KGF 2 trailer release : 1001 ತೆಂಗಿನಕಾಯಿ ಹಿಡಿದು ದೇವಸ್ಥಾನಕ್ಕೆ ಹೊರಟ ಯಶ್ ಫ್ಯಾನ್ಸ್!

ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಕೆಜಿಎಫ್ 2ಸಿನಿಮಾ ಏಪ್ರೀಲ್ 14ರಂದು ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಚಿತ್ರ ರಿಲೀಸ್‌ಗೂ ಮೊದಲೇ ಚಿತ್ರದ ಪ್ರಮೋಷನ್ ದೊಡ್ಡ ಮಟ್ಟದಲ್ಲಿ ಮಾಡಲು ಅಭಿಮಾನಿಗಳು ಹಾಗೂ ಚಿತ್ರತಂಡ ಕಾತುರತೆಯಿಂದ ಕಾಯುತ್ತಿದ್ದಾರೆ.

'ಕೆಜಿಎಫ್ 2' ಟ್ರೈಲರ್ ರಿಲೀಸ್ ಅಂಗವಾಗಿಯೇ ಇತ್ತೀಚೆಗೆ ಚಿತ್ರದ ಮೊದಲ ಲಿರಿಕಲ್ ಹಾಡು 'ತೂಫಾನ್' ಅನ್ನು ರಿಲೀಸ್ ಮಾಡಿತ್ತು. ಈ ಹಾಡು ಕೂಡ ಹೊಸ ದಾಖಲೆಗಳನ್ನೇ ಸೃಷ್ಟಿಸಿತ್ತು. ತೂಫಾನ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್‌ನಲ್ಲಿ ನಂ 1 ಆಗಿತ್ತು. ಇದೀಗ ಚಿತ್ರತಂಡ ಈಗಾಗಲೇ ಅನೌನ್ಸ್ ಮಾಡಿದಂತೆ ಇಂದು (ಮಾರ್ಚ್ 27)ಕ್ಕೆ 'ಕೆಜಿಎಫ್ 2' ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದೆ.

ಈ ಟ್ರೈಲರ್ ಅನ್ನು ರಿಲೀಸ್ ಮಾಡಲು ಚಿತ್ರತಂಡ ದೊಡ್ಡ ಪ್ಲಾನ್ ಮಾಡಿಕೊಂಡಿದೆ. ಇದರ ಜೊತೆಗೆ ಅಭಿಮಾನಿಗಳು ಕೂಡ 'ಕೆಜಿಎಫ್ 2' ಟ್ರೈಲರ್‌ಅನ್ನು ಸಂಭ್ರಮಿಸಲು ಮುಂದಾಗಿದ್ದಾರೆ. ಇದಕ್ಕಾಗಿ ದೊಡ್ಡ ತಯಾರಿಯನ್ನೇ ಮಾಡಿಕೊಂಡಿದ್ದಾರೆ. ಎಲ್‌ಇಡಿ ಪರದೆ ಮೇಲೆ ಟ್ರೈಲರ್ ನೋಡುವುದರ ಜೊತೆಗೆ ಮತ್ತಷ್ಟು ತಯಾರಿ ಮಾಡಿಕೊಂಡಿದ್ದಾರೆ.

ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ

ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ

ಕೆಜಿಎಫ್ 2 ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದೆ ಎಂಬ ಸುದ್ದಿ ಹೊರಬೇಳುತ್ತಿದ್ದಂತೆ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. ಒಮ್ಮೆ 'ಕೆಜಿಎಫ್ 2' ಸಿನಿಮಾದ ಟ್ರೈಲರ್ ಅನ್ನು ಕಣ್ತುಂಬಿಕೊಳ್ಳಬೇಕು ಎಂಬ ಕಾತುರತೆಯಲ್ಲಿದ್ದಾರೆ. ಟ್ರೈಲರ್ ರಿಲೀಸ್‌ಗೆ ಚಿತ್ರತಂಡ ದೊಡ್ಡ ತಯಾರಿಯನ್ನು ಮಾಡಿಕೊಂಡಿದ್ದು, ಇತ್ತ ಅಭಿಮಾನಿಗಳು ಕೂಡ ಬಹಳ ಅದ್ಧೂರಿಯಾಗಿ ಟ್ರೈಲರ್ ಅನ್ನು ಸ್ವಾಗತ ಮಾಡಲು ಸಜ್ಜಾಗಿದ್ದಾರೆ. ರಾಜ್ಯದ 20ಕ್ಕೂ ಹೆಚ್ಚು ಕಡೆ ಎಲ್‌ಈಡಿ ಸ್ಕ್ರೀನ್‌ನಲ್ಲಿ ಟ್ರೈಲರ್ ನೋಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಮೈಸೂರು ರೈಲು ನಿಲ್ದಾಣದಲ್ಲಿ ವಿಶೇಷ ಟ್ರೈಲರ್ ಸ್ಕ್ರೀನಿಂಗ್

ಮೈಸೂರು ರೈಲು ನಿಲ್ದಾಣದಲ್ಲಿ ವಿಶೇಷ ಟ್ರೈಲರ್ ಸ್ಕ್ರೀನಿಂಗ್

ಹೌದು, ಯಶ್ ಅಭಿಮಾನಿಗಳು 'ಕೆಜಿಎಫ್ 2 'ರ ಟ್ರೈಲರ್ ಅನ್ನು ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ವಿಜಯಪುರ, ಗದಗ, ಮಂಡ್ಯ ಮತ್ತು ಮಾಲೂರು ಸೇರಿದಂತೆ ಹಲವು ಕಡೆ ಜಾಗ ಗುರುತಿಸಿದ್ದಾರೆ. ಇನ್ನು ವಿಶೇಷ ಅಂದರೆ ಮೈಸೂರು ರೈಲು ನಿಲ್ದಾಣದಲ್ಲಿ ವಿಶೇಷ ಟ್ರೈಲರ್ ಸ್ಕ್ರೀನಿಂಗ್ ಅನ್ನು ಸಹ ಆಯೋಜಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಇರುವ ಟಿವಿಗಳಲ್ಲಿ ಟ್ರೈಲರ್ ಪ್ರದರ್ಶನ ಮಾಡಲು ಫ್ಯಾನ್ಸ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಅಭಿಮಾನಿಗಳ ಸಂಘದಿಂದ ವಿಶೇಷ ಪೂಜೆ

ಅಭಿಮಾನಿಗಳ ಸಂಘದಿಂದ ವಿಶೇಷ ಪೂಜೆ

ಇನ್ನು ರಾಕಿಂಗ್ ಸ್ಟಾರ್‌ ಯಶ್ ಡೈ ಹಾರ್ಡ್ ಅಭಿಮಾನಿಗಳು ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಕೂಡ ವಿಶೇಷ ಎಲ್ಇಡಿ ಪರದೆ ಮೇಲೆ ಕೈಗಾರಿಕಾ ಪ್ರದೇಶದ ಜನರಿಗೆ ತೋರಿಸಲು ಸಜ್ಜಾಗಿದ್ದಾರೆ.ಯಶ್ ಅವರ ಅಭಿಮಾನಿಗಳ ಸಂಘ ವಿಶೇಷ ಪೂಜೆಯನ್ನು ನೆರವೇರಿಸಲಿದ್ದಾರೆ. ಟ್ರೈಲರ್ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ 1001 ತೆಂಗಿನಕಾಯಿಗಳನ್ನು ಹಿಡಿದು ಇಂದು ಮೈಸೂರಿನ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

ಟ್ರೈಲರ್ ಲಾಂಚ್ ಮಾಡಲಿದ್ದಾರೆ ಶಿವಣ್ಣ !

ಟ್ರೈಲರ್ ಲಾಂಚ್ ಮಾಡಲಿದ್ದಾರೆ ಶಿವಣ್ಣ !

'ಕೆಜಿಎಫ್ 2' ಟ್ರೈಲರ್ ರಿಲೀಸ್‌ಗೆ ಅನೇಕ ತಯಾರಿಯನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಜೊತೆಗೆ ಚಿತ್ರತಂಡ ಕೂಡ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಲು ತಯಾರಿ ಮಾಡಿಕೊಂಡಿದ್ದಾರೆ. ಇವತ್ತಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಆಗಮಿಸಲಿದ್ದು, ಟ್ರೈಲರ್ ಲಾಂಚ್ ಕೂಡ ಮಾಡಲಿದ್ದಾರೆ. ಬೇರೆ ಬೇರೆ ಭಾಷೆಯ ಪತ್ರಕರ್ತರು ಕೂಡ ಆಗಮಿಸಲಿದ್ದು, ಎಲ್ಲರ ಕಣ್ಣು ಇದೀಗ ಟ್ರೈಲರ್ ನೋಡುವುದರ ಜೊತೆಗೆ ಈ ದೊಡ್ಡ ಇವೆಂಟ್ ಹೇಗೆ ನಡೆಯುತ್ತೆ ಎಂಬುದನ್ನು ನೋಡಲು ಕಾಯುತ್ತಿದೆ.

More from Filmibeat

English summary
Yash's Fans To Screen The Trailer At 20 Locations. Here is more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X