ಯಶ್-ರಾಧಿಕಾ ಪಂಡಿತ್ ದಂಪತಿಯ ಎರಡನೆಯ ಮಗುವಿನ ಹೆಸರು ಬಹಿರಂಗ

By ಫಿಲ್ಮ್ ಡೆಸ್ಕ್

ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಎರಡನೆಯ ಮಗು ಜನಸಿ 9 ತಿಂಗಳಾಗುತ್ತಾ ಬಂದಿದೆ. ಮೊದಲ ಮಗಳಿಗೆ 'ಐರಾ' ಎಂದು ತಮ್ಮ ಇಬ್ಬರೂ ಹೆಸರಿನ ಅಕ್ಷರಗಳು ಇರುವಂತೆ ವಿಭಿನ್ನ ಹೆಸರು ಇರಿಸಿದ್ದ ಯಶ್ ಮತ್ತು ರಾಧಿಕಾ, ಎರಡನೆಯ ಮಗುವಿಗೆ ಏನೆಂದು ಹೆಸರಿಡಲಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Recommended Video

ರಾಜ್ ಕುಮಾರ್ ಅಪಹರಣ ಆದಾಗ ವಿಷ್ಣುದಾದಾ ಆಡಿದ್ದ ಮಾತುಗಳು ಇಂದಿಗೂ ಜೀವಂತ | Rajkumar | Filmibeat Kannada

ಜೂನಿಯರ್ ಯಶ್‌ಅನ್ನು ಹೊರ ಜಗತ್ತಿಗೆ ಪರಿಚಯ ಮಾಡಿಸಿದ್ದು, ಆತನಿಗೆ ಆರು ತಿಂಗುಳು ತುಂಬಿದ ಸಂದರ್ಭದಲ್ಲಿ. ಏಪ್ರಿಲ್ 30ರಂದು ಎರಡನೆಯ ಮಗುವಿನ ಮೊದಲ ಮುದ್ದಾದ ಫೋಟೊವನ್ನು ಈ ತಾರಾದಂಪತಿ ಹಂಚಿಕೊಂಡಿದ್ದರು. ಆ ನಂತರ ಮಗನನ್ನು ಯಶ್ ಎತ್ತಿಕೊಂಡಿರುವ ಫೋಟೊ, ತಮ್ಮನನ್ನು ಐರಾ ಮಲಗಿಸುವ ಚೆಂದದ ವಿಡಿಯೋಗಳನ್ನು ರಾಧಿಕಾ ಪೋಸ್ಟ್ ಮಾಡಿದ್ದರು. ಈಗ ಮಗನ ಮತ್ತೊಂದು ವಿಡಿಯೋವೊಂದನ್ನು ಯಶ್ ಶೇರ್ ಮಾಡಿದ್ದಾರೆ. ಅದರಲ್ಲಿ ಮಗನ ಹೆಸರನ್ನು ಸೂಕ್ಷ್ಮವಾಗಿ ಬಹಿರಂಗಪಡಿಸಿದ್ದಾರೆ.

ಕಾರ್ ಒಳಗೆ ಮಗನ ನೃತ್ಯ

ಕಾರ್ ಒಳಗೆ ಮಗನ ನೃತ್ಯ

ಆಟದ ಕಾರ್ ಒಳಗೆ ನಿಂತುಕೊಂಡ ಮಗ ಮ್ಯೂಸಿಕ್‌ಗೆ ಕುಣಿಯುವ ವಿಡಿಯೋವನ್ನು ಯಶ್ ಹಂಚಿಕೊಂಡಿದ್ದಾರೆ. ಮಗನನ್ನು ಡ್ಯಾನ್ಸ್ ಮಾಡುವಂತೆ ಅವರು ಹುರಿದುಂಬಿಸಿದ್ದಾರೆ. ಕಮಾನ್ ಡ್ಯಾನ್ಸ್,, ಗುಡ್ ಕಂದ ಎಂದು ಉತ್ತೇಜನ ನೀಡಿದಷ್ಟೂ ಮಗ ಖುಷಿಯಿಂದ ಕುಣಿದಿದ್ದಾನೆ.

ಮಗನಿಗೆ ಪ್ರೀತಿಯ ಹೆಸರು

ಮಗನಿಗೆ ಪ್ರೀತಿಯ ಹೆಸರು

ಈ ವಿಡಿಯೋದಲ್ಲಿ ಮಗನನ್ನು ತಾವು ಪ್ರೀತಿಯಿಂದ ಕರೆಯುವ ಹೆಸರನ್ನು ಯಶ್ ಬಹಿರಂಗಪಡಿಸಿದ್ದಾರೆ. ಮಗನಿಗೆ ಈ ಸನ್ನಿವೇಶದಲ್ಲಿ ನಾಮಕರಣ ಮಾಡುವ ಕಾರ್ಯಕ್ರಮ ಆಯೋಜಿಸುವುದು ಕಷ್ಟವಾಗಬಹುದು ಎಂದಿದ್ದ ಯಶ್, ತಾವೇ ಮುದ್ದಿನಿಂದ ಹೆಸರಿಟ್ಟಿರುವಂತಿದೆ. ಡ್ಯಾನ್ಸ್ ಮಾಡುವ ಮಗನಿಗೆ ಹುರಿದುಂಬಿಸುವಾಗ ಆತನನ್ನು 'ಕೆಂಚು' ಎಂದು ಕರೆದಿದ್ದಾರೆ.

ಮ್ಯೂಸಿಕ್ ಎಂದರೆ ಕುಣಿಯುತ್ತಾನೆ

ಈ ವಿಡಿಯೋಕ್ಕೆ ಯಶ್ ಹಾಕಿರುವ ಕ್ಯಾಪ್ಷನ್ ಕೂಡ ಗಮನ ಸೆಳೆದಿದೆ. ಮಗ ಈಗ ನಿಲ್ಲುವಷ್ಟು ಬೆಳೆದಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ. ಆದರೆ ಮ್ಯೂಸಿಕ್ ಹಾಕಿದರೆ ಮಾತ್ರ ನಮ್ಮ ಪುಟಾಣಿ ಮನುಷ್ಯ ಪಾರ್ಟಿ ಪ್ರಾಣಿಯಾಗಿಬಿಡುತ್ತಾನೆ ಎಂದು ಸಂಗೀತ ಮಗನನ್ನು ಹೇಗೆ ಹುಚ್ಚೆಬ್ಬಿಸುತ್ತದೆ ಎಂಬುದನ್ನು ಯಶ್ ವಿವರಿಸಿದ್ದಾರೆ.

ಹುರಿದುಂಬಿಸಿದ್ದ ಯಶ್

ಹುರಿದುಂಬಿಸಿದ್ದ ಯಶ್

ಈ ವಿಡಿಯೋದಲ್ಲಿ ಮಗ ಮತ್ತಷ್ಟು ಖುಷಿಯಿಂದ ನರ್ತಿಸಲಿ ಎಂದು ಯಶ್ ಕಮಾನ್ ಕೆಂಚು ಡ್ಯಾನ್ಸ್, ಅದೂ ಮಗನೇ, ವಾವ್ ಸೂಪರ್ ಮಗನೇ, ಗುಡ್ ಕಂದಾ, ಸೂಪರ್ ನೀನು ಎಂದು ವಿಷಲ್ ಹೊಡಿದು ವಾವ್ ಎಂದು ಹುರಿದುಂಬಿಸಿದ್ದಾರೆ. ಹಿನ್ನೆಲೆಯಲ್ಲಿ ಬರುವ ಅತಿ ಉತ್ಸಾಹಿ ಅಪ್ಪನ ಧ್ವನಿಯನ್ನು ನಿರ್ಲಕ್ಷಿಸಿ ಎಂದು ತಮಾಷೆಯಾಗಿ ಮನವಿ ಮಾಡಿದ್ದಾರೆ.

ವೈರಲ್ ಆದ ವಿಡಿಯೋ

ವೈರಲ್ ಆದ ವಿಡಿಯೋ

ಈ ವಿಡಿಯೋ ಸಕತ್ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ಯಶ್ ಇದನ್ನು ಹಂಚಿಕೊಂಡ 45 ನಿಮಿಷದಲ್ಲಿಯೇ ಎರಡು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದೆ. ಮಗನಿಗೆ ಯಾವಾಗ ಹೆಸರಿಡುವುದು ಎಂದು ಯಶ್ ಮತ್ತು ರಾಧಿಕಾ ಅವರನ್ನು ಅನೇಕರು ಕೇಳುತ್ತಿದ್ದಾರೆ. ಇದಕ್ಕೆ ಕೆಲವು ತಿಂಗಳ ಹಿಂದೆ ಪ್ರತಿಕ್ರಿಯಿಸಿದ್ದ ಯಶ್, ಸಾಮಾನ್ಯವಾಗಿ ಏಳು ಅಥವಾ ಒಂಬತ್ತನೇ ತಿಂಗಳಲ್ಲಿ ನಾಮಕರಣ ಮಾಡಲಾಗುತ್ತದೆ. ಆದರೆ ಈಗಿನ ಪರಿಸ್ಥಿತಿ ಚೆನ್ನಾಗಿಲ್ಲ. ಕಾದು ನೋಡೋಣ ಎಂದು ಹೇಳಿದ್ದರು.

ಈ ತಿಂಗಳ ಅಂತ್ಯಕ್ಕೆ 9 ತಿಂಗಳು

ಈ ತಿಂಗಳ ಅಂತ್ಯಕ್ಕೆ 9 ತಿಂಗಳು

ಜುಲೈ 30ಕ್ಕೆ ಮಗನಿಗೆ ಒಂಬತ್ತು ತಿಂಗಳು ತುಂಬಲಿದ್ದು, ನಂತರ ನಾಮಕರಣ ಮಾಡುತ್ತಾರೆಯೇ ಅಥವಾ ಸಮಾರಂಭಕ್ಕೆ ಬಂಧು ಮಿತ್ರರೆಲ್ಲರನ್ನೂ ಆಹ್ವಾನಿಸಬೇಕಿರುವುದರಿಂದ ಈಗಿನ ವಾತಾವರಣ ಸರಿ ಹೋಗುವವರೆಗೂ ನಾಮಕರಣ ಶಾಸ್ತ್ರ ನಡೆಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ನಾನು ಗರ್ಭಿಣಿಯಲ್ಲ ಎಂದಿದ್ದ ರಾಧಿಕಾ

ನಾನು ಗರ್ಭಿಣಿಯಲ್ಲ ಎಂದಿದ್ದ ರಾಧಿಕಾ

ಕೆಲವು ದಿನಗಳ ಹಿಂದೆ ಯಶ್ ಪತ್ನಿ ರಾಧಿಕಾ ಜತೆ ಹಾಕಿದ್ದ ಫೋಟೊ ವೈರಲ್ ಆಗಿತ್ತು. ಲಾಕ್ ಡೌನ್ ಪತ್ನಿಸ್ನೇಹಿ ಆಗಿದೆ ಎಂದು ತಾವಿಬ್ಬರೂ ಜತೆಗೆ ಕಾಲ ಕಳೆಯಲು ಸಾಧ್ಯವಾಗುತ್ತಿದೆ ಎಂಬುದಾಗಿ ಬರೆದಿದ್ದರು. ಅವರು ಹಾಕಿದ್ದ ಫೋಟೊದಲ್ಲಿ ಹಣೆಯ ಮೇಲೆ ಮೂರು ಬೆರಳನ್ನು ಇರಿಸಿದ್ದರು. ಇದನ್ನು ಕಂಡ ಜನರು ಮೂರನೇ ಮಗು ಆಗುವ ಸೂಚನೆಯೇ ಎಂದು ತಮಾಷೆಯಾಗಿ ಕೇಳಿದ್ದರು. ಈ ಪ್ರಶ್ನೆಗಳನ್ನು ಕಂಡಿದ್ದ ರಾಧಿಕಾ, ಅದು ಯಾವುದರ ಸಂಕೇತವೂ ಅಲ್ಲ, ನಾನು ಗರ್ಭಿಣಿಯಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

More from Filmibeat

English summary
Actor Yash has revealed the pet name of his son while sharing an adorable video of him dancing in a toy car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X