿನಿಮಾ ಎಷ್ಟರ ಮಟ್ಟಿಗೆ ಮಾಸ್ ಪೀಲ್ ಕೊಡುತ್ತೆ ಎನ್ನುವುದನ್ನ ಲೆಕ್ಕಾಚಾರ ಹಾಕಿದ್ದಾರೆ. ಸದ್ಯ ಕೊನೆಯ ಹಂತದಲ್ಲಿರುವ 'ಕೆಜಿಎಫ್' ಚಿತ್ರೀಕರಣ ಆದಷ್ಟು ಬೇಗ ಕಂಪ್ಲೀಟ್ ಆಗಲಿದೆ. ವರ್ಷದ ಅಂತ್ಯದೊಳಗೆ ಸಿನಿಮಾನೂ ಥಿಯೇಟರ್ ಅಂಗಳಕ್ಕೆ ಬರಲಿದೆ.

English summary
Kannada actor Yash revealed the khadak mass dialogue from KGF Kannada movie, that dialogue viral on the social networking site, Rocking star Yash and Srinidhi Shetty starred in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X