ಯಶ್ 'ಟಾಕ್ಸಿಕ್' ಸಿನಿಮಾ ಫಲಿತಾಂಶ ಏನಾಗುತ್ತೆ? ಶಾಕಿಂಗ್ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ 100 ದಿನ ಬಾಕಿಯಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಕೆವಿಎನ್ ಪ್ರೊಡಕ್ಷನ್ ಜೊತೆ ಸೇರಿ ಯಶ್ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಮಾರ್ಚ್ 19ಕ್ಕೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

'KGF'-2 ಬಂದು 3 ವರ್ಷಗಳ ಬಳಿಕ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ನಯನತಾರಾ, ಕಿಯಾರಾ ಅದ್ವಾನಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ವಿದೇಶದ ಭಾಷೆಗಳಿಗೆ ಡಬ್ ಆಗಿ ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

Yash s Toxic Nears Release Astrologer Predicts Big Hit but Not Another KGF

ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದಿದ್ದ ಟೀಸರ್ 'ಟಾಕ್ಸಿಕ್' ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. 'KGF'-2 ಮೀರಿಸಿ ಈ ಸಿನಿಮಾ ಸದ್ದು ಮಾಡುತ್ತದೆ ಎನ್ನುವ ಲೆಕ್ಕಾಚಾರ ನಡೀತಿದೆ. ಸ್ವತಃ ಯಶ್‌ ಕೂಡ ಇಂತಾದೊಂದು ಒತ್ತಡಕ್ಕೆ ಸಿಲುಕಿರುವುದು ಸುಳ್ಳಲ್ಲ. 'KGF'-2 ಮುಂದೇನು ಎನ್ನುವವರಿಗೆ ರಾಕಿಭಾಯ್ ಸರಿಯಾದ ಉತ್ತರ ಕೊಡಲು ಮನಸ್ಸು ಮಾಡಿದ್ದಾರೆ. ಸದ್ಯ 'ಟಾಕ್ಸಿಕ್' ಚಿತ್ರದ ಫಲಿತಾಂಶ ಏನಾಗಬಹುದು ಎಂದು ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದಾರೆ.

ಟ್ವಿಟ್ಟರ್‌ನಲ್ಲಿ ಆಕ್ಟೀವ್ ಆಗಿರುವ ಪ್ರಶಾಂತ್ ಕಿಣಿ ನೆಟ್ಟಿಗರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ತಮ್ಮ ಲೆಕ್ಕಾಚಾರದ ಪ್ರಕಾರ ಭವಿಷ್ಯ ಹೇಳುತ್ತಾರೆ. ಅಭಿಮಾನಿಯೊಬ್ಬರು ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಭವಿಷ್ಯ ಏನಾಗಬಹುದು ಎನ್ನುವ ಪ್ರಶ್ನೆಗೆ "ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಟಾಕ್ಸಿಕ್ ದೊಡ್ಡ ಹಿಟ್ ಆಗಲಿದೆ.... ಆದರೆ 'KGF' ರೀತಿ ಭಾರೀ ಪರಿಣಾಮ ಬೀರುವುದಿಲ್ಲ..... ಯಶ್‌ಗೆ 'KGF' ನಂತಹ ಮತ್ತೊಂದು ಟ್ರೆಂಡ್ ಸೆಟ್ಟಿಂಗ್ ಸಿನಿಮಾ ಎಂದಿಗೂ ಸಿಗುವುದಿಲ್ಲ.....!! " ಎಂದು ರಿಪ್ಲೇ ಮಾಡಿದ್ದಾರೆ.

ಜ್ಯೋತಿಷಿ ಪ್ರಶಾಂತ್ ಕಿಣಿ ನುಡಿದ ಸಾಕಷ್ಟು ಭವಿಷ್ಯವಾಣಿ ನಿಜವಾಗಿದೆ. ಎರಡು ವರ್ಷಗಳ ಹಿಂದೆಯೇ ತೆಲುಗು ನಟಿ ಸಮಂತಾ 2ನೇ ಮದುವೆ ಬಗ್ಗೆ ಟ್ವೀಟ್ ಮಾಡಿದ್ದರು. " ತೆಲುಗು ನಟಿ ಸುಮಂತ ರುತ್ ಪ್ರಭು ಮೇ 2024ರ ನಂತರ ಮತ್ತೆ ಪ್ರೀತಿಯಲ್ಲಿ ಬೀಳಲಿದ್ದಾರೆ, ಅವರು 2025ರಲ್ಲಿ ಆ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ, ಅವರು 2026ರ ನಂತರ ಅಮೆರಿಕಕ್ಕೆ ತೆರಳುತ್ತಾರೆ, ಆಕೆಯ 2ನೇ ಮದುವೆ ತುಂಬಾ ಯಶಸ್ವಿಯಾಗಿ ತಮ್ಮ ಜೀವನದ ಕೊನೆಯವರೆಗೂ ಅವರೊಂದಿಗೆ ಇರುತ್ತಾರೆ" ಎಂದು ಹೇಳಿದ್ದರು.

ಡಿಸೆಂಬರ್ 1ರಂದು ನಿರ್ದೇಶಕ ರಾಜ್ ನಿಡುಮೊರು ಜೊತೆ ಸಮಂತಾ 2ನೇ ಮದುವೆ ಆಗಿದ್ದು ಗೊತ್ತೇಯಿದೆ. "ತೆಲುಗು ಚಿತ್ರನಟಿ ಸಮಂತಾ 2025ರಲ್ಲಿ ಮದುವೆಯಾಗುತ್ತಾರೆಂದು ನಾನು ಅಂದೇ ಭವಿಷ್ಯ ನುಡಿದಿದ್ದೆ. ನನ್ನ ಭವಿಷ್ಯ ನಿಜವಾಯಿತು" ಎಂದು ಪ್ರಶಾಂತ್ ಕಿಣಿ ಇತ್ತೀಚೆಗೆ ಪೋಸ್ಟ್ ಮಾಡಿದ್ದರು.

'ಟಾಕ್ಸಿಕ್' ಚಿತ್ರಕ್ಕೆ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳ್ತಿದ್ದಾರೆ. ರವಿ ಬಸ್ರೂರು ಹಾಗೂ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡ್ತಾರೆ ಎನ್ನಲಾಗ್ತಿದೆ. ವಿದೇಶದ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಲ್ಲಿ ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ಯಶ್ ನಟಿಸುತ್ತಿದ್ದಾರೆ. ವಾರದ ಹಿಂದೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉದ್ದನೆಯ ಕೂದಲು ಬಿಟ್ಟು ಸ್ಟೈಲಿಶ್ ಅವತಾರದಲ್ಲಿ ಯಶ್ ಮಿಂಚಿದ್ದರು. ಆದರೆ 4 ದಿನಗಳ ಹಿಂದೆ ಮಗಳು ಐರಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕೂದಲಿಗೆ ಕತ್ತರಿ ಹಾಕಿ ಮತ್ತೆ ಅಚ್ಚರಿ ಮೂಡಿಸಿದ್ದರು. ಇದೆಲ್ಲಾ 'ಟಾಕ್ಸಿಕ್' ಚಿತ್ರಕ್ಕಾಗಿ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ.

More from Filmibeat

Read more about: yash kgf toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X