"ನನ್ನ ಮಗ ಕಲ್ಲುಗುಂಡು.. ಅವನನ್ನು ಅಲ್ಲಾಡಿಸೋಕೆ ಆಗಲ್ಲ"; ವೇಣುಸ್ವಾಮಿಗೆ ಯಶ್ ತಾಯಿ ತಿರುಗೇಟು

ಕನ್ನಡ ನಟ ಯಶ್ ಬಗ್ಗೆ ಆಂಧ್ರದ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಹೇಳಿಕೆ ಭಾರೀ ವೈರಲ್ ಆಗಿತ್ತು. 'ಕೆಜಿಎಫ್' ಸರಣಿ ಸಿನಿಮಾಗಳ ಬಗ್ಗೆ ಯಶ್ ಡಿಪ್ರೆಶನ್‌ನಲ್ಲಿದ್ದಾರೆ ಎಂದು ವೇಣುಸ್ವಾಮಿ ಹೇಳಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಇದೀಗ ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ. ನನ್ನ ಮಗ ಗುಂಡುಕಲ್ಲು.. ಅವನಿಗೆ ಏನೂ ಆಗಲ್ಲ. ಏನೂ ಗೊತ್ತಿಲ್ಲದೇ ಆ ವ್ಯಕ್ತಿ ಮಾತನಾಡಿದ್ದಾರೆ. ಆತನ ಹೆಸರು ನನಗೆ ಗೊತ್ತಿಲ್ಲ ಎಂದಿದ್ದಾರೆ.

ಸಿನಿಮಾ ತೆರೆಯರ ಬಗ್ಗೆ ಭವಿಷ್ಯ ಹೇಳಿ ವೇಣುಸ್ವಾಮಿ ಗಮನ ಸೆಳೆಯುತ್ತಾ ಬಂದಿದ್ದಾರೆ. ರಕ್ಷಿಕಾ ಮಂದಣ್ಣ, ನಿಶ್ವಿಕಾ ನಾಯ್ಡು ಸೇರಿ ಕೆಲ ನಟಿ ಮಣಿಯರು ವೇಣುಸ್ವಾಮಿ ಬಳಿಕ ಯಶಸ್ಸಿಗಾಗಿ ಪೂಜೆ, ಹೋಮಗಳನ್ನು ಮಾಡಿಸಿದ್ದಾರೆ. ನಾಗಚೈತನ್ಯಾ ಹಾಗೂ ಸಮಂತಾ ಡಿವೋರ್ಸ್ ಬಗ್ಗೆ ಬಹಳ ಹಿಂದೆಯೇ ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ಅದು ನಿಜವಾಗಿತ್ತು. ಆ ಬಳಿಕ ಆತನ ಹೇಳಿಕೆಗಳು ಬಹಳ ಚರ್ಚೆ ಹುಟ್ಟು ಹಾಕುತ್ತಾ ಬರ್ತಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಯಶ್ ಟಾಪಿಕ್ ತೆಗೆದಿದ್ದರು.

Yash s Mother Slams Venuswamy Over Depression Claims Calls It Publicity Gimmick

ಸದ್ಯ ಬಾಸ್ ಟಿವಿ ಯೂಟ್ಯೂಬ್ ಚಾನಲ್‌ ಜೊತೆ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ಮಾತನಾಡಿದ್ದಾರೆ. "ಒಬ್ಬ ಸೆಲೆಬ್ರೆಟಿ ಬಗ್ಗೆ ಹಿಂದು ಮುಂದು ಗೊತ್ತಿಲ್ಲದೇ ವೇಣುಸ್ವಾಮಿ ಮಾತನಾಡಿದ್ದಾರೆ. ಕಷ್ಟ ಇರುವ ಸಾಕಷ್ಟು ಜನ ಇದ್ದಾರೆ. ಅವರ ಬಗ್ಗೆ ಬಿಟ್ಟು ಸೆಲೆಬ್ರೆಟಿಗಳ ಬಗ್ಗೆ ಯಾಕೆ ಮಾತನಾಡಬೇಕು. ಎಲ್ಲಾ ಟಿಆರ್‌ಪಿಗಾಗಿ ಮಾತನಾಡ್ತಾರೆ. ಯಶ್ ಡಿಪ್ರೆಶನ್‌ನಲ್ಲಿದ್ದಾರೆ ಅಂದ್ರೆ, ಅಭಿಮಾನಿಗಳು ಬೇಸರಗೊಂಡಿದ್ದಾರೆ. ನನಗೆ ಫೋನ್ ಮಾಡಿ ಕೆಲವರು ಮಾತನಾಡಿದ್ರು. ಕನ್ನಡದವರು ಅಂದ್ರೆ ಅಷ್ಟು ಹಗುರನಾ? ನಾವು ತೆಲುಗು ಜನರ ಬಗ್ಗೆ ಮಾತನಾಡ್ತೀವಾ?" ಎಂದು ಪ್ರಶ್ನಿಸಿದ್ದಾರೆ.

ಯಶ್ ತೆಲುಗಿನಲ್ಲಿ ಎಷ್ಟು ಚೆನ್ನಾಗಿ ಸಿನಿಮಾಗಳ ಪ್ರಚಾರ ಮಾಡ್ತಾನೆ. ಆದರೆ ಇವ್ರು ಹೀಗೆ ಕೊತ್ಕೊಂಡು ಡಿಪ್ರೆಶನ್‌ನಲ್ಲಿದ್ದಾನೆ ಅಂತಾರಲ್ಲ. ಅವರಿಗೆ ಸರಿಯಾಗಿ ವಿಷಯ ಗೊತ್ತಾ? ಊಹಾಪೋಹ ತಿಳ್ಕೊಂಡು ಮಾತನಾಡಿದ್ದಾರೆ. ಆ ವೇಣುಸ್ವಾಮಿ ಯಾರು ಎನ್ನುವುದೇ ಗೊತ್ತಿಲ್ಲ ಎಂದು ಪುಷ್ಪಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಯಶ್ ಕೆಜಿಎಫ್ ಸಿನಿಮಾ ಮಾಡಿರುವುದು ಜಗತ್ತಿಗೆ ಗೊತ್ತು. ಇಂತಹವರಿಂದಲೇ ಒಳ್ಳೆ ಪೂಜಾರಿಗಳು, ಜ್ಯೋತಿಷಿಗಳಿಗೂ ಕೆಟ್ಟ ಹೆಸರು. ಯಶ್ ಈಗ ನಮ್ಮ ಮಗ ಅಲ್ಲ.. ವಿಶ್ವದ ಮಗ.. ಆತನ ಬಗ್ಗೆ ಮಾತನಾಡುವಾಗ ಗೊತ್ತಿರಬೇಕು" ಎಂದಿದ್ದಾರೆ.

Yash s Mother Slams Venuswamy Over Depression Claims Calls It Publicity Gimmick

ಕನ್ನಡದ ಕಲಾವಿದ ಎಂದು ಹಗುರವಾಗಿ ಮಾತನಾಡುತ್ತಾರಾ? ಎಂದು ಪುಷ್ಪಾ ಬೇಸರ ವ್ಯಕ್ತಪಡಿಸಿದ್ದಾರೆ. "ನನ್ನ ಮಗ ಕಲ್ಲುಗುಂಡು ಕಣ್ರೀ, ಅವನನ್ನು ಯಾರೂ ಅಲ್ಲಾಡಿಸೋಕೆ ಆಗಲ್ಲ.. ಯಶ್ ಬಗ್ಗೆ ತಿಳ್ಕೊಂಡು ಮಾತನಾಡ್ಬೇಕು. ಸುಮ್ನೆ ವೇಣುಸ್ವಾಮಿ ಕೆಟ್ಟ ಹೆಸರು ತಗೊಂಡ್ರು.. ಡಿಪ್ರೆಶನ್‌ಗೆ ಹೋಗುವ ಪೀಸಾ ಅದು.. ಏನೋ ಮಾತನಾಡಲು ಹೋಗಿ ಮತ್ತೇನೋ ಮಾತನಾಡಿದ್ದಾರೆ. ಯಶ್ ಅಂತ ಅಲ್ಲ, ಯಾರ ಬಗ್ಗೆ ಮಾತನಾಡಿದ್ರು ಬೇಸರವಾಗುತ್ತದೆ. ಅವರು ಪಡುವ ಕಷ್ಟ ನಮಗೆ ಗೊತ್ತು" ಎಂದು ವಿವರಿಸಿದ್ದಾರೆ.

ನಮ್ಮ ಮಕ್ಕಳನ್ನು ನಾವೇ ಸಾಕಿರೋದು.. ಈಗ ಬಂದಿದ್ದಾರೆ.. ಇದಕ್ಕೂ ಮುನ್ನ ಯಶ್ ಯಾರು ಅಂತ ಅವರಿಗೆ ಗೊತ್ತಿಲ್ಲ.. ಯಶ್ ಸೆಲೆಬ್ರೆಟಿ ಆದ್ಮೇಲೆ ನಾವು ಸಾಕಿದ್ದು ನಾವು ಅವಕಾಶ ಕೊಟ್ಟಿದ್ದು ಅಂತಾರೆ.. ಅವಕಾಶ ಕೊಟ್ಟವರೆಲ್ಲಾ ಯಾಕೆ ಬೆಳೆಯಲಿಲ್ಲ.. ಈಗ ಯಶ್‌ಗೆ ನಾವು ಅವಕಾಶ ಕೊಟ್ಟಿದ್ದು ಅಂತಾರೆ.. ಯಶ್, ಸುದೀಪ್, ದರ್ಶನ್, ಶಿವಣ್ಣ ಹೆಸರು ಹೇಳಿದ್ರೆ, ಜನ ನೋಡ್ತಾರೆ ಅಂತ ಸುಮ್ನೆ ಮಾತನಾಡ್ತಾರೆ. ವೇಣುಸ್ವಾಮಿಗೆ ಕನ್ನಡದವರ ತಾಕತ್ತು ಏನು ಅಂತ ಗೊತ್ತಿಲ್ಲ. ಅದಕ್ಕೆ ಮಾತನಾಡಿದ್ದಾರೆ. ಇದೆಲ್ಲಾ ಪಬ್ಲಿಸಿಟಿ ಗಿಮಿಕ್ ಅಷ್ಟೆ ಎಂದು ಪುಷ್ಪಾ ಅರುಣ್‌ಕುಮಾರ್ ತಿಳಿಸಿದ್ದಾರೆ.

More from Filmibeat

Read more about: yash kgf tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X