»   » ಸೌತ್ ಸಿನಿಮಾ ರಂಗದಲ್ಲಿ ಶುರುವಾಯ್ತು ಯಶ್ 'KGF' ಹವಾ!

ಸೌತ್ ಸಿನಿಮಾ ರಂಗದಲ್ಲಿ ಶುರುವಾಯ್ತು ಯಶ್ 'KGF' ಹವಾ!

Posted By:
Subscribe to Filmibeat Kannada
KGF: Kannada movie second poster is released

'ಕೆಜಿಎಫ್' ಚಿತ್ರ ಸದ್ಯ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಆದರೆ ಈಗ ಕನ್ನಡದಲ್ಲಿ ಮಾತ್ರವಲ್ಲದೆ ಇಡೀ ಸೌತ್ ಸಿನಿರಂಗದಲ್ಲಿ 'ಕೆಜಿಎಫ್' ಅಬ್ಬರ ಶುರುವಾಗಿದೆ. ಅದಕ್ಕೆ ಪ್ರಮುಖ ಕಾರಣ ಅಂದರೆ 'ಕೆಜಿಎಫ್' ಪೋಸ್ಟರ್.

'ಕೆಜಿಎಫ್' ಸಿನಿಮಾದ ಎರಡನೇ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಪೋಸ್ಟರ್ ನಲ್ಲಿನ ಯಶ್ ಲುಕ್ ಸಖತ್ ಖದರ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಎಲ್ಲಿ ನೋಡಿದರೂ ಯಶ್ 'ಕೆಜಿಎಫ್' ಅಬ್ಬರ ನಡೆಯುತ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಮೊದಲ ಪೋಸ್ಟರ್ ಗಿಂತ ಈ ಪೋಸ್ಟರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮುಂದೆ ಓದಿ...

'ಕೆಜಿಎಫ್' ಲುಕ್

ಯಶ್ ಅಭಿನಯದ ಬಹು ನಿರೀಕ್ಷಿತ 'ಕೆಜಿಎಫ್' ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಇದರಿಂದ ಚಿತ್ರದಲ್ಲಿನ ಯಶ್ ಲುಕ್ ಈಗ ಟಾಕ್ ಆಫ್ ದಿ ಟೌನ್ ಆಗಿದೆ.


ಸೌತ್ ಸಿನಿರಂಗದಲ್ಲಿ ಅಬ್ಬರ

ಸೌತ್ ಸಿನಿರಂಗದಲ್ಲಿ ಈಗ 'ಕೆಜಿಎಫ್' ಅಬ್ಬರ ಶುರುವಾಗಿದೆ. ದಕ್ಷಿಣ ಭಾರತದ ಮೂರು ಭಾಷೆಯಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗಿನ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿ ಹವಾ ಎಬ್ಬಿಸಿದೆ.


ಹಿಂದಿಗೆ ಡಬ್..?

ಮೂರು ಭಾಷೆಯಲ್ಲಿ ಬರುತ್ತಿರುವ 'ಕೆಜಿಎಫ್' ಸಿನಿಮಾ ಹಿಂದಿಗೆ ಡಬ್ ಆಗುವ ಸಾದ್ಯತೆ ಇದೆಯಂತೆ.


'ಕೆ.ಜಿ.ಎಫ್' ಚಿತ್ರದಲ್ಲಿ ಯಶ್ ರೆಟ್ರೋ ಸ್ಟೈಲ್ ಬಹಿರಂಗ


ಮಹತ್ವಾಕಾಂಕ್ಷೆಯ ಸಿನಿಮಾ

ಯಶ್ ಸಿನಿ ಕೆರಿಯರ್ ನಲ್ಲಿ 'ಕೆಜಿಎಫ್' ಒಂದು ಮಹತ್ವದ ಸಿನಿಮಾವಾಗಿದೆ. ಯಶ್ ನಟನೆಯ ಅತಿ ಹೆಚ್ಚು ಬಜೆಟ್ ಸಿನಿಮಾ ಇದಾಗಿದ್ದು, ಯಶ್ ಪಾತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.


ಯಶ್ 'KGF' ಚಿತ್ರದ ಚಿತ್ರೀಕರಣಕ್ಕೆ ಮೈಸೂರು ವಿದ್ಯಾರ್ಥಿಗಳ ವಿರೋಧ!


'ಉಗ್ರಂ' ನಿರ್ದೇಶಕ

'ಕೆಜಿಎಫ್' ಚಿತ್ರವನ್ನು 'ಉಗ್ರಂ' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. 'ರಾಜಕುಮಾರ' ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಯಶ್ ಜೋಡಿಯಾಗಿ ನಟಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.


ಮೈಸೂರಿನಲ್ಲಿ ಚಿತ್ರೀಕರಣ

'ಕೆಜಿಎಫ್' ಚಿತ್ರದ ಶೂಟಿಂಗ್ ಸದ್ಯ ಮೈಸೂರಿನ ಹಲವೆಡೆ ಭರ್ಜರಿಯಾಗಿ ನಡೆಯುತ್ತಿದ್ದು, ಈ ವರ್ಷದ ಕೊನೆಯಲ್ಲಿ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ.


English summary
Rocking Star Yash starrer Kannada movie 'KGF' second poster is out. The movie is direted by Prashanth Neel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada