ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ 'KGF-2': ಟಾಪ್ 5 ಚಿತ್ರಗಳು ಯಾವುವು?
ಭಾರತದ ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡ ಕೆಜಿಎಫ್-2 ಮತ್ತು ತೆಲುಗಿನ ಪುಷ್ಪ ಸಿನಿಮಾವಿದೆ. IMDb ಬಿಡುಗಡೆ ಮಾಡಿರುವ ಭಾರತದ ಹೆಚ್ಚು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ಕೆಜಿಎಫ್-2 ಸಿನಿಮಾ ಅಗ್ರಸ್ಥಾನದಲ್ಲಿದೆ. ವಿಶೇಷ ಎಂದರೆ ಟಾಪ್ 3ನಲ್ಲಿ ಯಾವುದೇ ಬಾಲಿವುಡ್ ಸಿನಿಮಾವಿಲ್ಲ.
Recommended Video
ಇನ್ನು ವಿಶೇಷ ಎಂದರೆ 2ನೇ ಸ್ಥಾನದಲ್ಲಿ ಪುಷ್ಪ ಚಿತ್ರವಿದೆ. 27.5%ರೊಂದಿಗೆ ಕೆಜಿಎಫ್-2 ಮೊದಲ ಸ್ಥಾನದಲ್ಲಿದೆ. 24.3% ರೊಂದಿಗೆ ಪುಷ್ಪ ಸಿನಿಮಾ 2ನೇ ಸ್ಥಾನದಲ್ಲಿದೆ. ಕುತೂಹಲಕಾರಿ ವಿಚಾರವೆಂದರೆ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಕೊನೆಯ ಕ್ಷಣದ ವರೆಗೂ ಮೊದಲ ಸ್ಥಾನದಲ್ಲಿತ್ತು. ಬಳಿಕ ಕೆಜಿಎಫ್-2 ಸಿನಿಮಾ ಹೆಚ್ಚು ಮತಗಳಿಸುವ ಮೂಲಕ ಮೊದಲ ಸ್ಥಾನಕ್ಕೆ ಏರಿದೆ.
ಇನ್ನು ಮೂರನೆ ಸ್ಥಾನದಲ್ಲಿ ಮೋಹನ್ ಲಾಲ್ ನಟನೆಯ ಮರಕ್ಕರ್: ಅರೇಬಿಯನ್ ಸಿ ಲಯನ್ ಸಿನಿಮಾವಿದೆ. ಈ ಸಿನಿಮಾ 8.7% ರಷ್ಟು ಮತ ಪಡೆದಿದೆ. 4ನೇ ಸ್ಥಾನದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ರಾಧೆ ಶ್ಯಾಮ್ ಸಿನಿಮಾವಿದೆ. 5ನೇ ಸ್ಥಾನದಲ್ಲಿ ತಾಪ್ಸಿ ಪನ್ನು ನಟನೆಯ ಹಸೀನ್ ದಿಲ್ ರುಬಾ ಸಿನಿಮಾವಿದೆ. ಟಾಪ್ 5 ನಲ್ಲಿರುವ ಏಕೈಕ ಬಾಲಿವುಡ್ ಸಿನಿಮಾವಾಗಿದೆ.

ಅಂದಹಾಗೆ ಕನ್ನಡದ ಕೆಜಿಎಫ್-2 ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಎನ್ನುವುದಕ್ಕೆ ಟೀಸರ್ ಬಿಡುಗಡೆಯಾದಾಗಲೇ ಬಹಿರಂಗವಾಗಿದೆ. ಬಿಡುಗಡೆಯಾಗಿ ಕೆಲವೇ ಕ್ಷಣಗಳಲ್ಲಿ ಅತೀ ಹೆಚ್ಚು ಲೈಕ್ಸ್ ಮತ್ತು ವೀಕ್ಷಣೆ ಪಡೆಯುವ ಮೂಲಕ ದಾಖಲೆ ನಿರ್ಮಿಸಿತ್ತು. ಕೆಜಿಎಫ್-2 ಅಂದುಕೊಂಡಂತೆ ಆಗಿದ್ದರೆ ಜುಲೈ ತಿಂಗಳಲ್ಲಿ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ 2ನೇ ಅಲೆಯ ಪರಿಣಾಮ ಸಿನಿಮಾ ಲೆಕ್ಕಾಚಾರ ತಲೆಕೆಳಗಾಗಿದೆ.

ಸದ್ಯ ಕೆಜಿಎಫ್-2 ಯಾವಾಗ ಬಿಡುಗಡೆಯಾಗಲಿದೆ ಎನ್ನುವುದು ಅಭಿನಿಗಳ ಕುತೂಹಲ. ಮೂಲಗಳ ಪ್ರಕಾರ ಸೆಪ್ಟಂಬರ್ ನಲ್ಲಿ ಬರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಕೊರೊನಾ 3ನೇ ಅಲೆ ಪ್ರಾರಂಭವಾಗುತ್ತಿರುವ ಕಾರಣ ಸೆಪ್ಟಂಬರ್ ಕೂಡ ಅನುಮಾನವಾಗಿದೆ. ಕೊರೊನಾ ಪರಿಸ್ಥಿತಿ ಸುಧಾರಿಸಿದ ಬಳಿಕ ಸಿನಿಮಾ ದಿನಾಂಕ ಬಹಿರಂಗವಾಗುವ ಸಾಧ್ಯತೆ ಇದೆ.

ಇನ್ನು ನಟ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಆಗಸ್ಟ್ ನಲ್ಲಿ ಬರಲಿದೆ ಎನ್ನಲಾಗುತ್ತು. ಆದರೀಗ ಪುಷ್ಪ ಆಗಸ್ಟ್ ನಲ್ಲಿ ಬರುವುದು ಅನುಮಾನವಾಗಿದೆ. ಹೊಸ ದಿನಾಂಕ ಇನ್ನು ಬಹಿರಂಗವಾಗಿಲ್ಲ. ಪುಷ್ಪ ಕೂಡ ಎರಡು ಪಾರ್ಟ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


Click it and Unblock the Notifications











