'ಟಾಕ್ಸಿಕ್' ಟೀಸರ್‌ನಲ್ಲಿ ರುಕ್ಮಿಣಿ, ಕಿಯಾರಾ ಹಾಗೂ ನಯನತಾರಾ ಕೂಡ ಕಾಣಿಸ್ತಾರಾ?

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಹಾಲಿವುಡ್ ರೇಂಜ್ ಮೇಕಿಂಗ್, ಯಶ್ ವಿಭಿನ್ನ ಗೆಟಪ್‌ಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಚಿತ್ರದಲ್ಲಿ ನಟಿಸಿರುವ ನಟೀಮಣಿಯರ ಝಲಕ್ ಮಾತ್ರ ಕಾಣಿಸಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಗಂಗಾ ಎಂಬ ಪವರ್‌ಫುಲ್ ಪಾತ್ರದಲ್ಲಿ ನಯನತಾರಾ ನಟಿಸಿದ್ದಾರೆ. ಅದೇ ರೀತಿ ಮೆಲ್ಲಿಸ್ಸಾ ಆಗಿ ರುಕ್ಮಿಣಿ, ಎಲಿಜಬೆತ್ ಆಗಿ ಹುಮಾ ಖುರೇಷಿ ಹಾಗೂ ನಡಿಯಾ ಆಗಿ ಕಿಯಾರಾ ಅದ್ವಾನಿ ಮಿಂಚಿದ್ದಾರೆ. ಈಗಾಗಲೇ ಅವರ ಲುಕ್ ಸಹ ರಿವೀಲ್ ಆಗಿದೆ. ಟೀಸರ್‌ನಲ್ಲಿ ಮಾತ್ರ ಯಾರೊಬ್ಬರ ದರ್ಶನ ಕೂಡ ಆಗಿಲ್ಲ. ಇವರೆಲ್ಲರ ಆರ್ಭಟ ನೋಡಲು ಟ್ರೈಲರ್ ಬರುವವರೆಗೂ ಕಾಯಬೇಕು ಎನ್ನುವಂತಾಗಿದೆ.

Yash s Toxic Teaser Sparks Frenzy Fans Hunt for Nayanthara Kiara and Rukmini in Every Frame

'ಟಾಕ್ಸಿಕ್' ಬರ್ತ್‌ಡೇ ಪೀಕ್ ಹೆಸರಿನಲ್ಲಿ ವರ್ಷದ ಹಿಂದೆ ಫಸ್ಟ್ ಗ್ಲಿಂಪ್ಸ್ ಬಂದಿತ್ತು. ಈ ವರ್ಷ ಯಶ್ ಹುಟ್ಟು ಹಬ್ಬಕ್ಕೆ ರಾಯನ ಪಾತ್ರ ಪರಿಚಯದ ಗ್ಲಿಂಪ್ಸ್ ರಿಲೀಸ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಇದೀಗ ಮತ್ತೊಂದು ಟೀಸರ್ ಬಂದಿದೆ. ಆಕ್ಷನ್ ಪ್ಯಾಕ್ಡ್ ಝಲಕ್‌ನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿರುವುದು ಗೊತ್ತಾಗುತ್ತಿದೆ. ಆದರೆ ಟೀಸರ್ ಸರಿಯಾಗಿ ಗಮನಿಸಿದರೆ ರುಕ್ಮಿಣಿ, ನಯನತಾರಾ ಹಾಗೂ ಕಿಯಾರಾ ಕಾಣಿಸುತ್ತಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಉದ್ದೇಶಪೂರ್ವಕವಾಗಿಯೇ ಟೀಸರ್‌ನಲ್ಲಿ ಬೇರೆ ಕಲಾವಿದರನ್ನು ತೋರಿಸುವ ಪ್ರಯತ್ನ ಮಾಡಿಲ್ಲ. ಆದರೆ ಬೇರೆ ಬೇರೆ ಸನ್ನಿವೇಶಗಳಲ್ಲಿ ನಯನ್, ರುಕ್ಮಿಣಿ ಹಾಗೂ ಕಿಯಾರಾ ಅವರನ್ನು ಇಡುವಂತೆ ಕಾಣ್ತಿದೆ. ಅಭಿಮಾನಿಗಳು ಫ್ರೇಮ್ ಟು ಫ್ರೇಮ್ ಟೀಸರ್ ಅನ್ನು ಜಾಲಾಡುತ್ತಿದ್ದು ಏನೆಲ್ಲಾ ಇಂಟ್ರೆಸ್ಟಿಂಗ್ ಸಂಗತಿಗಳಿವೆ ಎಂದು ಹುಡುಕುತ್ತಿದ್ದಾರೆ. ಈ ಫ್ರೇಮ್‌ನಲ್ಲಿ ಇರೋದು ನಯನಾತಾರ, ಇಲ್ಲಿರೋದು ರುಕ್ಮಿಣಿ ಅಂತ ಮಾರ್ಕ್ ಮಾಡಿ ತೋರಿಸುತ್ತಿದ್ದಾರೆ. ಸಿನಿಮಾ ಬಿಡುಗಡೆ ಆಗುವವರೆಗೂ ಈ ಬಗ್ಗೆ ಖಚಿತ ಮಾಹಿತಿ ಸಿಗಲ್ಲ.

ಸ್ಮಶಾನದ ಆಕ್ಷನ್ ಸನ್ನಿವೇಶದಲ್ಲಿ ಮಹಿಳೆಯೊಬ್ಬರು ಸಮಾಧಿ ಮೇಲೆ ಕೂತಿರುವುದನ್ನು ನೋಡಬಹುದು. ಆಕೆ ನಯನತಾರಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಸರ್ಕಸ್ ನಡೆಯುವ ಜಾಗದಲ್ಲಿ ಒಂದು ಆಕ್ಷನ್ ಸನ್ನಿವೇಶ ಇದೆ. ಅದರಲ್ಲಿ ಯುವತಿಯೊಬ್ಬಳ ಕೈ ಹಿಂದೆ ಕಟ್ಟಿರುವಂತ ಕಾಣಿಸುತ್ತಿದೆ. ಅದು ರುಕ್ಮಿಣಿ ವಸಂತ್ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದು ರಾಯ ಬಂದು ರಕ್ಷಿಸುತ್ತಾನೆ ಎನ್ನುವುದು ನೆಟ್ಟಿಗರ ವಾದ.

ಯುವತಿಯೊಬ್ಬಳ ಜೊತೆ ರಾಯನ ಹಸಿಬಿಸಿ ದೃಶ್ಯ ಕೂಡ ಇದೆ. ಹಾಸಿಗೆ ಮೇಲೆ ಆ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ಯಾರು? ಎನ್ನುವ ಚರ್ಚೆ ನಡೀತಿದೆ. ರಾಯ ರಮಿಸೋ ಸನ್ನಿವೇಶದಲ್ಲಿ ಮತ್ತೊಬ್ಬ ನಟಿ ಇದ್ದು ಅದು ಯಾರು ಇರಬಹುದು ಎಂದು ಕೆಲವರು ಊಹಿಸುವ ಪ್ರಯತ್ನ ಮಾಡ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಅದ್ಧೂರಿಯಾಗಿ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಅಕ್ಷಯ್ ಒಬೆರಾಯ್, ಟೊವಿನೋ ಥಾಮಸ್, ಸುದೇವ್ ನಾಯರ್, ಕೇಯ್ಲ್ ಪಾಲ್, ಅಮಿತ್ ತಿವಾರಿ, ಸುರ್ಜಿತ್ ಗೋಪಿನಾಥ್ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಎಲ್ಲರಿಗಿಂತ ನಟೀಮಣಿಯರ ಪಾತ್ರಗಳು ಹೇಗಿರುತ್ತದೆ? ಎನ್ನುವ ಕುತೂಹಲ ಮೂಡಿದೆ. ಪ್ರತಿಯೊಬ್ಬರ ಸಿನಿಮಾ ಬಗ್ಗೆ ಕೇಳಿದಾಗ ಎಲ್ಲರ ನಿರೀಕ್ಷೆಗೆ ಮೀರಿದ ಸಿನಿಮಾ ಎಂದು ಹೇಳ್ತಾ ಬರ್ತಿದ್ದಾರೆ. ಯಾರೊಬ್ಬರೂ ಈವರೆಗೆ ಸಿನಿಮಾ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಮಾರ್ಚ್ 19ಕ್ಕೆ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ತಿದೆ.

ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ 'ಟಾಕ್ಸಿಕ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಇಂಗ್ಲೀಷ್ ಭಾಷೆಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. ಭಾರೀ ಮೊತ್ತಕ್ಕೆ ಆಂಧ್ರ- ತೆಲಂಗಾಣ, ಓವರ್‌ಸೀಸ್ ಗಾಗೂ ಉತ್ತರ ಭಾರತದ ಡಿಸ್ಟ್ರಿಬ್ಯೂಷನ್ ರೈಟ್ಸ್ ಸೇಲ್ ಆಗಿದೆ.

More from Filmibeat

Read more about: toxic yash rukmini vasanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X