'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಮುಂದೂಡಲು ಯಶ್ ಗಡ್ಡವೇ ಕಾರಣವಾಯ್ತಾ?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ರಿಲೀಸ್ 3 ತಿಂಗಳು ಮುಂದೂಡಲಾಗಿದೆ. ಇರಾನ್- ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಅರಬ್ ದೇಶಗಳಲ್ಲಿ ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿರುವುದಾಗಿ ಚಿತ್ರತಂಡ ಹೇಳಿದೆ. ಆದರೆ ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಮಾಡಲು ಬೇರೆಯದ್ದೇ ಕಾರಣ ಇದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಬೇಕಿತ್ತು. ಇಷ್ಟೊತ್ತಿಗೆ ಟ್ರೈಲರ್ ರಿಲೀಸ್ ಆಗಬೇಕಿತ್ತು. ಆದರೆ ಸಿನಿಮಾ ಬಿಡುಗಡೆಗೆ 15 ದಿನ ಬಾಕಿ ಇರುವಾಗ ಚಿತ್ರತಂಡ ಶಾಕ್ ಕೊಟ್ಟಿತ್ತು. 'ಧುರಂಧರ್- 2' ಹಾಗೂ 'ಟಾಕ್ಸಿಕ್' ಚಿತ್ರಗಳು ಒಂದೇ ದಿನ ತೆರೆಗಪ್ಪಳಿಸಬೇಕಿತ್ತು. ಇದು ದಶಕದ ಬಾಕ್ಸಾಫೀಸ್ ಕ್ಲ್ಯಾಶ್ ಎಂದೇ ಹೇಳಲಾಗಿತ್ತು. ಒಂದು ವೇಳೆ 'ಧುರಂಧರ್- 2' ರಿಲೀಸ್ ತಡವಾಗಬಹುದು ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಅಷ್ಟರಲ್ಲೇ 'ಟಾಕ್ಸಿಕ್' ಶಾಕ್ ಎದುರಾಗಿತ್ತು.

Yash s Toxic Release Postponed by 3 Months VFX Issues and War Impact Spark Debate

ಮಾರ್ಚ್ 4ರಂದು 'ಟಾಕ್ಸಿಕ್' ನೋಡಿದ್ದ ಯಶ್ ಶಾಕ್ ಆಗಿದ್ದರಂತೆ. ವಿಎಫ್‌ಎಕ್ಸ್ ಗುಣಮಟ್ಟ ಬಹಳ ಕೆಟ್ಟದಾಗಿದೆ ಎಂದು ಯಶ್ ಬೇಸರಗೊಂಡಿದ್ದಾರೆ. ಹಾಗಾಗಿ ಅದನ್ನು ಸರಿಪಡಿಸಿಕೊಂಡು ಸಿನಿಮಾ ತೆರೆಗೆ ತರುವ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ 'ತಬಾಹಿ' ವೀಡಿಯೋ ಸಾಂಗ್ ಬಿಡುಗಡೆ ಮಾಡಲು ಚಿತ್ರತಂಡ ಹಿಂದೇಟು ಹಾಕಿದ್ದಾಗಿ ಹೇಳಲಾಗ್ತಿದೆ.

ಗುಣಮಟ್ಟದ ವಿಚಾರದಲ್ಲಿ ರಾಜಿ ಆಗುವುದು ಬೇಡ ಎಂದು ಯಶ್ ಈ ನಿರ್ಧಾರಕ್ಕೆ ಬಂದಿರುವುದಾಗಿ ಎನ್ನಲಾಗ್ತಿದೆ. ರಾಯ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿರುವ ಒಂದಷ್ಟು ದೃಶ್ಯಗಳನ್ನು ರೀ-ಶೂಟ್ ಮಾಡಬೇಕು ಎಂದು ಮನಸ್ಸು ಮಾಡಿದ್ದಾರೆ, ಸದ್ಯ ಯಶ್ ಗಡ್ಡಕ್ಕೆ ಕತ್ತರಿ ಬಿದ್ದಿದೆ. ಹಾಗಾಗಿ ಎರಡು ತಿಂಗಳು ಬಿಟ್ಟು ಆ ದೃಶ್ಯಗಳನ್ನು ರೀ-ಶೂಟ್ ಮಾಡಿ ಬಳಿಕ ಜೂನ್ 4ರಂದು ಸಿನಿಮಾ ಬಿಡುಗಡೆಗೆ ಮನಸ್ಸು ಮಾಡಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಆದರೆ ಚಿತ್ರತಂಡದ ಆಪ್ತ ಮೂಲಗಳು ಈ ವದಂತಿಗಳನ್ನು ತಳ್ಳಿ ಹಾಕಿದೆ. ಇಸ್ರೇಲ್- ಇರಾನ್ ಯುದ್ಧದ ಹಿನ್ನೆಲೆಯಲ್ಲೇ ಸಿನಿಮಾ ರಿಲೀಸ್ ಮುಂದೂಡಲಾಗಿದೆ ಎಂದಿದ್ದಾರೆ.

Yash s Toxic Release Postponed by 3 Months VFX Issues and War Impact Spark Debate

"ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕಾರಣಕ್ಕೆ 'ಟಾಕ್ಸಿಕ್' ಸಿನಿಮಾ ರಿಲೀಸ್ ಮುಂದೂಡಲಾಯಿತು. ಗಲ್ಫ್‌ ರಾಷ್ಟ್ರಗಳು ಚಿತ್ರಕ್ಕೆ ದೊಡ್ಡ ಮಾರ್ಕೆಟ್. ಮಾರ್ಚ್ 8ರಂದು ಟ್ರೈಲರ್ ರಿಲೀಸ್ ಮಾಡಲು ಎಲ್ಲಾ ಸಿದ್ಧತೆ ನಡೆದಿತ್ತು. 'ತಬಾಹಿ' ವೀಡಿಯೋ ಸಾಂಗ್ ಕೂಡ ಬರಬೇಕಿತ್ತು. ಇಸ್ರೇಲ್- ಇರಾನ್ ಯುದ್ಧದ ಕಾರಣಕ್ಕೆ ಎಲ್ಲವನ್ನು ನಿಲ್ಲಿಸಲಾಯಿತು. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಿದೆ. ಹಾಗಾಗಿ ಅಂತರಾಷ್ಟ್ರೀಯ ಮಾರ್ಕೆಟ್ ಬಹಳ ಮುಖ್ಯ" ಎಂದು 'ಟಾಕ್ಸಿಕ್' ಚಿತ್ರದ ಆಪ್ತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ವಿಎಫ್‌ಎಕ್ಸ್, ರೀ-ಶೂಟ್ ಕಾರಣಕ್ಕೆ ಸಿನಿಮಾ ರಿಲೀಸ್ ತಡವಾಗ್ತಿದೆ ಎನ್ನುವುದೆಲ್ಲಾ ಶುದ್ಧ ಸುಳ್ಳು.. ಯಾರು ಇಂತಹ ವದಂತಿ ಹರಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. 'ಧುರಂದರ್'-2 ಚಿತ್ರದ ವಿಚಾರದಲ್ಲಿ ಇಂತಹ ಸುಳ್ಳು ಸುದ್ದಿ ಹಬ್ಬಿಸಿದ್ದರು. ಈಗ 'ಟಾಕ್ಸಿಕ್' ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ನೆಗೆಟಿವ್ ಯಾವಾಗಲೂ ಬೇಗ ಗಮನ ಸೆಳೆಯುತ್ತದೆ. ಹಾಗಾಗಿ ಇಂತಹ ಸುಳ್ಳು ಸುದ್ದಿ ವೈರಲ್ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ನಯನತಾರಾ, ಕಿಯಾರಾ ಅದ್ವಾನಿ, ಹುಮಾ ಖುರೇ‍ಷಿ, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ರವಿ ಬಸ್ರೂರು ಜೊತೆ ಇನ್ನು ನಾಲ್ವರು ಸಂಗೀತ ನಿರ್ದೇಶಕರು ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ.

More from Filmibeat

Read more about: yash toxic kvn productions
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X