For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್‌ 08 ಗೆ ರಾಕಿಂಗ್‌ ಸ್ಟಾರ್ ಯಶ್ ತಾಯಿ?

  |

  ಸ್ಟಾರ್ ನಟ ಯಶ್ ಅವರ ತಾಯಿ ಪುಷ್ಪಾ ಅವರು ಕನ್ನಡ ಬಿಗ್‌ಬಾಸ್ 8 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಕೆಲವು ದಿನಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹರಿದಾಡುತ್ತಿದೆ.

  ಬಿಗ್ ಬಾಸ್ ಗೆ ಯಶ್ ತಾಯಿ..? | Yash mother Pushpa | Filmibeat Kannada

  ಪುಷ್ಪಾ ಅವರು ಕೆಲವು ದಿನಗಳ ಹಿಂದೆಯಷ್ಟೆ ಸಿಹಿ ಕಹಿ ಚಂದ್ರು ನಡೆಸಿಕೊಡುವ ಅಡುಗೆ ಕಾರ್ಯಕ್ರಮ 'ಬೊಂಬಾಟ್ ಭೋಜನ'ದಲ್ಲಿ ಭಾಗವಹಿಸಿದ್ದರು. ಅದಾದ ನಂತರ ಪುಷ್ಪಾ ಅವರು ಬಿಗ್‌ಬಾಸ್ ಗೆ ಬರಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡಲು ಆರಂಭವಾಯಿತು.

  ಆದರೆ ಯಶ್ ಅಭಿಮಾನಿಗಳು ಇದನ್ನು ಅಲ್ಲಗಳೆದಿದ್ದಾರೆ. ಯಶ್ ಗೆ ಹತ್ತಿರದವರೂ ಸಹ 'ಯಶ್ ತಾಯಿ ಬಿಗ್‌ಬಾಸ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ' ಎಂದು ಹೇಳಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

  ಅಡುಗೆ ಕಾರ್ಯಕ್ರಮದಲ್ಲಿ ಪುಷ್ಪಾ ಅವರು ಭಾಗವಹಿಸಿದ್ದಾಗ ಆ ಕಾರ್ಯಕ್ರಮವು ಹಲವರ ಗಮನ ಸೆಳೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಹ ಅಡುಗೆ ಕಾರ್ಯಕ್ರಮದ ವಿಡಿಯೋಗಳು ಹರಿದಾಡಿದ್ದವು. ಆ ಕಾರ್ಯಕ್ರಮದಲ್ಲಿ ಯಶ್, ರಾಧಿಕಾ ಅವರುಗಳು ಮೆಚ್ಚಿನ ಅಡುಗೆಯನ್ನು ಪುಷ್ಪಾ ಮಾಡಿದ್ದರು.

  ಯಶ್ ಅಭಿಮಾನಿಗಳ ಫ್ಯಾನ್ ಪೇಜ್‌ಗಳು, ಯಶ್ ತಾಯಿ ಬಿಗ್‌ಬಾಸ್ ಗೆ ಹೋಗುತ್ತಾರೆ ಎಂಬ ಸುದ್ದಿಯನ್ನು ಅಲ್ಲಗಳೆದಿವೆ. ವದಂತಿಗಳನ್ನು ನಂಬಬೇಡಿ ಎಂದು ಮನವಿ ಮಾಡಿವೆ.

  ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ 8 ರಿಯಾಲಿಟಿ ಶೋ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಬಿಗ್‌ಬಾಸ್ ಪ್ರೋಮೊ ಈಗಾಗಲೇ ಬಡುಗಡೆ ಆಗಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಶೋ ಪ್ರಸಾರವಾಗುವ ನಿರೀಕ್ಷೆ ಇದೆ.

  English summary
  Yash's mother Pushpa may enter Bigg Boss Kannada season 08. But Yash's close aids decalin the news.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X