ಅಭಿಮಾನಿಗಳಿಗಾಗಿ ಆಡಿಯೋ ಸಂದೇಶ ಕಳುಹಿಸಿದ ರಾಕಿಂಗ್ ಸ್ಟಾರ್

Recommended Video

Rocking Star Yash Sent Audio Message to His Fans | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಇಂದು (ಅಕ್ಟೋಬರ್ 30) ಎರಡನೇ ಮಗುವನ್ನ ಬರಮಾಡಿಕೊಂಡಿದ್ದಾರೆ. ಫೋರ್ಟಿಸ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ತಮ್ಮ ಕುಟುಂಬಕ್ಕೆ ಹೊಸ ಸದ್ಯಸರನ್ನ ಸ್ವಾಗತಿಸಿದ್ದಾರೆ.

'ರಾಧಿಕಾ ಮತ್ತು ಮಗು ಆರೋಗ್ಯವಾಗಿದ್ದಾರೆ' ಎಂದು ಯಶ್ ಅವರ ತಾಯಿ ಸ್ಪಷ್ಟಪಡಿಸಿದ್ದರು. ಇದೀಗ, ಗಂಡು ಮಗುವಿಗೆ ತಂದೆಯಾದ ಖುಷಿಯನ್ನ ಹಂಚಿಕೊಂಡಿರುವ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗಾಗಿ ಆಡಿಯೋ ಸಂದೇಶ ಕಳುಹಿಸಿದ್ದಾರೆ.

''ಇಂದು ತುಂಬಾ ಸಂತೋಷದ ದಿನ. ಐರಾಗೆ ಸಹೋದರ ಸಿಕ್ಕಿದ್ದಾನೆ. ಇವರಿಬ್ಬರ ಮಾತುಕತೆ ಕೇಳಲು ಕಾಯುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ. ಹೆಚ್ಚಿನ ವಿಷಯವನ್ನ ಶೀಘ್ರದಲ್ಲಿ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ'' ಎಂದು ಆಡಿಯೋ ಸಂದೇಶ ನೀಡಿರುವ ಯಶ್, ಮಗಳ ಜೊತೆ ಬ್ಯುಸಿ ಇದ್ದೀನಿ ಎಂದು ಹೇಳಿಕೊಂಡಿದ್ದಾರೆ.

Yash Sent Audio Message To His Fans

''ಇನ್ಮುಂದೆ ಸ್ವಲ್ಪ ಬ್ಯುಸಿ ಕಣ್ರಪ್ಪ'' ಎಂದು ಕೂಡ ಸೂಚನೆ ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಯಶ್ ಮತ್ತು ರಾಧಿಕಾ ದಂಪತಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಐರಾ ಎಂದು ನಾಮಕರಣ ಮಾಡಿದ್ದರು.

ಇದೀಗ, ಐರಾಗೆ ವರ್ಷ ತುಂಬುವ ಮುನ್ನವೇ ಜೂನಿಯರ್ ಯಶ್ ಅವರನ್ನ ಬರಮಾಡಿಕೊಂಡಿದ್ದಾರೆ ರಾಕಿಂಗ್ ದಂಪತಿ. ಡಿಸೆಂಬರ್ 9, 2016 ರಂದು ಯಶ್ ಮತ್ತು ರಾಧಿಕಾ ಪಂಡಿತ್ ವಿವಾಹ ನಡೆದಿತ್ತು. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ನಲ್ಲಿ ಶಾಸ್ತ್ರೋಕ್ತವಾಗಿ ರಾಧಿಕಾ ಪಂಡಿತ್ ಕೊರಳಿಗೆ ಯಶ್ ತಾಳಿ ಕಟ್ಟಿದ್ದರು.

ಸದ್ಯ ಕೆಜಿಎಫ್ ಚಾಪ್ಟರ್-2 ಸಿನಿಮಾದಲ್ಲಿ ನಟಿಸುತ್ತಿರುವ ಯಶ್ ಇಷ್ಟು ದಿನ ಕೆಜಿಎಫ್ ಸೈನಡ್ ಗುಡ್ಡದಲ್ಲಿ ಚಿತ್ರೀಕರಣ ಮಾಡಿದ್ದರು. ಹೈದ್ರಾಬಾದ್ ನಲ್ಲೂ ಶೂಟ್ ಮಾಡಿದ್ದರು. ಈಗೊಂದು ಸಣ್ಣ ಬ್ರೇಕ್ ತೆಗೆದುಕೊಂಡಿರುವ ಚಿತ್ರತಂಡ ಮತ್ತೆ ಶೂಟಿಂಗ್ ಆರಂಭಿಸಲಿದೆ.

More from Filmibeat

English summary
Kannada actor yash and Radhika pandit gave birth to second child. now, yash sent audio message to his fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X