'ಕೆಜಿಎಫ್-2'ನಲ್ಲಿ ರಾಕಿ ಭಾಯ್ ಅವತಾರ ಹೀಗಿರಲಿದೆ
Recommended Video
ಕಜಿಎಫ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಸದ್ದು ಮಾಡಿದ್ದ ಯಶ್ ಈಗ ಪಾರ್ಟು-2ಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈಗಾಗಲೆ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಆದ್ರೆ ರಾಕಿಂಗ್ ಸ್ಟಾರ್ ಇನ್ನು ಚಿತ್ರತಂಡ ಸೇರಿಕೊಂಡಿಲ್ಲ.
ಆದ್ರೆ ರಾಕಿ ಭಾಯ್ ಕೆಜಿಎಫ್ ಪಾರ್ಟ್-2 ನಲ್ಲಿ ಮಿಂಚಲು ಭರ್ಜರಿ ವರ್ಕೌಟ್ ಮಾಡುತ್ತಿದ್ದಾರೆ. ಇದರ ನಡುವೆ ಪಾರ್ಟ್-2ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಒಂದು ಜಲಕ್ ಅಭಿಮಾನಿಗಳಿಗೆ ತೋರಿಸಿದ್ದಾರೆ. ಹೌದು, ಕೆಜಿಎಫ್ ಚಾಪ್ಟರ್-2 ಚಿತ್ರದ ರಾಕಿ ಭಾಯ್ ಅವರ ಭಯಾನಕ ಲುಕ್ ಒಂದು ರಿಲೀಸ್ ಆಗಿದೆ.
ಮೊದಲ ಭಾಗದಲ್ಲಿ ಅಬ್ಬರಿಸಿದ್ದ ರಾಕಿ ಭಾಯ್ ಹೊಸ ಗೆಟಪ್ ನೋಡುತ್ತಿದ್ದರೆ ಎರಡನೆ ಭಾಗದಲ್ಲಿ ಯಶ್ ಅವತಾರ ಮತ್ತಷ್ಟು ಭಯಾನಕವಾಗಿರಲಿದೆ ಎನ್ನುವುದು ಗೊತ್ತಾಗುತ್ತಿದೆ. ಸದ್ಯ ರಿಲೀಸ್ ಆಗಿರುವ ರಾಕಿಂಗ್ ಸ್ಟಾರ್ ಹೊಸ ಅವತಾರ ಕುತೂಹಲ ಹೆಚ್ಚಿಸಿದೆ. ಉದ್ದ ಕೂದಲು ಮತ್ತು ಉದ್ದ ದಾಡಿ ಬಿಟ್ಟಿರುವ ಯಶ್ ನಟಭಯಂಕರ ಗೆಟಪ್ ಅನ್ನು ಕನ್ನಡಿ ಮುಂದೆ ನಿಂತು ಅವರೆ ಸೆರೆಹಿಡಿದ್ದಿದ್ದಾರೆ.

ಕೆಜಿಎಫ್ ಚಿತ್ರ ಶುರುವಾದಾಗಿನಿಂದ ಯಶ್ ದಾಡಿ ಸಖತ್ ಫೇಮಸ್ ಆಗಿತ್ತು. ಸುಮಾರು ಮೂರು ವರ್ಷಗಳಿಂದ ದಾಡಿ ಬಿಟ್ಟಿರುವ ಯಶ್ ಕೆಜಿಎಪ್ ಪಾರ್ಟ್-1 ರಿಲೀಸ್ ಆದ ನಂತರ ಕೂದಲು ಮತ್ತು ದಾಡಿಗೆ ಕತ್ತರಿ ಹಾಕಿದ್ದರು. ಆದ್ರೀಗ ಚಾಪ್ಟರ್-2 ಗಾಗಿ ಮತ್ತೆ ದಾಡಿ ಬಿಟ್ಟಿದ್ದಾರೆ.
ಅಂದ್ಹಾಗೆ ಕೆಜಿಎಫ್-2 ಚಿತ್ರೀಕರಣದಲ್ಲಿ ರಾಕಿಂಗ್ ಸ್ಟಾರ್ ಈಗಾಗಲೆ ಭಾಗಿಯಾಗಬೇಕಿತ್ತು. ಆದ್ರೆ ಕೆಲವು ದಿನಗಳು ಮುಂದೂಡಲ್ಪಟ್ಟ ಕಾರಣ ಇದೇ ತಿಂಗಳು 13ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಕೆಜಿಎಫ್-1ಗಿಂತ ಚಾಪ್ಟರ್-2 ಮತ್ತಷ್ಟು ರೋಚಕವಾಗಿರುವ ಸೂಚನೆ ಈ ಲುಕ್ ಹೇಳುತ್ತಿದೆ. ಎರಡನೆ ಭಾಗದಲ್ಲಿ ಬಾಲಿವುಡ್ ನ ಸ್ಟಾರ್ ನಟರು ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











