For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ಚಿತ್ರೀಕರಣದ ಬಗ್ಗೆ ಯಶ್ ಕೊಟ್ಟರು ಪ್ರಮುಖ ಅಪ್‌ಡೇಟ್‌

  |

  ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2 ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರೀಕರಣ ದ ಕುರಿತಂತೆ ನಟ ಯಶ್ ಮುಖ್ಯವಾದ ಮಾಹಿತಿಯೊಂದನ್ನು ಇಂದು (ಡಿಸೆಂಬರ್ 07) ಹಂಚಿಕೊಂಡಿದ್ದಾರೆ.

  KGF 2 ವಿಲ್ಲನ್ ಲುಕ್ ರಿವೀಲ್ ಮಾಡಿದ ರಾಕಿಂಗ್ ಸ್ಟಾರ್ Yash | Filmibeat Kannada

  ಕೆಜಿಎಫ್ 2 ಸಿನಿಮಾದಲ್ಲಿ ತಮ್ಮ ಲುಕ್‌ನ ಚಿತ್ರವೊಂದನ್ನು ಹಂಚಿಕೊಂಡಿರುವ ಯಶ್, ಚಿತ್ರೀಕರಣದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

  'KGF-2' ಕ್ಲೈಮ್ಯಾಕ್ಸ್ ಶೂಟಿಂಗ್; ರಾಕಿ ಭಾಯ್ ಮತ್ತು ಆಧೀರ ಫೈಟ್ ಗೆ ವೇದಿಕೆ ಸಿದ್ಧ'KGF-2' ಕ್ಲೈಮ್ಯಾಕ್ಸ್ ಶೂಟಿಂಗ್; ರಾಕಿ ಭಾಯ್ ಮತ್ತು ಆಧೀರ ಫೈಟ್ ಗೆ ವೇದಿಕೆ ಸಿದ್ಧ

  'ಎಲ್ಲಾ ಒಳ್ಳೆಯ ಸಂಗತಿಗಳಿಗೂ ಅಂತ್ಯವಿದ್ದೇ ಇರುತ್ತದೆ. ಇದು ಕೆಜಿಎಫ್ 2 ಸಿನಿಮಾ ಚಿತ್ರೀಕರಣದ ಕೊನೆಯ ಹಂತ ಇರಬಹುದು ಆದರೆ ಈ 'ವಿಲನ್' ಹಾಗೆಯೇ ಇರಲಿದ್ದಾನೆ' ಎಂದು ತಮ್ಮದೇ ಸ್ಟೈಲಿಶ್ ಚಿತ್ರ ಹಂಚಿಕೊಂಡಿದ್ದಾರೆ ನಟ ಯಶ್.

  ಯಶ್ ಹಾಕಿರುವ ಎಕ್ಸ್‌ಕ್ಲೂಸಿವ್ ಚಿತ್ರವನ್ನು ಕೇವಲ ಒಂದು ಗಂಟೆಯಲ್ಲಿ 62 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಕೆಲವೇ ನಿಮಿಷದಲ್ಲಿ ಚಿತ್ರ ವೈರಲ್ ಆಗಿದೆ.

  ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡ ಯಶ್

  ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡ ಯಶ್

  ಬಿಳಿ ಶರ್ಟ್, ಕಪ್ಪು ಸೂಟ್‌ ಧರಿಸಿ ಕೈಯಲ್ಲಿ ಮಷಿನ್ ಗನ್ ಹಿಡಿದು ರಗಡ್ ಲುಕ್‌ನಲ್ಲಿದ್ದಾರೆ ನಟ ಯಶ್. ಕೆಜಿಎಫ್ 2 ಸಿನಿಮಾದ ಈ ಎಕ್ಸ್‌ಕ್ಲೂಸಿವ್ ಚಿತ್ರವನ್ನು ಸೆರೆ ಹಿಡಿದಿದ್ದು, ಡಿಒಪಿ ಭುವನ್ ಗೌಡ ಎಂಬ ಮಾಹಿತಿ ನೀಡಿದ್ದಾರೆ ಯಶ್.

  ಕ್ಲೈಮ್ಯಾಕ್ಸ್‌ ದೃಶ್ಯದ ಚಿತ್ರೀಕರಣ

  ಕ್ಲೈಮ್ಯಾಕ್ಸ್‌ ದೃಶ್ಯದ ಚಿತ್ರೀಕರಣ

  ಕೆಜಿಎಫ್ 2 ಚಿತ್ರೀಕರಣ ಕೊನೆಯ ಹಂತ ತಲುಪಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಿನಿಮಾದ ಕ್ಲೈಮ್ಯಾಕ್ಸ್‌ ಅನ್ನು ಚಿತ್ರೀಕರಿಸುತ್ತಿದ್ದಾರೆ. ಈ ಬಗ್ಗೆ ಪ್ರಶಾಂತ್ ಸಹ ಚಿತ್ರೀಕರಣದ ಸೆಟ್‌ನ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಸಂಜಯ್ ದತ್-ಯಶ್ ನಡುವೆ ಫೈಟ್‌

  ಸಂಜಯ್ ದತ್-ಯಶ್ ನಡುವೆ ಫೈಟ್‌

  ಹೈದರಾಬಾದ್‌ನಲ್ಲಿ ಸಿನಿಮಾದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ನಡೆಯುತ್ತಿದ್ದು, ಅಧೀರ ಪಾತ್ರಧಾರಿ ಸಂಜಯ್ ದತ್ ಹಾಗೂ ರಾಕಿಭಾಯ್ ಯಶ್ ನಡುವಿನ ಫೈಟ್‌ ದೃಶ್ಯದ ಚಿತ್ರೀಕರಣ ಮಾಡಲಾಗುತ್ತಿದೆ. ಈ ಕೊನೆಯ ಭಯಾನಕ ಫೈಟ್ ಅನ್ನು ಫೈಟ್‌ ಮಾಸ್ಟರ್ಸ್‌ ಅನ್ಬರಿವ್ ಸಹೋದರರು ನಿರ್ದೇಶಿಸುತ್ತಿದ್ದಾರೆ.

  ಹಲವು ಕಾರ್ಯಗಳು ಬಾಕಿ ಇವೆ

  ಹಲವು ಕಾರ್ಯಗಳು ಬಾಕಿ ಇವೆ

  ಫೈಟ್ ದೃಶ್ಯಗಳ ಚಿತ್ರೀಕರಣದ ಬಳಿಕ ಸಿನಿಮಾ ಚಿತ್ರೀಕರಣ ಭಾಗ ಅಂತ್ಯವಾಗಲಿದ್ದು, ಪೋಸ್ಟ್ ಪ್ರೊಡಕ್ಷನ್ ಪ್ರಾರಂಭವಾಗಲಿದೆ. ಎಡಿಟಿಂಗ್, ಸೌಂಡ್ ಮಿಕ್ಸಿಂಗ್, ಹಿನ್ನೆಲೆ ಸಂಗೀತ, ಡಬ್ಬಿಂಗ್, ಗ್ರಾಫಿಕ್ಸ್‌, ಡಿಟಿಎಸ್ ಇನ್ನೂ ಹಲವು ಕಾರ್ಯಗಳು ನಡೆಯಲಿವೆ.

  English summary
  Actor Yash shared a exclusive still from the movie KGF 2. He said he participating in KGF 2 movie shooting last schedule.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X