For Quick Alerts
  ALLOW NOTIFICATIONS  
  For Daily Alerts

  ಮಗಳು ಐರಾ ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಯಶ್ ತಬ್ಬಿಬ್ಬು!

  |

  ಮಕ್ಕಳ ಪ್ರಶ್ನೆಗಳೇ ಹಾಗೆ, ಎಷ್ಟೇ ಬುದ್ದಿವಂತ ಪೋಷಕರಾದರೂ ಮಕ್ಕಳ ಪ್ರಶ್ನೆಗೆ ಉತ್ತರ ಕೊಡುವ ಮುನ್ನಾ ತಲೆಕೆರೆದು ಕೊಳ್ಳಬೇಕಾಗುತ್ತದೆ. ಪಾಪ ರಾಕಿಂಗ್ ಸ್ಟಾರ್ ಯಶ್ ಕತೆಯೂ ಇದೇ ಆಗಿದೆ.

  ಕೂದಲು ತೆಗೆದ ನಂತರ ಐರಾ ಯಶ್ ಹೇಗಿದ್ದಾಳೆ ನೋಡಿ | Yash | Radhika pandit | Ayra

  ಇನ್ನೂ ತೊದಲು ನುಡಿಯ ಯಶ್-ರಾಧಿಕಾ ಪುತ್ರಿ ಐರಾ ದೊಡ್ಡ ಪ್ರಶ್ನೆಯನ್ನೇ ಅಪ್ಪ ಯಶ್‌ ಗೆ ಕೇಳಿದ್ದಾಳೆ. ಪಾಪ ಯಶ್, ಮಗಳ ಪ್ರಶ್ನೆಗೆ ಉತ್ತರಿಸಲಾಗದೆ ಗಡ್ಡ ಗೀರಿಕೊಂಡಿದ್ದಾರೆ(!?).

  ಕಿಲ ಕಿಲ ಅಂತ ನಗುತ್ತಾ ಉಗುರು ಕಟ್ ಮಾಡಿಸಿಕೊಳ್ಳುವ ಆಯ್ರಾ ವಿಡಿಯೋ ಸಿಕ್ಕಾಪಟ್ಟೆ ವೈರಲ್.!ಕಿಲ ಕಿಲ ಅಂತ ನಗುತ್ತಾ ಉಗುರು ಕಟ್ ಮಾಡಿಸಿಕೊಳ್ಳುವ ಆಯ್ರಾ ವಿಡಿಯೋ ಸಿಕ್ಕಾಪಟ್ಟೆ ವೈರಲ್.!

  ಕೆಲ ತಿಂಗಳುಗಳ ಹಿಂದಷ್ಟೆ ವರ್ಷ ತುಂಬಿರುವ ಕೂಸು ಐರಾ ಅಪ್ಪನಿಗೆ ಪ್ರಶ್ನೆ ಹಾಕಿಬಿಟ್ಟಳೆ. ರಾಕಿ ಭಾಯ್ ಕೈಲೇ ಉತ್ತರಿಸಲಾಗದ ಕ್ಲಿಷ್ಟ ಪ್ರಶ್ನೆಯನ್ನು ಕೂಸು ಕೇಳಿತೆ? ಎಂದೆಲ್ಲಾ ಆಶ್ಚರ್ಯ ಪಡಬೇಡಿ, ಪೂರ್ತಿ ತಿಳಿಯಲು ಮುಂದೆ ಓದಿ...

  ಮಗಳ ಮುಡಿ ನೀಡುವ ಶಾಸ್ತ್ರ ಪೂರೈಸಿದ ಯಶ್

  ಮಗಳ ಮುಡಿ ನೀಡುವ ಶಾಸ್ತ್ರ ಪೂರೈಸಿದ ಯಶ್

  ಇಂದು ಐರಾಳ ಮುಡಿ ನೀಡುವ ಶಾಸ್ತ್ರವನ್ನು ಯಶ್-ರಾಧಿಕಾ ದಂಪತಿ ಪೂರೈಸಿದ್ದಾರೆ. ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಐರಾ ಮುಡಿ ನೀಡಲಾಯಿತು. ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಯಶ್ ಹಂಚಿಕೊಂಡಿದ್ದಾರೆ.

  ಸುಂದರವಾದ ಚಿತ್ರ ಹಂಚಿಕೊಂಡಿರುವ ಯಶ್

  ಸುಂದರವಾದ ಚಿತ್ರ ಹಂಚಿಕೊಂಡಿರುವ ಯಶ್

  ಯಶ್ ಹಂಚಿಕೊಂಡ ಚಿತ್ರ ಅದ್ಭುತವಾಗಿದ್ದು, ಐರಾ ಸಿಟ್ಟಿನಿಂದ ಅಪ್ಪನನ್ನು ಪ್ರಶ್ನೆ ಮಾಡುತ್ತಿರುವಂತೆ ಇದೆ. ಈ ಅಂದವಾದ ಚಿತ್ರಕ್ಕೆ ಅಷ್ಟೆ ಅಂದವಾದ ಕ್ಯಾಪ್ಷನ್ ಅನ್ನು ಯಶ್ ಬರೆದಿದ್ದಾರೆ.

  ಅಪ್ಪನನ್ನು ಪ್ರಶ್ನೆ ಮಾಡಿರುವ ಐರಾ

  ಅಪ್ಪನನ್ನು ಪ್ರಶ್ನೆ ಮಾಡಿರುವ ಐರಾ

  ಐರಾ ಅಪ್ಪನನ್ನು ಕೇಳಿದ್ದಾಳೆ; ''ಅಪ್ಪ ಇದು ಬೇಸಿಗೆ ಅಂತ ನನಗೆ ಗೊತ್ತು, ಆದರೆ ನೀನು ಈಗ ನನಗೆ ಮಾಡಿಸಿರುವುದು ಬೇಸಿಗೆ ಕಟ್ (ಸಮ್ಮರ್ ಕಟ್) ಅಲ್ಲ ತಾನೆ??'' ಎಂದು ಐರಾ ಸಿಟ್ಟಿನಿಂದ ಅಪ್ಪನನ್ನು ಕೇಳಿದ್ದಾಳಂತೆ.

  ಮಗಳ ಪ್ರಶ್ನೆಗೆ ಉತ್ತರ ಕೊಡಲು ತಡವರಿಸಿದ ರಾಕಿ ಭಾಯ್

  ಮಗಳ ಪ್ರಶ್ನೆಗೆ ಉತ್ತರ ಕೊಡಲು ತಡವರಿಸಿದ ರಾಕಿ ಭಾಯ್

  ಇದಕ್ಕೆ ಉತ್ತರಿಸಲು ತಡವರಿಸಿದ ಯಶ್, ''ಹೌದು, ಆದರೆ.... '' ಎಂದಿದ್ದಾರೆ. ಮಗಳ ಪ್ರಶ್ನೆಗೆ ಅಪ್ಪನ ಬಳಿ ಉತ್ತರವೇ ಇಲ್ಲ. ಮಗಳಿಗೆ ಏನು ಕಾರಣ ಕೊಡಬೇಕು ಎಂದೂ ಯಶ್‌ ಗೆ ತೋಚಿಲ್ಲವಂತೆ.

  ಅಪ್ಪ-ಮಗಳ ಪ್ರೀತಿ ಸಾರುವ ಚಿತ್ರ

  ಅಪ್ಪ-ಮಗಳ ಪ್ರೀತಿ ಸಾರುವ ಚಿತ್ರ

  ಯಶ್ ಅವರು ಪೋಸ್ಟ್ ಮಾಡಿರುವ ಚಿತ್ರಕ್ಕೆ ಹಾಗೂ ಬರೆದುಕೊಂಡಿರುವ ಕ್ಯಾಪ್ಷನ್‌ ಗೆ ತುಂಬಾ ಚೆನ್ನಾಗಿ ಹೊಂದಿಕೆ ಆಗಿದೆ. ಅಪ್ಪ-ಮಗಳ ತಂಟೆ-ತರ್ಲೆಗಳು ಸಹ ಚಿತ್ರ ಮತ್ತು ಕ್ಯಾಪ್ಷನ್ ನಲ್ಲಿ ವ್ಯಕ್ತವಾಗುತ್ತಿದೆ.

  ಕೆಲವೇ ನಿಮಿಷದಲ್ಲಿ ಲಕ್ಷಾಂತರ ಲೈಕ್‌ಗಳು

  ಕೆಲವೇ ನಿಮಿಷದಲ್ಲಿ ಲಕ್ಷಾಂತರ ಲೈಕ್‌ಗಳು

  ಚಿತ್ರವನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಜನ ಕಮೆಂಟ್ ಮಾಡಿದ್ದಾರೆ. ಚಿತ್ರ ಭಾರಿ ವೈರಲ್ ಆಗಿದೆ.

  English summary
  Yash-Radhika daughter Ayra asks cute question to her dad about her hair cut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X