24 ಗಂಟೆಗಳಲ್ಲಿ 'ಟಾಕ್ಸಿಕ್' ಟೀಸರ್ ಪಡೆದ ವೀವ್ಸ್, ಲೈಕ್ಸ್ ಎಷ್ಟು? 'ಪುಷ್ಪ-2' ದಾಖಲೆ ಮುರೀತಾ?

'ಟಾಕ್ಸಿಕ್' ಟೀಸರ್ ರಿಲೀಸ್ ಆಗಿ 24 ಗಂಟೆ ಕಳೆದೇ ಹೋಗಿದೆ. ಸೋಶಿಯಲ್ ಮೀಡಿಯಾದಲ್ಲಿ ರಾಕಿಂಗ್ ಸ್ಟಾರ್ ರಾಕಿಂಗ್ ಪರ್ಫಾರ್ಮನ್ಸ್ ಝಲಕ್ ದಾಖಲೆ ಬರೆದಿದೆ. ಅಭಿಮಾನಿಗಳು ಟೀಸರ್ ಬಗ್ಗೆ ಭಾರೀ ಚರ್ಚೆ ನಡೆಸ್ತಿದ್ದಾರೆ. ಕಥೆ ಏನಿರಬಹುದು ಎಂದು ಊಹಿಸುತ್ತಿದ್ದಾರೆ. ಮತ್ತೆ ಕೆಲವರು ಇದು ಆ ಸಿನಿಮಾ ಕಾಪಿ, ಈ ಸಿನಿಮಾ ಸ್ಫೂರ್ತಿ ಅಂತೆಲ್ಲಾ ನೆಗೆಟಿವ್ ಕಾಮೆಂಟ್ಸ್ ಮಾಡ್ತಿದ್ದಾರೆ. ಅದನ್ನೆಲ್ಲಾ ಮೀರಿ ಟೀಸರ್ ಸಂಚಲನ ಸೃಷ್ಟಿಸಿದೆ.

ಯೂಟ್ಯೂಬ್ ಮಾತ್ರವಲ್ಲದೇ ಯಶ್, ನಿರ್ದೇಶಕಿ ಗೀತು ಮೋಹನ್‌ ದಾಸ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಟೀಸರ್ ಅಪ್‌ಲೋಡ್ ಮಾಡಲಾಗಿದೆ. ಹಾಗಾಗಿ ಬರೀ ಯೂಟ್ಯೂಬ್ ವೀವ್ಸ್ ಹಾಗೂ ಲೈಕ್ಸ್ ಲೆಕ್ಕಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. 5 ಭಾಷೆಗಳಲ್ಲಿ 'ಟಾಕ್ಸಿಕ್' ರಿಲೀಸ್ ಆಗಿ ಧೂಳೆಬ್ಬಿಸಿದೆ. ಅಭಿಮಾನಿಗಳು ಪದೇ ಪದೆ ನೋಡಿ ಎಂಜಾಯ್ ಮಾಡ್ತಿದ್ದಾರೆ.

Yash s Toxic Teaser Breaks Records with 48 Million Views in 24 Hours Enters Top 5 All-Time List

ಕೆವಿನ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನಲ್‌ನಲ್ಲಿ 'ಟಾಕ್ಸಿಕ್' ರಿಲೀಸ್ ಆಗಿದೆ. 24 ಗಂಟೆಗಳಲ್ಲಿ 48 ಮಿಲಿಯನ್(4.8 ಕೋಟಿ) ವೀವ್ಸ್ ಹಾಗೂ 900K (9 ಲಕ್ಷ) ಲೈಕ್ಸ್ ಗಿಟ್ಟಿಸಿಕೊಂಡಿದೆ. ಆ ಮೂಲಕ ಪ್ರಭಾಸ್ ನಟನೆಯ 'ರಾಧೆಶ್ಯಾಮ್' ಚಿತ್ರದ ಟೀಸರ್ ರಿಲೀಸ್ ದಾಖಲೆ ಮುರಿದು 'ಟಾಕ್ಸಿಕ್' ಸಿನಿಮಾ ಸದ್ದು ಮಾಡ್ತಿದೆ. 24 ಗಂಟೆಗಳಲ್ಲಿ ಅತಿ ಹೆಚ್ಚು ವೀವ್ಸ್ ಸಾಧಿಸಿದ ಭಾರತೀಯ ಸಿನಿಮಾ ಟೀಸರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ.

5 ವರ್ಷಗಳ ಹಿಂದೆ 'ಕೆಜಿಎಫ್- 2' ದಾಖಲೆ ಬರೆದಿತ್ತು. 24 ಗಂಟೆಗಳಲ್ಲಿ 68 ಮಿಲಿಯನ್ ವೀವ್ಸ್ ಸಾಧಿಸಿತ್ತು. ಬಳಿಕ ಬಂದಿದ್ದ 'ಆದಿಪುರುಷ್' ಚಿತ್ರದ ಟೀಸರ್ 68 ಮಿಲಿಯನ್ ಹಾಗೂ 'ಸಲಾರ್' ಟೀಸರ್ 83 ಮಿಲಿಯನ್ ವೀವ್ಸ್ ಸಾಧಿಸಿದ್ದು ದಾಖಲೆ ಎನಿಸಿಕೊಂಡಿದೆ. 'ರಾಧೆಶ್ಯಾಮ್' ಚಿತ್ರದ ಟೀಸರ್ 42 ಮಿಲಿಯನ್ ವೀವ್ಸ್ ಗಿಟ್ಟಿಸಿತ್ತು. 39 ಮಿಲಿಯನ್ ವೀವ್ಸ್ ಪಡೆದ 'ಪುಷ್ಪ'-2 ಝಲಕ್ ನಂತರದ ಸ್ಥಾನದಲ್ಲಿದೆ.

Yash s Toxic Teaser Breaks Records with 48 Million Views in 24 Hours Enters Top 5 All-Time List

ಇದೀಗ 'ಪುಷ್ಪ'-2 ಟೀಸರ್ ದಾಖಲೆ ಮುರಿದು 'ಟಾಕ್ಸಿಕ್' ಟೀಸರ್ ಮೇಲೇರಿದೆ. ಮೊದಲೇ ಹೇಳಿದಂತೆ ಇದು ಬರೀ ಯೂಟ್ಯೂಬ್ ವೀವ್ಸ್ ಲೆಕ್ಕ ಮಾತ್ರ. ಇನ್ನುಳಿದಂತೆ ಎಲ್ಲಾ ವೇದಿಕೆಗಳಲ್ಲಿ ಲೆಕ್ಕ ಹಾಕಿದ್ರೆ ಸಂಖ್ಯೆ ಹೆಚ್ಚಾಗಲಿದೆ. ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ರಾಯ ಪಾತ್ರ ಪರಿಚಯದ ಟೀಸರ್ ಯೂಟ್ಯೂಬ್‌ನಲ್ಲಿ ಈವರೆಗೆ 100 ಮಿಲಿಯನ್‌ಗೂ ಹೆಚ್ಚು ವೀವ್ಸ್ ಗಳಿಸಿ ಸದ್ದು ಮಾಡ್ತಿದೆ.

ಸದ್ಯ ಬಿಡುಗಡೆ ಆಗಿರುವ 'ಟಾಕ್ಸಿಕ್' ಟೀಸರ್ ಹಿಂದಿ ವರ್ಷನ್ 24 ಗಂಟೆಗಳಲ್ಲಿ ಹೆಚ್ಚು ವೀವ್ಸ್ ದಾಖಲಿಸಿದೆ. ಹಿಂದಿ 21 ಮಿಲಿಯನ್, ಕನ್ನಡ 7.4 ಮಿಲಿಯನ್, ತಮಿಳು 5.4 ಮಿಲಿಯನ್, ಮಲಯಾಳಂ 2.7 ಮಿಲಿಯನ್ ಹಾಗೂ ತೆಲುಗು ವರ್ಷನ್ 11 ಮಿಲಿಯನ್ ವೀವ್ಸ್ ಗಳಿಸಿದೆ. ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದ್ದು ಯಶ್ ಆರ್ಭಟ ನೋಡುವ ಕುತೂಹಲ ಮೂಡಿದೆ.

2 ಗ್ಲಿಂಪ್ಸ್ ವೀಡಿಯೋ ಬಳಿಕ 'ಟಾಕ್ಸಿಕ್' ಟೀಸರ್ ಸಹ ಹಿಟ್ ಆಗಿದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಮಾರ್ಚ್ 19ಕ್ಕೆ ಸಿನಿಮಾ ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗ್ತಿದೆ. ಅದೇ ದಿನ ಬಾಲಿವುಡ್ 'ಧುರಂಧರ್- 2' ಸಿನಿಮಾ ಕೂಡ ತೆರೆಗೆ ಬರಲಿದೆ. ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆ. ಯಾವ ಸಿನಿಮಾ ಕೈ ಮೇಲಾಗುತ್ತದೆ? ಎನ್ನುವ ಚರ್ಚೆ ಜೋರಾಗಿದೆ. ಯಶ್ ಅಭಿಮಾನಿಗಳಂತೂ ಫಸ್ಟ್ ಡೇ ಫಸ್ಟ್ ಶೋ 'ಟಾಕ್ಸಿಕ್' ಸಿನಿಮಾ ನೋಡಲು ಕಾಯುತ್ತಿದ್ದಾರೆ.

More from Filmibeat

Read more about: yash toxic salaar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X