For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್-2' ಸಿನಿಮಾ ತಂಡಕ್ಕೆ ಇಂದು ವಿಶೇಷ ದಿನ: ಯಾಕೆ?

  |

  ಭಾರತೀಯ ಚಿತ್ರಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಕೆಜಿಎಫ್-2 ಸಿನಿಮಾಗೆ ಇಂದು ವಿಶೇಷ ದಿನ. ಯಾಕಂದರೆ ಕೆಜಿಎಫ್-2 ಸಿನಿಮಾ ಸೆಟ್ಟೇರಿ ಇವತ್ತಿಗೆ ಒಂದು ವರ್ಷವಾಗಿದೆ. ಹೌದು, ಕಳೆದ ವರ್ಷ ಮಾರ್ಚ್ 13ರಂದು ಬಹು ನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಮುಹೂರ್ತ ನೆರವೇರಿತ್ತು.

  ಈ ದಿನವನ್ನು ಯಶ್ ಮರೆಯೋದಿಲ್ಲ | Yash | KGF 2 | Filmibeat Kannada

  ಬೆಂಗಳೂರಿನ ವಿಜಯನಗರದ ಕೋದಂಡರಾಮ ದೇವಾಲಯದಲ್ಲಿ ಮುಹೂರ್ತ ನೆರವೇರಿತ್ತು. ತೀರ ಸರಳವಾಗಿ ಚಿತ್ರದ ಮುಹೂರ್ತ ಮಾಡಿಕೊಂಡಿತ್ತು ಸಿನಿಮಾತಂಡ. ಪ್ರಶಾಂತ್ ನೀಲ್ ಅವರ ತಾಯಿ ಕ್ಯಾಮರಾ ಸ್ವಿಚ್ ಆನ್ ಮಾಡಿದ್ದರು. ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸಹೋದರ ಚಿತ್ರಕ್ಕೆ ಕ್ಲಾಪ್ ಮಾಡಿದ್ದರು.

  'KGF-2' ನಿರ್ದೇಶಕ ಪ್ರಶಾಂತ್ ನೀಲ್ ಗೆ ದುಬಾರಿ ಉಡುಗೊರೆ ನೀಡಿದ ಯಶ್'KGF-2' ನಿರ್ದೇಶಕ ಪ್ರಶಾಂತ್ ನೀಲ್ ಗೆ ದುಬಾರಿ ಉಡುಗೊರೆ ನೀಡಿದ ಯಶ್

  ಮೊದಲ ಭಾಗ ನೋಡಿದವರು ಪಾರ್ಟ್-2 ಯಾವಾಗ ಪ್ರಾರಂಭವಾಗುತ್ತೆ ಎಂದು ಕಾಯುತ್ತಿದ್ದ ಅಭಿಮಾನಿಗಳು ಮುಹೂರ್ತ ನೆರವೇರಿದ್ದು ನೋಡಿ ನಿಟ್ಟುಸಿರುಬಿಟ್ಟಿದ್ದರು. ದೇಶವೆ ಕಾಯುತ್ತಿರುವ ಸಿನಿಮಾದ ಮುಹೂರ್ತ ನಡೆದು ವರುಷವಾಗಿದೆ. ಈಗ ಸಿನಿಮಾ ಯಾವಾಗ ತೆರೆಗೆ ಬರುತ್ತೆ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.

  ಚಿತ್ರದ ಮುಹೂರ್ತ ನೆರವೇರಿಸಿ ರಾಕಿಂಗ್ ಸ್ಟಾರ್ ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. "ನಮ್ಮ‌ ಕನಸಿನ ಕೂಸು "ಕೆ.ಜಿ.ಎಫ್ - Chapter 1" ನ್ನು ನಿರೀಕ್ಷೆಗೂ ಮೀರಿ ಎತ್ತರಕ್ಕೆ ಬೆಳೆಸಿದ ಚಿತ್ರಪ್ರೇಮಿಗಳಿಗೆ ಸದಾ ಚಿರ ಋಣಿ. ಅದೇ ಗೆಲುವಿನ ಸಂತಸದಲ್ಲಿ "Chapter -2" ಪ್ರಾರಂಭವಾಗುತ್ತಿದೆ. ನಿಮ್ಮ ಹಾರೈಕೆ, ಆಶೀರ್ವಾದವಿರಲಿ" ಎಂದು ಬರೆದುಕೊಂಡು ಕ್ಲಾಪ್ ಬೋರ್ಡ್ ಅನ್ನು ಶೇರ್ ಮಾಡಿದ್ದರು.

  ಅಂದ್ಹಾಗೆ ಕೆಜಿಎಫ್-2 ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿದೆ. ಇನ್ನೇನು ಪ್ರಿ-ಪ್ರೊಡಕ್ಷನ್ ಕೆಲಸ ಶುರು ಮಾಡಲಿದೆ. ಚಿತ್ರದಿಂದ ಫಸ್ಟ್ ಲುಕ್ ಬಿಟ್ಟರೆ ಯಾರೆ ಯಾವ ಅಪ್ ಡೇಟ್ ಕೂಡ ಸಿಕ್ಕಿಲ್ಲ. ಹಾಗಾಗಿ ಅಭಿಮಾನಿಗಳು ಟೀಸರ್ ಗಾಗಿ ಕಾಯುತ್ತಿದ್ದಾರೆ. ಬುಹುನೀರಕ್ಷೆಯ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಅಂದರೆ ದಸರಾಗೆ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

  English summary
  Rocking star Yash starrer most expected KGF-2 completed one year as muhurtha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X