'ಟಾಕ್ಸಿಕ್‌'ಗೂ ಮುನ್ನ 'ಡ್ಯಾಡಿ ಈಸ್ ಹೋಮ್' ಡೈಲಾಗ್ ಆ ತಮಿಳು ಚಿತ್ರದಲ್ಲಿ ಬಳಸಿದ್ರಾ?

ಈ ವರ್ಷ ಯಶ್ ಬರ್ತ್‌ಡೇ ಸಿಕ್ಕಾಪಟ್ಟೆ ರಾಕಿಂಗ್ ಆಗಿತ್ತು. ಕಾರಣ 'ಟಾಕ್ಸಿಕ್' ಚಿತ್ರದ ಟೀಸರ್. ಗೀತು ಮೋಹನ್ ದಾಸ್ ನಿರ್ದೇಶನದ ಈ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ಸದ್ಯ ಟೀಸರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಒಂದೇ ಒಂದು ಡೈಲಾಗ್ ಹೇಳಿ ಯಶ್ ಕುತೂಹಲ ಮೂಡಿಸಿದ್ದಾರೆ.

'ಟಾಕ್ಸಿಕ್' ಟೀಸರ್‌ನಲ್ಲಿರೋ ಹಸಿಬಿಸಿ ದೃಶ್ಯ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಕಾರ್ ಒಳಗಿನ ದೃಶ್ಯದ ಬಗ್ಗೆ ಪರ ವಿರೋಧ ಕಾಮೆಂಟ್ ಬರ್ತಿದೆ. ಆದರೆ ಚಿತ್ರತಂಡ ಮಾತ್ರ ತಲೆ ಕೆಡಿಸಿಕೊಳ್ತಿಲ್ಲ. ಯಶ್ ಅಭಿಮಾನಿಗಳು ಪದೇ ಪದೆ ಟೀಸರ್ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಯೂಟ್ಯೂಬ್, ಟ್ವಿಟ್ಟರ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್ ಎಲ್ಲೆಲ್ಲೂ 'ಟಾಕ್ಸಿಕ್' ಟೀಸರ್ ಅಬ್ಬರ ಮುಂದುವರೆದಿದೆ.

Yash s Toxic Teaser Sparks Buzz as Daddy Is Home Dialogue Goes Viral Across Platforms

ರಾಯ ಆಗಿ ಯಶ್ ಸ್ಟೈಲಿಶ್ ಲುಕ್, ಸ್ವಾಗ್, ಎದುರಾಳಿಗಳ ವಿರುದ್ಧ ಆರ್ಭಟ ಎಲ್ಲವೂ ಮಜಾ ಕೊಡ್ತಿದೆ. ಹಾಲಿವುಡ್ ರೇಂಜ್ ಮೇಕಿಂಗ್ ಹುಬ್ಬೇರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಯಶ್ ಹೇಳಿರುವ ಸಣ್ಣ ಡೈಲಾಗ್ ವೈರಲ್ ಆಗ್ತಿದೆ. 'ಡ್ಯಾಡಿ ಈಸ್ ಹೋಮ್' ಎನ್ನುವ ಸಣ್ಣ ಡೈಲಾಗ್ ಹೊಡೆದು ರಾಯ ದರ್ಬಾರ್ ನಡೆಸಿದ್ದಾನೆ.

ಮೇಲ್ನೋಟಕ್ಕೆ 'ಡ್ಯಾಡಿ ಈಸ್ ಹೋಮ್' ಎನ್ನುವುದು ಸಿಂಪಲ್ ಡೈಲಾಗ್ ಅನ್ನಿಸಿದ್ರು, ಇದಕ್ಕೆ ನಾನಾ ಅರ್ಥಗಳಿವೆ. ಅಪ್ಪ ಮನೆಗೆ ಬಂದ್ರು, ನಾಯಕ ಅಥವಾ ಲೀಡರ್ ವಾಪಸ್ ಬಂದಾಯ್ತು.. ನಾಯಕ ಮತ್ತಷ್ಟು ಪ್ರಬಲನಾಗಿ ಮರಳಿ ಬಂದಿದ್ದಾನೆ ಎಂದು ವಿಶ್ಲೇಷಿಸಬಹುದು. 'KGF'-2 ಬಳಿಕ ಯಶ್ ಬಾಕ್ಸಾಫೀಸ್ ಶೇಕ್ ಮಾಡಲು ಮತ್ತೊಂದು ಪವರ್‌ಫುಲ್ ಪಾತ್ರದಲ್ಲಿ ವಾಪಸ್ ಬಂದಿದ್ದಾರೆ ಎನ್ನುವುದನ್ನು ಧ್ವನಿಸುವಂತಿದೆ. ಆದರೆ ಈ ಡೈಲಾಗ್ ಕೆಲವರಿಗೆ ಹೊಸದು ಅನ್ನಿಸಬಹುದು. ಆದರೆ ಹಾಲಿವುಡ್ ಮಂದಿಗೆ ಇದು ಹೊಸದೇನು ಅಲ್ಲ.

'ಡ್ಯಾಡಿ ಈಸ್ ಹೋಮ್' ಹೆಸರಿನಲ್ಲಿ ಹಾಲಿವುಡ್‌ನಲ್ಲೊಂದು ಸಿನಿಮಾ ಬಂದು ಹೋಗಿದೆ. ಅಷ್ಟೆಲ್ಲಾ ಯಾಕೆ ತಮಿಳಿನ 'ಕರುಪ್ಪು' ಚಿತ್ರದಲ್ಲಿ ಸೂರ್ಯ ಇದೇ ಡೈಲಾಗ್ ಹೊಡೆದಿದ್ದಾರೆ. ಆರ್‌ಜೆ ಬಾಲಾಜಿ ನಿರ್ದೇಶನದ ಸಿನಿಮಾ ಟೀಸರ್ ಕೆಲ ತಿಂಗಳ ಹಿಂದೆಯೇ ಬಿಡುಗಡೆ ಆಗಿತ್ತು. ಅದರಲ್ಲಿ 'ಡ್ಯಾಡಿ ಈಸ್ ಹೋಮ್' ಅನ್ನೋ ಡೈಲಾಗ್ ಸೂರ್ಯ ಹೇಳಿದ್ದರು. ಆ ವೀಡಿಯೋ ಈಗ ವೈರಲ್ ಆಗ್ತಿದೆ. 'ಟಾಕ್ಸಿಕ್' ಜೊತೆ ಹೋಲಿಸಿ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

'ದಿ ಬಾಯ್ಸ್' ಅನ್ನೋ ಇಂಗ್ಲೀಷ್ ವೆಬ್‌ ಸೀರಿಸ್‌ನಲ್ಲಿ ಕೂಡ ಈ ಡೈಲಾಗ್ ಇದೆ. 'ಟಾಕ್ಸಿಕ್' ಟೀಸರ್ ರಿಲೀಸ್ ಬೆನ್ನಲ್ಲೇ ಒಂದಕ್ಕೊಂದು ಲಿಂಕ್ ಮಾಡಿ ಎಡಿಟ್ ಮಾಡಿ ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ. ಕನ್ನಡ ಜೊತೆಗೆ ದೇಶವಿದೇಶದ ಭಾಷೆಗಳಿಗೆ 'ಟಾಕ್ಸಿಕ್' ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. ಹಾಗಾಗಿ ಇಂಗ್ಲೀಷ್‌ನಲ್ಲಿ ಮಾತ್ರ ಟೀಸರ್ ಹೊರಬಂದಿದೆ.

ಕನ್ನಡದಲ್ಲಿ ಕೂಡ ಕೆಲ ಇಂಗ್ಲೀಷ್ ಡೈಲಾಗ್‌ಗಳು ಇರುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ 'KGF'-2 ಚಿತ್ರದಲ್ಲಿ ಅದೇ ಪ್ರಯತ್ನ ಮಾಡಲಾಗಿತ್ತು. ಬಟ್ಲರ್ ಇಂಗ್ಲೀಷ್‌ನಲ್ಲಿ ರಾಕಿಭಾಯ್ ಹೊಡೆಯುವ ಕೆಲ ಡೈಲಾಗ್ಸ್ ಗಮನ ಸೆಳೆದಿತ್ತು. ಇನ್ನು ರಾಯ ಪಾತ್ರದಲ್ಲಿ ಯಶ್ ಲುಕ್, ಗೆಟಪ್ ಎಲ್ಲವೂ ಅಭಿಮಾನಿಗಳ ಮನಗೆದ್ದಿದೆ. ಕಿಚ್ಚ ಸುದೀಪ್, ರಾಮ್‌ ಗೋಪಾಲ್ ವರ್ಮಾ, ಆಲಿಯಾ ಭಟ್, ಕರಣ್‌ ಜೋಹರ್ ಸೇರಿದಂತೆ ಖ್ಯಾತನಾಮರು ಟೀಸರ್ ನೋಡಿ ಬಹುಪರಾಕ್ ಎಂದಿದ್ದಾರೆ.

'ಧುರಂಧರ್- 2' ಎದುರು ಅಬ್ಬರಿಸಲು ಬಹಳ ಖಡಕ್ ಆಗಿಯೇ ರಾಯ ಬರ್ತಿದ್ದಾನೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಎಲ್ಲಾ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

More from Filmibeat

Read more about: yash toxic surya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X