Toxic Teaser: ಗೋವಾದಲ್ಲಿ ನಡೆಯೋ 'ಟಾಕ್ಸಿಕ್' ಕಥೆ; ಆದ್ರೆ ಟೀಸರ್ ಪೂರ್ತಿ ಶೂಟ್ ಮಾಡಿದ್ದು ಬೆಂಗಳೂರಿನಲ್ಲಿ

ಹಾಲಿವುಡ್ ಸಿನಿಮಾ ರೇಂಜಿಗೆ 'ಟಾಕ್ಸಿಕ್' ಸಿನಿಮಾ ಮೂಡಿ ಬರ್ತಿದೆ. ಟೀಕೆ ಏನೇ ಇದ್ರೂ ಟೀಸರ್ ಸೂಪರ್ ಹಿಟ್ ಆಗಿದೆ. ಕೋಟಿ ಕೋಟಿ ವೀವ್ಸ್ ಪಡೆದು ಸದ್ದು ಮಾಡ್ತಿದೆ. ಪ್ರತಿ ಫ್ರೇಮ್ ಕಣ್ಣಿಗೆ ಹಬ್ಬ. ಲೊಕೇಶನ್, ಕ್ಯಾಮರಾ ವರ್ಕ್, ಗ್ರಾಫಿಕ್ಸ್ ಎಲ್ಲವೂ ವಾಹ್ ಎನ್ನುವಂತಿದೆ. ಯಾವುದೋ ಫಾರಿನ್ ಲೋಕೇಶನ್‌ನಲ್ಲಿ ಚಿತ್ರೀಕರಣ ಮಾಡಿದಂತಿದೆ. ಆದರೆ ಟೀಸರ್ ಸನ್ನಿವೇಶಗಳನ್ನೆಲ್ಲಾ ಬೆಂಗಳೂರಿನಲ್ಲೇ ಸೆರೆ ಹಿಡಿದಿದ್ದು ಅಂದ್ರೆ ಅಚ್ಚರಿ ಮೂಡುವುದು ಸಹಜ.

ಸ್ಮಶಾನದ ಸನ್ನಿವೇಶದೊಂದಿಗೆ 'ಟಾಕ್ಸಿಕ್' ಟೀಸರ್ ಶುರುವಾಗುತ್ತದೆ. ಗ್ಯಾಂಗ್‌ಸ್ಟರ್ ಒಬ್ಬನ ಪುತ್ರನ ಪಾರ್ಥೀವ ಶರೀರದ ಅಂತ್ಯಕ್ರಿಯೆ ಮಾಡುವ ದೃಶ್ಯ ಅದು. ಅಲ್ಲಿಗೆ ಬಂದು ರಾಯ ಅಬ್ಬರಿಸೋದನ್ನು ನೋಡಬಹುದು. ಬಾಂಬ್ ಸಿಡಿಸಿ ಎದುರಾಳಿ ಪಡೆಯನ್ನು ಧೂಳಿಪಟ ಮಾಡಿ ಬಳಿಕ ಕಾರ್ ಇಳಿದು ಬಂದು ಅಳಿದುಳಿದವರ ಮೇಲೆ ರಾಯ ಗನ್ ಹಿಡಿದು ಪ್ರಹಾರ ಮಾಡುವುದು ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಅಷ್ಟಕ್ಕೂ ಯಾವ ಲೊಕೇಶನ್‌ನಲ್ಲಿ ಇದನ್ನು ಶೂಟ್ ಮಾಡಿದ್ರು ಎನ್ನುವ ಅನುಮಾನ ಕೆಲವರನ್ನು ಕಾಡ್ತಿದೆ.. ಅಷ್ಟರಮಟಟಿಗೆ ಟೀಸರ್ ಗಮನ ಸೆಳೆಯುತ್ತಿದೆ.

Yash s Toxic Teaser super Hit Hollywood-Style Gangster Drama glimpse Shot Entirely in Bengaluru

ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ, ಗೋವಾ, ಮುಂಬೈ ಸೇರಿದಂತೆ ಹಲವು ಲೊಕೇಶನ್‌ಗಳಲ್ಲಿ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ನಡೆದಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ಚಿತ್ರೀಕರಣ ಮಾಡಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಟೀಸರ್‌ನಲ್ಲಿ ಯಶ್ ಜೊತೆಗೆ ಬ್ರೆಜಿಲಿಯನ್ ನಟಿ, ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ಹಾಗೂ ಹಾಲಿವುಡ್ ನಟ, ಯೂಟ್ಯೂಬರ್ ಕೈಲ್ ಪಾಲ್ ಕೂಡ ಕಾಣಿಸಿಕೊಂಡಿದ್ದಾರೆ. ಟೀಸರ್ ಹಾಲಿವುಡ್ ಗ್ಯಾಂಗ್‌ಸ್ಟರ್ ಸಿನಿಮಾಗಳನ್ನು ನೋಡುವ ಫೀಲ್ ಕೊಡ್ತಿದೆ. ಮೊದಲ ನೋಟದಲ್ಲೇ ಸಿನಿಮಾ ನೋಡ್ಲೇಬೇಕು ಎನ್ನುವ ಕುತೂಹಲ ಮೂಡಿಸಿದೆ.

ಬೆಂಗಳೂರಿನಲ್ಲಿ ಬಹಳ ಜನಪ್ರಿಯ ಆಗಿರುವ ಜಾಗದಲ್ಲೇ 'ಟಾಕ್ಸಿಕ್' ರಾಯನ ಇಂಟ್ರಡಕ್ಷನ್ ಟೀಸರ್ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಈ ಬಗ್ಗೆ 'ಅಲೆಮಾರಿ ಅಮಿತ್' ಯೂಟ್ಯೂಬ್ ಚಾನಲ್‌ನಲ್ಲಿ ವರದಿ ಮಾಡಿದ್ದಾರೆ. ರಾಯ(ಯಶ್) ಇದ್ದ ಕಾರು ಬಂದು ಮರಕ್ಕೆ ಡಿಕ್ಕಿ ಹೊಡೆಯುವುದು, ಆ ಸ್ಮಶಾನದ ಸೆಟ್ ಎಲ್ಲವನ್ನು ಅಲ್ಲೇ ಹಾಕಿರೋದು. ಟೀಸರ್ ನೋಡಿ ಆ ಲೋಕೇಶನ್‌ ನೋಡಿದರೆ ಕೆಲವರಿಗೆ ಅಚ್ಚರಿ ಮೂಡುತ್ತದೆ. ಅರೇ, ಇಲ್ಲಿರುವುದಕ್ಕೂ ಟೀಸರ್‌ನಲ್ಲಿ ನೋಡುತ್ತಿರುವುದಕ್ಕೂ ಬಹಳ ವ್ಯತ್ಯಾಸ ಇದೆ ಎನ್ನಿಸಬಹುದು. ಅದೇ ಸಿನಿಮಾ ಮ್ಯಾಜಿಕ್.

ಕ್ಯಾಮರಾ ಆಂಗಲ್, ಡ್ರೋನ್ ಶಾಟ್, ಗ್ರಾಫಿಕ್ಸ್, ಕಲರ್ ಟಿಂಟ್ ಎಲ್ಲ ಮಿಕ್ಸ್ ಆಗಿ 'ಟಾಕ್ಸಿಕ್' ಟೀಸರ್ ಸಖತ್ ಮಜಾ ಕೊಡುತ್ತದೆ. ಆ ರಸ್ತೆಗಳು, ಮರಗಳು, ಅಂತ್ಯಕ್ರಿಯೆ ಸನ್ನಿವೇಶಕ್ಕೆ ತೋಡಿದ್ದ ಗುಂಡಿ ಎಲ್ಲವನ್ನು ನೋಡಬಹುದು. ಟೀಸರ್ ನೋಡಿ ಯಾವುದೋ ವಿದೇಶದ ಲೊಕೇಶನ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ ಎಂದು ಕೆಲವರು ಭಾವಿಸಿದ್ದರು. ಆದರೆ ಕರ್ನಾಟಕದಲ್ಲಿ ಅದು ನಮ್ಮ ಬೆಂಗಳೂರಿನಲ್ಲಿ ಈ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ.

ಡ್ರಗ್ಸ್ ಮಾಫಿಯಾ ಕಥೆಯನ್ನು ಚಿತ್ರದಲ್ಲಿ ಹೇಳ್ತಿದ್ದಾರೆ ಎನ್ನುವ ಊಹಾಪೋಹ ಬಹಳ ಹಿಂದೆ ಶುರುವಾಗಿತ್ತು. 70-80ರ ದಶಕದಲ್ಲಿ ಗೋವಾದಲ್ಲಿ ಡ್ರಗ್ಸ್ ದಂಧೆ ಸುತ್ತಾ ವ್ಯಾಪಿಸಿದ್ದ ಅಂಡರ್‌ವರ್ಲ್ಡ್ ಚಿತ್ರಣವನ್ನು ಕಟ್ಟಿಕೊಡಲಾಗ್ತಿದೆ. ಸದ್ಯ ಟೀಸರ್‌ನಲ್ಲಿ ಬಳಸಿರುವ ಕಾರ್ ನಂಬರ್‌ ಪ್ಲೇಟ್ ನೋಡಿದರೆ ಆ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಗೋವಾದಲ್ಲಿ ಕೂಡ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಅಲ್ಲೇ ಪ್ರೀ-ಪ್ರೊಡಕ್ಷನ್‌ಗೆ ಚಿತ್ರತಂಡ ಬೀಡು ಬಿಟ್ಟಿತ್ತು. ಹಾಗಾಗಿ ಗೋವಾ ಹಿನ್ನಲೆಯಲ್ಲೇ ಈ ಗ್ಯಾಂಗ್‌ಸ್ಟರ್ ಸಿನಿಮಾ ತೆರೆಗೆ ಬರುವುದು ಪಕ್ಕಾ ಆಗಿದೆ.

ಮಾರ್ಚ್ 19ಕ್ಕೆ ವಿಶ್ವದಾದ್ಯಂತ 'ಟಾಕ್ಸಿಕ್' ಸಿನಿಮಾ ತೆರೆಗಪ್ಪಳಿಸಲಿದೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ಪ್ರೇಕ್ಷಕರ ಮುಂದೆ ಬರ್ತಿದೆ. 300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗಿರುವ ಅಂದಾಜಿದೆ. ನಯನತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಗಣ ಚಿತ್ರದಲ್ಲಿದೆ. 'KGF- 2' ಬಳಿಕ ಮುಂದೇನು ಎಂದು ಕೇಳುತ್ತಿದ್ದವರಿಗೆ 'ಟಾಕ್ಸಿಕ್' ಮೂಲಕ ಉತ್ತರ ಕೊಡಲು ಯಶ್ ಹೊರಟಿದ್ದಾರೆ.

More from Filmibeat

Read more about: yash toxic sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X