»   » ಹೊಸ ವರ್ಷಕ್ಕೆ ಅಭಿಮಾನಿಯಿಂದ ರಾಕಿಂಗ್ ಸ್ಟಾರ್ ಗೆ ಸ್ಪೆಷಲ್ ಗಿಫ್ಟ್

ಹೊಸ ವರ್ಷಕ್ಕೆ ಅಭಿಮಾನಿಯಿಂದ ರಾಕಿಂಗ್ ಸ್ಟಾರ್ ಗೆ ಸ್ಪೆಷಲ್ ಗಿಫ್ಟ್

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ .. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಅಭಿಮಾನಿಗಳನ್ನ ಹೊಂದಿರೋ ಕನ್ನಡದ ನಾಯಕ ನಟ. ಹೊಸ ವರ್ಷ ಆರಂಭದಲ್ಲಿ ನಟ ಯಶ್ ಅವರಿಗೆ ಅಭಿಮಾನಿಯೊಬ್ಬರು ಸಪ್ರೈಸ್ ನೀಡಿದ್ದಾರೆ.

ಕಲಾವಿದರಿಗೆ ಅಪರೂಪದ ಅಭಿಮಾನಿಗಳು ಸಿಗುವುದು ಖುಷಿಯ ವಿಚಾರ. ಸಾಮಾನ್ಯರಿಗಿಂತಲೂ ವಿಭಿನ್ನವಾಗಿ ಯಶ್ ಅವರನ್ನ ಅಭಿಮಾನಿಸೋ ಅಮೇರಿಕಾದಲ್ಲಿರುವ ಲೀ ಎಂ ಸೆಂಟ್ರಾಚಿಯೊ ಕನ್ನಡ ಕಲಿಯುವುದರ ಜೊತೆಗೆ ಹಾಡನ್ನು ಹಾಡಿ ಯಶ್ ಅವರಿಗೆ ಹೊಸ ವರ್ಷದ ಶುಭಾಷಯವನ್ನು ಕೋರಿದ್ದಾರೆ.

Yash's fan Lee M Centracchio has given a special gift to the new year

ಅಮೇರಿಕಾದ ಯಶ್ ಅಭಿಮಾನಿ, ರಾಕಿಂಗ್ ಸ್ಟಾರ್ ಬಗ್ಗೆ ಬಿಚ್ಚಿಟ್ಟ ಇಂಟ್ರೆಸ್ಟಿಂಗ್ ವಿಚಾರ

ಯಶ್ ರಾಧಿಕಾ ಅಭಿನಯದ 'ರಾಮಾಚಾರಿ' ಚಿತ್ರದ ಉಪವಾಸ ಈ ಕಣ್ಣಿಗೆ ಹಾಡನ್ನ ಕಲಿತು ಯಶ್ ಅವರಿಗಾಗಿ ಹಾಡಿದ್ದಾರೆ ಲೀ ಎಂ ಸೆಂಟ್ರಾಚಿಯೊ. ಲೀ ಎಂ ಸೆಂಟ್ರಾಚಿಯೊ ಹಾಡಿರುವ ಈ ಹಾಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಅಮೇರಿಕಾದಲ್ಲಿ ವಾಸವಾಗಿರುವ ಲೀ ಎಂ ಸೆಂಟ್ರಾಚಿಯೊ ಯಶ್ ಅವರ ಅಪ್ಪಟ ಅಭಿಮಾನಿ. ಯಶ್ ಅಭಿನಯದ ಎಲ್ಲಾ ಚಿತ್ರಗಳನ್ನ ನೋಡಿದ್ದು ಕನ್ನಡ ಕಲಿಯುವುದಕ್ಕೆ ಪ್ರಾರಂಭ ಮಾಡಿದ್ದಾರೆ.

Yash's fan Lee M Centracchio has given a special gift to the new year

ನಾನು ಯಶ್ ಫ್ಯಾನ್ ಎಂದು ಹೇಳಿಕೊಂಡಿದ್ದ ವಿದೇಶಿ ಅಭಿಮಾನಿ ಹೊಸ ವರ್ಷದ ರಾಕಿಂಗ್ ಸ್ಟಾರ್ ಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ವರ್ಷದ ಪ್ರಾರಂಭದಲ್ಲಿ ಸಿಕ್ಕಿರುವ ಈ ವಿಶೇಷ ಉಡುಗೊರೆ ರಾಕಿಂಗ್ ಸ್ಟಾರ್ ಅವರಿಗೆ ಖಂಡಿತ ಖುಷಿ ಕೊಡಲಿದೆ.

English summary
Kannada actor Yash's foreign fan Lee M Centracchio has given a special gift to the new year for Yash. Lee M Centracchio is sing song of Yash's performance movie and update that video in facebook.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X