»   » ಯಶ್ 'KGF' ಚಿತ್ರದ ಮತ್ತೊಂದು ಲುಕ್ ನಾಳೆ ರಿಲೀಸ್

ಯಶ್ 'KGF' ಚಿತ್ರದ ಮತ್ತೊಂದು ಲುಕ್ ನಾಳೆ ರಿಲೀಸ್

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆಜಿಎಫ್' ಸಿನಿಮಾದ ಎರಡನೇ ಲುಕ್ ನಾಳೆ(ಆಗಸ್ಟ್ 28) ರಿಲೀಸ್ ಆಗಲಿದೆ. ನಾಳೆ ರಾತ್ರಿ 9 ಗಂಟೆಗೆ ಚಿತ್ರದ ಎರಡನೇ ಪೋಸ್ಟರ್ ರಿಲೀಸ್ ಆಗಲಿದ್ದು, ಈ ವಿಷಯವನ್ನು ಸ್ವತಃ ಚಿತ್ರತಂಡ ಸ್ಪಷ್ಟಪಡಿಸಿದೆ.

ಯಶ್ 'KGF' ಚಿತ್ರದ ಚಿತ್ರೀಕರಣಕ್ಕೆ ಮೈಸೂರು ವಿದ್ಯಾರ್ಥಿಗಳ ವಿರೋಧ!

ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಒಂದು ಪೋಸ್ಟರ್ ಸಖತ್ ರೆಸ್ಪಾನ್ಸ್ ಗಿಟ್ಟಿಸಿತ್ತು. ಯಶ್ ಅವರ ಖದರ್ ಲುಕ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಅಂದಹಾಗೆ, ಈ ಚಿತ್ರಕ್ಕಾಗಿ ಯಶ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಸ್ಕ್ರಿಪ್ಟ್ ಗೆ ತಕ್ಕಂತೆ ಮೇಕ್ ಓವರ್ ಮಾಡಿಕೊಂಡಿದ್ದಾರೆ. 'ಉಗ್ರಂ' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇದೆ.

'ಕೆ.ಜಿ.ಎಫ್' ಚಿತ್ರದಲ್ಲಿ ಯಶ್ ರೆಟ್ರೋ ಸ್ಟೈಲ್ ಬಹಿರಂಗ

Yash's 'KGF movie' 2nd poster will be releasing on tomorrow(august28).

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಿಧಿ ಶೆಟ್ಟಿ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಸದ್ಯ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

English summary
Actor Yash's 'KGF' movie 2nd poster will be releasing on tomorrow(august28).
Please Wait while comments are loading...