ಭಾರತೀಯ ಚಿತ್ರರಂಗದಲ್ಲಿ 'ಟಾಕ್ಸಿಕ್' ಟೀಸರ್ ಹೊಸ ದಾಖಲೆ; 24 ಗಂಟೆಗಳಲ್ಲಿ ಸಿಕ್ಕ ವೀವ್ಸ್, ಲೈಕ್ಸ್ ಎಷ್ಟು?
ಟೀಕೆಗಳಿಗೆ ಗೋಲಿ ಹೊಡೆದು 'ಟಾಕ್ಸಿಕ್' ಟೀಸರ್ ಅಬ್ಬರಿಸುತ್ತಿದೆ. ಕೋಟಿ ಕೋಟಿ ವೀವ್ಸ್ ಸಾಧಿಸಿ ಝಲಕ್ ವೈರಲ್ ಆಗ್ತಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್ ಎಲ್ಲೆಲ್ಲೂ ರಾಯ ಆರ್ಭಟ ಜೋರಾಗಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಸಿನಿಮಾ ಸಿನಿರಸಿಕರು ಗಮನ ಸೆಳೆದಿದೆ. ಹಾಲಿವುಡ್ ಮಂದಿ ಕೂಡ ಇತ್ತ ತಿರುಗಿ ನೋಡುವಂತಾಗಿದೆ.
ಕೇವಲ 24 ಗಂಟೆಗಳಲ್ಲಿ 'ಟಾಕ್ಸಿಕ್' ಟೀಸರ್ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸೇರಿ 200 ಮಿಲಿಯನ್(20 ಕೋಟಿ) ವೀವ್ಸ್ ಸಾಧಿಸಿದೆ. ಈ ಬಗ್ಗೆ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಟ್ವೀಟ್ ಮಾಡಿದೆ. ಬರೀ ಕೆವಿಎನ್ ಯೂಟ್ಯೂಬ್ ಚಾನಲ್‌ನಲ್ಲಿ 49 ಮಿಲಿಯನ್(4.9 ಕೋಟಿ) ವೀವ್ಸ್ ಪಡೆದಿದೆ. 10 ಲಕ್ಷಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಇನ್ನು ಟೀಸರ್ ನೋಡಿ ಸಾಕಷ್ಟು ಜನ ರಿವ್ಯೂ ಮಾಡಿದ್ದು ಆ ವೀಡಿಯೋಗಳು ಲಕ್ಷ ಲಕ್ಷ ವೀವ್ಸ್ ಸಾಧಿಸಿ ದಾಖಲೆ ಬರೆದಿರುವುದು ವಿಶೇಷ.

24 ಗಂಟೆಗಳಿಂದ 'ಟಾಕ್ಸಿಕ್' ಟೀಸರ್ ಟ್ರೆಂಡಿಂಗ್‌ನಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಖ್ಯಾತ ಫಿಲ್ಮ್ ಮೇಕರ್ಸ್ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಇದು ಸಹಜವಾಗಿಯೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಮಾರ್ಚ್ 19ಕ್ಕೆ ಬಾಕ್ಸಾಫೀಸ್ ಶೇಕ್ ಆಗುವ ಸುಳಿವು ಸಿಕ್ಕಿದೆ. ಮತ್ತೊಮ್ಮೆ ಬಾಕ್ಸಾಫೀಸ್ 'ಕಬ್ಜ' ಮಾಡಲು ರಾಕಿಂಗ್ ಸ್ಟಾರ್ ಬರ್ತಿದ್ದಾರೆ. 'ಧುರಂಧರ್'-2 ಚಿತ್ರಕ್ಕೂ ಭಾರೀ ಪೈಪೋಟಿ ನೀಡುವುದು ಖಚಿತವಾಗಿದೆ.
ಟೀಸರ್ ದಾಖಲೆ
ಅಂದಹಾಗೆ 24 ಗಂಟೆಗಳಲ್ಲಿ 'ಟಾಕ್ಸಿಕ್' ಝಲಕ್ 20 ಕೋಟಿ ವೀವ್ಸ್ ಜೊತೆಗೆ 50 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಿಟ್ಟಿಸಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಎನ್ನುವಂತಾಗಿದೆ. 24 ಗಂಟೆಗಳ ಬಳಿಕ ಕೂಡ ಟೀಸರ್ ಆರ್ಭಟ ಕಮ್ಮಿ ಆಗಿಲ್ಲ.
ಸಿಕ್ಕಾಪಟ್ಟೆ ಟ್ರೋಲ್
ಸಖತ್ ಸದ್ದು ಮಾಡುವುದರ ಜೊತೆಗೆ 'ಟಾಕ್ಸಿಕ್' ಟೀಸರ್ ಟ್ರೋಲ್ ಕೂಡ ಆಗ್ತಿದೆ. ಮುಖ್ಯವಾಗಿ ಕಾರ್ ಒಳಗಿನ ರೊಮ್ಯಾಂಟಿಕ್ ಸನ್ನಿವೇಶದ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಬರ್ತಿದೆ. ಟ್ರೋಲಿಗರಿಗೆ ಆಹಾರವಾಗಿದೆ. ಆದರೂ ಯಶ್ ಅಭಿಮಾನಿಗಳು ಟೀಸರ್ ಮೆಚ್ಚಿಕೊಂಡಿದ್ದಾರೆ. ಫಸ್ಟ್ ಡೇ ಫಸ್ಟ್ ಸಿನಿಮಾ ನೋಡುವುದು ಗ್ಯಾರಂಟಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಯಶ್ ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಾರೆ ಎಂದು ಹೇಳುತ್ತಿದ್ದಾರೆ.
1000 ಕೋಟಿ ಟಾರ್ಗೆಟ್
'KGF-2' ಬಳಿಕ ಅದಕ್ಕಿಂತ ದೊಡ್ಡ ಸಿನಿಮಾ ಮಾಡುವುದಾಗಿ ಯಶ್ ಹೇಳುತ್ತಾ ಬರ್ತಿದ್ದಾರೆ. ಅದಕ್ಕಾಗಿ 4 ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ. ವಿದೇಶದ ಭಾಷೆಗಳಿಗೂ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನ ಜೋರಾಗಿದೆ.
ಟ್ರೈಲರ್ ಯಾವಾಗ?
ಈಗಾಗಲೇ 'ಟಾಕ್ಸಿಕ್' ಚಿತ್ರದ 2 ಟೀಸರ್ ಬಂದಿದೆ. ನಯನತಾರ, ಹುಮಾ ಖುರೇಶಿ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಲುಕ್ ರಿವೀಲ್ ಆಗಿದೆ. ಬಜೆಟ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅದ್ಭುತ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ.
'ಧುರಂಧರ್'-2 ಕ್ಲ್ಯಾಶ್
ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ಮಾತ್ರ ಬಿಡುಗಡೆ ಎನ್ನುವಂತಾಗಿತ್ತು. ಆದರೆ ದಿಢೀರನೆ 'ಧುರಂಧರ್'-2 ಸಿನಿಮಾ ತೆರೆಗೆ ತರುವುದಾಗಿ ಹೇಳಿದ್ದು ಚರ್ಚೆ ಹುಟ್ಟಾಕ್ಕಿದೆ. 'ಧುರಂಧರ್' ಆರ್ಭಟ ನೋಡಿದರೆ ಸೀಕ್ವೆಲ್ ಕೂಡ ಸೀಕ್ವೆಲ್ ಬಾಕ್ಸಾಫೀಸ್ ಶೇಕ್ ಮಾಡುವುದು ಪಕ್ಕಾ. ಹಾಗಾಗಿ ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಅಖಾಡದಲ್ಲಿ ಭಾರೀ ಕ್ಲ್ಯಾಶ್ ಏರ್ಪಡಲಿದೆ.


Click it and Unblock the Notifications











