»   » ರಾತ್ರಿಯೆಲ್ಲಾ ರಾಕಿಂಗ್ ಸ್ಟಾರ್ ಯಶ್ ನಿದ್ದೆಗೆಡುತ್ತಿರುವುದೇಕೆ?

ರಾತ್ರಿಯೆಲ್ಲಾ ರಾಕಿಂಗ್ ಸ್ಟಾರ್ ಯಶ್ ನಿದ್ದೆಗೆಡುತ್ತಿರುವುದೇಕೆ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸದ್ಯದ ಮೋಸ್ಟ್ ಬಿಜಿಯೆಸ್ಟ್ ಸ್ಟಾರ್ ಯಾರು ಅಂದ್ರೆ, ಎಲ್ಲರೂ ಬೆಟ್ಟು ಮಾಡಿ ತೋರಿಸುವುದು ರಾಕಿಂಗ್ ಸ್ಟಾರ್ ಯಶ್ ರತ್ತ. ಕೈಲಿ ಆರೇಳು ಸಿನಿಮಾಗಳನ್ನ ಇಟ್ಕೊಂಡು ಇನ್ನೂ ಮೂರ್ನಾಲ್ಕು ವರ್ಷ ಯಶ್ ಗೆ ಪುರುಸೊತ್ತೇ ಇಲ್ಲ.

ಕೈತುಂಬ ಕೆಲಸ ಇರುವ ಯಶ್ ಗೆ ಈಗ ರಾತ್ರಿಯೆಲ್ಲಾ ನಿದ್ದೆಗೆಡುವ ಪರಿಸ್ಥಿತಿ. ಅದಕ್ಕೆಲ್ಲಾ ಕಾರಣ, 'ಮಾಸ್ಟರ್ ಪೀಸ್' ಚಿತ್ರ. ಮಂಜು ಮಾಂಡವ್ಯ ನಿರ್ದೇಶನದಲ್ಲಿ ರೆಡಿಯಾಗುತ್ತಿರುವ ಅದ್ದೂರಿ ಸಿನಿಮಾ 'ಮಾಸ್ಟರ್ ಪೀಸ್'.


yash

'ಮಾಸ್ಟರ್ ಪೀಸ್' ಚಿತ್ರದಲ್ಲಿ ಥೇಟ್ ಭಗತ್ ಸಿಂಗ್ ತರಹ ಕ್ರಾಂತಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್ ಈಗ ನಿದ್ದೆ ಮಾಡುತ್ತಿರುವುದು ದಿನಕ್ಕೆ 4 ರಿಂದ 5 ಗಂಟೆಗಳು ಮಾತ್ರ. ಅದು ಸಮಯಾವಕಾಶ ಸಿಕ್ಕರೆ. ಇಲ್ಲಾಂದ್ರೆ ಅದೂ ಇಲ್ಲ.! [ಯಶ್ 'ಮಾಸ್ಟರ್ ಪೀಸ್' ಶೂಟಿಂಗ್ ನಿಂತೋಯ್ತಾ?]


'ಮಾಸ್ಟರ್ ಪೀಸ್' ಚಿತ್ರದ ಕೆಲವು ಆಕ್ಷನ್ ಭಾಗಗಳನ್ನ ರಾತ್ರಿ ಹೊತ್ತು ಚಿತ್ರೀಕರಣ ಮಾಡಬೇಕಿದೆ. ಅದಕ್ಕಂತ ಇಡೀ ಚಿತ್ರತಂಡ ಎಂಟು ರಾತ್ರಿಗಳನ್ನ ಮೀಸಲಿಟ್ಟಿದೆ. ಬೆಳಗ್ಗೆ ಹೊತ್ತು ನಿದ್ರೆ ಮಾಡಿ, ನೈಟ್ ಶಿಫ್ಟ್ ನ್ಲಲಿ ಇಡೀ 'ಮಾಸ್ಟರ್ ಪೀಸ್' ತಂಡ ಕೆಲಸ ಮಾಡುತ್ತಿದೆ. [ಯಶ್ ಹುಟ್ಟುಹಬ್ಬಕ್ಕೆ 'ಮಾಸ್ಟರ್ ಪೀಸ್' ಗಿಫ್ಟ್]


ನೈಟ್ ಶೂಟ್ ಎಂಜಾಯ್ ಮಾಡುವ ಹಾಗಿದ್ದರೂ, ಬೆಳ್ಳಗ್ಗೆ ನಿದ್ದೆ ಬಾರದೆ ಇದ್ದಾಗ ಯಶ್ ಗೆ ಕಿರಿಕಿರಿ ಆಗುವುದು ಹೆಚ್ಚಂತೆ. ಆದರೂ, ಸಿನಿಮಾ ಚೆನ್ನಾಗಿ ಬರಲಿ ಅಂತ ಯಾವುದಕ್ಕೂ 'ನೋ' ಅನ್ನದೆ 'ಯಶ್' ಮುನ್ನುಗ್ಗುತ್ತಿದ್ದಾರೆ. (ಏಜೆನ್ಸೀಸ್)

English summary
The shooting of Kannada Actor Yash starrer 'Masterpiece' is on at a brisk pace. Since, certain portions of the film are to be shot in the night, Yash is working all night and sleeping for just 4-5 hours during day.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada