ರಾಕಿಂಗ್ ಸ್ಟಾರ್ ಯಶ್ 'ಕೆ.ಜಿ.ಎಫ್'ಗೆ ಗುರುವಾರ ಮುಹೂರ್ತ
ರಾಕಿಂಗ್ ಸ್ಟಾರ್ ಯಶ್ ಅವರ 'ಸಂತು Straight Forward' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿರುವಾಗಲೇ ಅವರ ಮುಂದಿನ ಸಿನಿಮಾ 'ಕೆ.ಜಿ.ಎಫ್'ಗೆ ಮುಹೂರ್ತ ಫಿಕ್ಸ್ ಆಗಿದೆ. ಗುರುವಾರ, ಜೂನ್ 9 ರಂದು ಬೆಂಗಳೂರಿನ ದೇವಾಲಯ ಒಂದರಲ್ಲಿ ಸರಳ ಪೂಜೆಯೊಂದಿಗೆ ಯಶ್ 'ಕೆ.ಜಿ.ಎಫ್'ಗೆ ಮುಹೂರ್ತ ನೆರವೇರಲಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಅವರು ಆಕ್ಷನ್-ಕಟ್ ಹೇಳುತ್ತಿರುವ 'ಕೆ.ಜಿ.ಎಫ್' ಚಿತ್ರ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿದೆ. ಚಿತ್ರಕ್ಕೆ ಭುವನ್ ಗೌಡ ಅವರು ಕ್ಯಾಮರಾ ಕೈ ಚಳಕ ತೋರಿದರೆ, ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.[ಯಶ್ ಕೆ.ಜಿ.ಎಫ್ ಚಿತ್ರದ ಮುಹೂರ್ತ ಯಾವಾಗ ಗೊತ್ತಾ?]

ಇನ್ನು ಚಿತ್ರಕ್ಕೆ ಪೂಜೆ ನೆರವೇರಿಸಿದ ನಂತರ ಚಿತ್ರತಂಡ ಹೊರಾಂಗಣ ಚಿತ್ರೀಕರಣದ ಜಾಗದ ಹುಡುಕಾಟಕ್ಕೆ ತೆರಳಲಿದೆ. ಚಿತ್ರದ ಶೂಟಿಂಗ್ ದಿನಾಂಕ ಇನ್ನೂ ನಿಗದಿಯಾಗಿಲ್ಲವಾದ್ದರಿಂದ ಈ ತಿಂಗಳ ಕೊನೆಯಿಂದ ಚಿತ್ರೀಕರಣ ಆರಂಭಿಸಿ, ಚಿತ್ರದಲ್ಲಿ ಯಶ್ ಅವರು ಮಗುವಾಗಿದ್ದಾಗಿನ ಪಾತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.[ಯಶ್ ಹೆಸರಲ್ಲಿ ಬಿಟ್ಟಿ ಪಬ್ಲಿಸಿಟಿ ಪಡೆಯುತ್ತಿರುವವರು ಯಾರು?]

ಚಿತ್ರದ ನಾಯಕ ಸೇರಿದಂತೆ ಕೆಲವು ಪಾತ್ರಗಳು ಮಾತ್ರ ಹಳೆಯವರಾಗಿದ್ದು, ಇನ್ನುಳಿದಂತೆ ಎಲ್ಲಾ ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಪ್ರಶಾಂತ್ ಅವರು. ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ.


Click it and Unblock the Notifications











