ಯಶ್ ನಟನೆಯ 'ಟಾಕ್ಸಿಕ್' ಸ್ಟೋರಿಲೈನ್ ಲೀಕ್; ಇದು ಮತ್ತೊಂದು 'ಕೆಜಿಎಫ್' ಆಗುತ್ತಾ?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸರಿಯಾಗಿ ಒಂದು ತಿಂಗಳು ಬಾಕಿಯಿದೆ. ಈಗಾಗಲೇ ಚಿತ್ರದ ಬಗ್ಗೆ ಇನ್ನಿಲ್ಲದ ಹೈಪ್ ಕ್ರಿಯೇಟ್ ಆಗಿದೆ. ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೆ ಸಿನಿಮಾ ಕಥೆ ಏನು? ಯಶ್ ಪಾತ್ರ ಏನು? ಎನ್ನುವ ಬಗ್ಗೆ ಭಾರೀ ಕುತೂಹಲ ಮೂಡಿದೆ.

'ಟಾಕ್ಸಿಕ್' ಸಿನಿಮಾ ಬಗ್ಗೆ ಚಿತ್ರತಂಡ ಈವರೆಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಮೋಷನ್ ಶುರುವಾಗುತ್ತಿದೆ. ಈಗಾಗಲೇ ಆಂಧ್ರ, ತೆಲಂಗಾಣ ಹಾಗೂ ಓವರ್‌ಸೀಸ್ ಸಿನಿಮಾ ಡಿಸ್ಟ್ರಿಬ್ಯೂಷನ್ ರೈಟ್ಸ್ ಸೇಲ್ ಆಗಿದೆ. ಇದೆಲ್ಲದರ ನಡುವೆ ಸಿನಿಮಾ ಸ್ಟೋರಿ ಲೈನ್ ಲೀಕ್ ಆಗಿದೆ ಎಂದು ಚರ್ಚೆ ನಡೀತಿದೆ. ಇನ್ನು ಭಾರೀ ಅಪ್‌ಡೇಟ್ ಕೊಡೋಕೆ ಚಿತ್ರತಂಡ ಮುಂದಾಗಿದೆ.

Yash s Toxic Story Leaked Goa-Based Gangster Saga Sparks Massive Buzz Ahead of Release

ಫಾರ್ಸ್ ಫಿಲ್ಮ್ಸ್ ಸಂಸ್ಥೆ 105 ಕೋಟಿ ರೂ. 'ಟಾಕ್ಸಿಕ್' ಚಿತ್ರದ ಓವರ್‌ಸೀಸ್ ರೈಟ್ಸ್ ಕೊಂಡುಕೊಂಡಿದೆ. ಇದೀಗ ತನ್ನ ವೆಬ್‌ಸೈಟ್‌ನಲ್ಲಿ 'ಟಾಕ್ಸಿಕ್' ಚಿತ್ರದ ಕಥೆಯ ಸಾರಾಂಶವನ್ನು ಪ್ರಕಟಿಸಿದೆ. ಇದನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಿನಿಮಾ ನೋಡುವ ಉತ್ಸಾಹ ಮತ್ತಷ್ಟು ಹೆಚ್ಚುವಂತೆ ಆಗಿದೆ. ಗೀತು ಮೋಹನ್ ದಾಸ್ ಹಾಗೂ ಯಶ್ ಸೇರಿ ಯಾವ ರೀತಿಯ ಕಥೆ, ಚಿತ್ರಕಥೆ ಮಾಡಿರ್ತಾರೆ? ಸಿನಿಮಾ ಹೇಗಿರಬಹುದು ಎಂದು ಊಹಿಸಿಕೊಂಡೇ ಅಚ್ಚರಿಗೊಂಡಿದ್ದಾರೆ.

1940 ಮತ್ತು 70ರ ನಡುವಿನ ಗೋವಾದಲ್ಲಿ ನಡೆಯುವ ಒಂದು ಪವರ್‌ಫುಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ಬ್ರಿಟೀಷರ ಆಳ್ವಿಕೆ ಕೊನೆಯಾಗಿ ಸಂಘಟಿತ ಅಪರಾಧಗಳು ಹೆಚ್ಚಾಗುವ ಸಮಯದಲ್ಲಿ ಈ ಕಥೆ ನಡೆಯುತ್ತದೆ. ಸುಂದರವಾದ ಕಡಲ ಕಿನಾರೆಯ ಹಿಂದೆ ಇರುವ ಕತ್ತಲ ಸಾಮ್ರಾಜ್ಯ, ರಕ್ತಪಾತ, ಅಪರಾಧ ಸಿಂಡಿಕೇಟ್‌ಗಳು, ಬೆನ್ನಿಗೆ ಚೂರಿ ಹಾಕುವ ಮೋಸಗಾರರ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ. ಇಂತಹ ಪಾತಕ ಲೋಕದಲ್ಲಿ ಸಾಮಾನ್ಯ ವ್ಯಕ್ತಿ ರಕ್ತ, ಭಯ ಮತ್ತು ದ್ರೋಹದ ಮೂಲಕ ತನ್ನ ಸಾಮ್ರಾಜ್ಯವನ್ನು ಹೇಗೆ ನಿರ್ಮಿಸಿದ ಎನ್ನುವುದನ್ನು ಚಿತ್ರದಲ್ಲಿ ನೋಡಬಹುದು.

Yash s Toxic Story Leaked Goa-Based Gangster Saga Sparks Massive Buzz Ahead of Release

ಇಲ್ಲಿ ಅಧಿಕಾರವನ್ನು ಯಾರೂ ಕೊಡಲ್ಲ, ಆದರೆ ರಾಯ ಅಧಿಕಾರವನ್ನು ಕೈವಶ ಮಾಡಿಕೊಳ್ಳುತ್ತಾನೆ. ಅದಕ್ಕೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ. ಕಳ್ಳಸಾಗಣೆ ಮಾರ್ಗಗಳು ಯುದ್ಧಭೂಮಿಗಳಾಗುತ್ತಿದ್ದಂತೆ ಮತ್ತು ನಿಷ್ಠೆಗಳು ಅನುಮಾನಕ್ಕೆ ಸಿಲುಕಿದಾಗ ಮಾನಸಿಕವಾಗಿ ಹೇಗೆ ಬದಲಾಗ್ತಾನೆ. ಎಲ್ಲಾ ಅಡೆತಡೆ ಎದುರಿಸಿ ಹೇಗೆ ಸಾಮ್ರಾಜ್ಯ ಕಟ್ಟುತ್ತಾನೆ ಎನ್ನುವ ಕಥೆ ಚಿತ್ರದಲ್ಲಿದೆ ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಇದೇ 'ಟಾಕ್ಸಿಕ್' ಸ್ಟೋರಿಲೈನ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಇದು ಮಾಮೂಲಿ ಗ್ಯಾಂಗ್‌ಸ್ಟರ್ ಕತೆ ಆಯ್ತು. ಇದರಲ್ಲಿ ಹೊಸದೇನಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'KGF' ಚಿತ್ರದಲ್ಲೂ ಇಂಥದ್ದೇ ಕಥೆ ಇತ್ತು ಅಲ್ವಾ ಎಂದು ಚರ್ಚಿಸುತ್ತಿದ್ದಾರೆ. ಮೇಲ್ನೋಟಕ್ಕೆ ಕಥೆ ಸಿಂಪಲ್ ಅನಿಸಬಹುದು. ಆದರೆ ಅದನ್ನು ಅದ್ಭುತವಾಗಿ ತೆರೆಗೆ ತರ್ತಾರೆ, ಬಾಕ್ಸಾಫೀಸ್ ಶೇಕ್ ಆಗೋದು ಗ್ಯಾರಂಟಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ.

ಗೀತು ಮೋಹನ್ ದಾಸ್ ಜೊತೆ ಸೇರಿ ಯಶ್ ಕೂಡ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ನಯನತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿರುವುದು ವಿಶೇಷ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ನಿರೀಕ್ಷಿಸಲಾಗ್ತಿದೆ.

More from Filmibeat

Read more about: yash toxic sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X