Don't Miss!
- News ಕಾಂಗ್ರೆಸ್ನಿಂದಲೇ 'ನೇಹಾ ಕೊಲೆ' ತನಿಖೆ ದಾರಿ ತಪ್ಪಿಸಲು ಯತ್ನ: ತಂದೆಯನ್ನೇ ಕೊಲ್ಲಲು ಹೋಗಿದ್ದ ಫಯಾಜ್: ನಿರಂಜನ್ ಹಿರೇಮಠ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ವರ್ಷಕ್ಕೆ ಅಭಿಮಾನಿಯಿಂದ ರಾಕಿಂಗ್ ಸ್ಟಾರ್ ಗೆ ಸ್ಪೆಷಲ್ ಗಿಫ್ಟ್
ರಾಕಿಂಗ್ ಸ್ಟಾರ್ ಯಶ್ .. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಅಭಿಮಾನಿಗಳನ್ನ ಹೊಂದಿರೋ ಕನ್ನಡದ ನಾಯಕ ನಟ. ಹೊಸ ವರ್ಷ ಆರಂಭದಲ್ಲಿ ನಟ ಯಶ್ ಅವರಿಗೆ ಅಭಿಮಾನಿಯೊಬ್ಬರು ಸಪ್ರೈಸ್ ನೀಡಿದ್ದಾರೆ.
ಕಲಾವಿದರಿಗೆ ಅಪರೂಪದ ಅಭಿಮಾನಿಗಳು ಸಿಗುವುದು ಖುಷಿಯ ವಿಚಾರ. ಸಾಮಾನ್ಯರಿಗಿಂತಲೂ ವಿಭಿನ್ನವಾಗಿ ಯಶ್ ಅವರನ್ನ ಅಭಿಮಾನಿಸೋ ಅಮೇರಿಕಾದಲ್ಲಿರುವ ಲೀ ಎಂ ಸೆಂಟ್ರಾಚಿಯೊ ಕನ್ನಡ ಕಲಿಯುವುದರ ಜೊತೆಗೆ ಹಾಡನ್ನು ಹಾಡಿ ಯಶ್ ಅವರಿಗೆ ಹೊಸ ವರ್ಷದ ಶುಭಾಷಯವನ್ನು ಕೋರಿದ್ದಾರೆ.
ಅಮೇರಿಕಾದ ಯಶ್ ಅಭಿಮಾನಿ, ರಾಕಿಂಗ್ ಸ್ಟಾರ್ ಬಗ್ಗೆ ಬಿಚ್ಚಿಟ್ಟ ಇಂಟ್ರೆಸ್ಟಿಂಗ್ ವಿಚಾರ
ಯಶ್ ರಾಧಿಕಾ ಅಭಿನಯದ 'ರಾಮಾಚಾರಿ' ಚಿತ್ರದ ಉಪವಾಸ ಈ ಕಣ್ಣಿಗೆ ಹಾಡನ್ನ ಕಲಿತು ಯಶ್ ಅವರಿಗಾಗಿ ಹಾಡಿದ್ದಾರೆ ಲೀ ಎಂ ಸೆಂಟ್ರಾಚಿಯೊ. ಲೀ ಎಂ ಸೆಂಟ್ರಾಚಿಯೊ ಹಾಡಿರುವ ಈ ಹಾಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಅಮೇರಿಕಾದಲ್ಲಿ ವಾಸವಾಗಿರುವ ಲೀ ಎಂ ಸೆಂಟ್ರಾಚಿಯೊ ಯಶ್ ಅವರ ಅಪ್ಪಟ ಅಭಿಮಾನಿ. ಯಶ್ ಅಭಿನಯದ ಎಲ್ಲಾ ಚಿತ್ರಗಳನ್ನ ನೋಡಿದ್ದು ಕನ್ನಡ ಕಲಿಯುವುದಕ್ಕೆ ಪ್ರಾರಂಭ ಮಾಡಿದ್ದಾರೆ.
ನಾನು ಯಶ್ ಫ್ಯಾನ್ ಎಂದು ಹೇಳಿಕೊಂಡಿದ್ದ ವಿದೇಶಿ ಅಭಿಮಾನಿ ಹೊಸ ವರ್ಷದ ರಾಕಿಂಗ್ ಸ್ಟಾರ್ ಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ವರ್ಷದ ಪ್ರಾರಂಭದಲ್ಲಿ ಸಿಕ್ಕಿರುವ ಈ ವಿಶೇಷ ಉಡುಗೊರೆ ರಾಕಿಂಗ್ ಸ್ಟಾರ್ ಅವರಿಗೆ ಖಂಡಿತ ಖುಷಿ ಕೊಡಲಿದೆ.
ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಅಮೇರಿಕಾದ ಅಭಿಮಾನಿ ಹಾಡಿರುವ ಹಾಡು ಕೇಳಿ 👉https://t.co/SkQynbGoOO pic.twitter.com/VK9ddJIs58
— Yash Official FC (@YashFC) December 31, 2017