For Quick Alerts
  ALLOW NOTIFICATIONS  
  For Daily Alerts

  ಜುಲೈ 16ಕ್ಕೆ 'ಕೆಜಿಎಫ್ 2' ಬಿಡುಗಡೆ ಇಲ್ಲ: ಮತ್ಯಾವಾಗ?

  |

  ಭಾರತದ ಬಹುನಿರೀಕ್ಷಿತ ಸಿನಿಮಾ 'ಕೆಜಿಎಫ್ 2' ಜುಲೈ 16ಕ್ಕೆ ಬಿಡುಗುಡೆ ಆಗಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಇದೀಗ ಚಿತ್ರತಂಡ ಹೇಳಿರುವ ಪ್ರಕಾರ, 'ಕೆಜಿಎಫ್ 2' ಸಿನಿಮಾ ಜುಲೈ 16ಕ್ಕೆ ಬಿಡುಗಡೆ ಆಗುವುದಿಲ್ಲ.

  ಸಿನಿಮಾ ಬಿಡುಗಡೆ ಬಗ್ಗೆ ಟ್ವೀಟ್‌ ಮಾಡಿರುವ ಹೊಂಬಾಳೆ ಫಿಲಮ್ಸ್‌ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್, ''ಗ್ಯಾಂಗ್‌ಸ್ಟರ್‌ಗಳಿಂದ ಹಾಲ್ ತುಂಬಿದ್ದಾಗ ಮಾತ್ರವೇ ಮಾನ್ಸ್ಟರ್ (ರಾಕ್ಷಸ) ಬರುತ್ತಾನೆ. ಮಾನ್ಸ್ಟರ್ ಬರಲಿರುವ ಹೊಸ ದಿನಾಂಕವನ್ನು ಶೀಘ್ರವಾಗಿಯೇ ಘೋಷಿಸುತ್ತೇವೆ'' ಎಂದಿದ್ದಾರೆ.

  ಕೊರೊನಾ ಎರಡನೇ ಅಲೆ ಕಾರಣದಿಂದಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಬಂದ್ ಆಗಿವೆ. ತೆಲಂಗಾಣ, ಆಂಧ್ರ, ಗುಜರಾತ್ ಹೊರತುಪಡಿಸಿ ಇನ್ನಾವ ರಾಜ್ಯಗಳಲ್ಲಿಯೂ ಚಿತ್ರಮಂದಿರಗಳು ತೆರೆದಿಲ್ಲ. ಆಂಧ್ರ, ಗುಜರಾತ್‌ಗಳಲ್ಲಿ ಸಹ 50% ಸೀಟು ಸಾಮರ್ಥ್ಯದೊಂದಿಗೆ ಮಾತ್ರವೇ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. 'ಕೆಜಿಎಫ್ 2' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ದೇಶದ ಹಲವು ರಾಜ್ಯಗಳಲ್ಲಿ ಬಿಡುಗಡೆ ಆಗಲಿದೆ. ಹಾಗಾಗಿ ಎಲ್ಲ ರಾಜ್ಯಗಳಲ್ಲಿಯೂ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆದಿರುವುದು ಅವಶ್ಯಕವಾಗಿದೆ.

  ಚಿತ್ರಮಂದಿರಗಳು ಬಂದ್ ಆಗಿರುವ ಅಥವಾ 50% ಅಷ್ಟೆ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂಬ ಕಾರಣದಿಂದ ಚಿತ್ರತಂಡ ಈ ನಿರ್ಣಯ ಕೈಗೊಂಡಿದೆ. 'ಕೆಜಿಎಫ್ 2' ಸಿನಿಮಾದ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರವೇ ಘೋಷಿಸಲಿದೆ.

  ಕರ್ನಾಟಕದಲ್ಲಿ ಮುಂದಿನ ವಾರ ಚಿತ್ರಮಂದಿರಗಳು ಭಾಗಶಃ ತೆರೆಯುವ ಸಾಧ್ಯತೆ ಇದೆ. ಇಂದಷ್ಟೆ ವಾಣಿಜ್ಯ ಮಂಡಳಿ ಸದಸ್ಯರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚಿತ್ರಮಂದಿರಗಳನ್ನು ಪುನಃ ತೆರೆಯುವಂತೆ ಆದೇಶ ಹೊರಡಿಸಿರೆಂದು ಬೇಡಿಕೆ ಇಟ್ಟಿದ್ದಾರೆ. ಸಿಎಂ ಸಹ ಸಕಾರಾತ್ಮವಕಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

  ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ಶಿವ ರಾಜ್ ಕುಮಾರ್ ಕೊಟ್ಟ ಗಿಫ್ಟ್ ನೋಡಿ | Filmibeat Kannada

  'ಕೆಜಿಎಫ್ 2' ಸಿನಿಮಾದಲ್ಲಿ ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಸಹ ಜೊತೆಯಾಗಿದ್ದಾರೆ. ಸಿನಿಮಾದ ಬಗ್ಗೆ ಭಾರತದಾದ್ಯಂತ ಭಾರಿ ನಿರೀಕ್ಷೆ ಇದೆ.

  English summary
  Yash's KGF Chapter 2 New Release Date Will Be Announced Soon. KGF 2 movie supposed release on July 16 due to corona situation release gets postponed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X