'KGF-2' ಚಿತ್ರದ 10 ನಿಮಿಷದ ದೃಶ್ಯಕ್ಕೆ ರಾಕಿ ಭಾಯ್ 6 ತಿಂಗಳ ತಯಾರಿ

ಇಡೀ ಭಾರತೀಯ ಚಿತ್ರರಂಗವೆ ಕುತೂಹಲದಿಂದ ಕಾಯುತ್ತಿರುವ ಕೆಜಿಎಫ್-2 ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಕೆಜಿಎಫ್ ಮೊದಲ ಭಾಗಕ್ಕಿಂತ ಎರಡನೆ ಭಾಗ ಮತ್ತೆಷ್ಟು ರೋಚಕವಾಗಿ ಮೂಡಿ ಬರಲಿದೆಯಂತೆ. ರಾಕಿಭಾಯ್ ಮತ್ತು ಬಾಲಿವುಡ್ ಮುನ್ನಾಭಾಯ್ ನಡುವಿನ ಭಯಾನಕ ಕಾಳಗ ನೋಡಲು ಚಿತ್ರಾಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.

ಈಗಾಗಲೆ ಸಂಜಯ್ ದತ್ ಎಂಟ್ರಿಯಾಗಿದ್ದು ಸಾಕಷ್ಟು ಚಿತ್ರೀಕರಣ ಕೂಡ ಮಾಡಿಮುಗಿಸಿದ. ಇನ್ನು ಯಶ್ ಮತ್ತು ಸಂಜಯ್ ದತ್ ನಡುವಿನ ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯ ಸೆರೆಹಿಡಿಯಲು ಚಿತ್ರತಂಡ ಸಿದ್ಧವಾಗಿದೆ. ಆಕ್ಷನ್ ದೃಶ್ಯಕ್ಕೆ ಸಾಕಷ್ಟು ತಯಾರಿ ನಡೆಸುತ್ತಿದ್ದಾರಂತೆ. ವಿಶೇಷ ಅಂದರೆ ಚಿತ್ರದ ಒಂದು ಪ್ರಮುಖ ದೃಶ್ಯಕ್ಕಾಗಿ ಯಶ್ ಬರೋಬ್ಬರಿ 6 ತಿಂಗಳಿಂದ ತಯಾರಿ ನಡೆಸಿದ್ದಾರಂತೆ. ಮುಂದೆ ಓದಿ..

ಒಂದು ದೃಶ್ಯಕ್ಕೆ 6 ತಿಂಗಳ ತಯಾರಿ

ಒಂದು ದೃಶ್ಯಕ್ಕೆ 6 ತಿಂಗಳ ತಯಾರಿ

ಕೆಜಿಎಫ್-2 ಚಿತ್ರದ ಒಂದು ದೃಶ್ಯಕ್ಕಾಗಿ ಯಶ್ ಸುಮಾರು 6 ತಿಂಗಳಿಂದ ತಯಾರಿ ನಡೆಸಿದ್ದಾರಂತೆ. ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿದ್ದಂತೆ ಎರಡನೆ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಹಾಗಾಗಿ ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನು ಮೀರಿ ಸಿನಿಮಾ ಮೂಡಿ ಬರಬೇಕು ಎನ್ನುವ ಉದ್ದೇಶದಿಂದ ಶ್ರಮ ವಹಿಸಿ ಚಿತ್ರೀಕರಣ ಮಾಡುತ್ತಿದ್ದಾರೆ. ಹಾಗಾಗಿಯೆ ರಾಕಿ ಭಾಯ್ ಪಾತ್ರಕ್ಕಾಗಿ ಯಶ್ ಸಖತ್ ರಿಸ್ಕ್ ತೆಗೆದುಕೊಂಡಿದ್ದಾರೆ.

ಯಾವ ದೃಶ್ಯಕ್ಕೆ 6 ತಿಂಗಳ ತಯಾರಿ

ಯಾವ ದೃಶ್ಯಕ್ಕೆ 6 ತಿಂಗಳ ತಯಾರಿ

ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಯಶ್ ಮತ್ತು ಸಂಜಯ್ ದತ್ ನಡುವೆ ಬೇರ್ ಬಾಡಿ ಫೈಟಿಂಗ್ ದೃಶ್ಯವಿರುತ್ತೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಈ ಒಂದು ದೃಶ್ಯಕ್ಕಾಗಿ ಚಿತ್ರತಂಡ ಸಾಕಷ್ಟು ಶ್ರಮಿಸುತ್ತಿದೆಯಂತೆ. ಅಲ್ಲದೆ ಸಂಜಯ್ ಮತ್ತು ಯಶ್ ಇಬ್ಬರು ಭರ್ಜರಿ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಹಾಗಾಗಿ ಈ ದೃಶ್ಯಕ್ಕಾಗಿಯೆ ಯಶ್ 6 ತಿಂಗಳಿಂದ ತಯಾರಿ ನಡೆಸಿರಬಹುದು.

ಬಹುಕೋಟಿ ವೆಚ್ಚದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್

ಬಹುಕೋಟಿ ವೆಚ್ಚದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್

ಕೆಜಿಎಫ್-2 ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆಯಂತೆ ಚಿತ್ರತಂಡ. ಚಿತ್ರದ ಬಹುಮುಖ್ಯವಾದ ಪಾರ್ಟ್ ಆಗಿರುವುದರಿಂದ ಈ ದೃಶ್ಯಕ್ಕಾಗಿ ಚಿತ್ರತಂಡ ಸಾಕಷ್ಟು ಸಮಯ ತೆಗೆದುಕೊಂಡು ಚಿತ್ರೀಕರಿಸುತ್ತಿದೆ. ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಕ್ಲೈಮ್ಯಾಕ್ಸ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಯಾವಾಗ ಬಿಡುಗಡೆ?

ಯಾವಾಗ ಬಿಡುಗಡೆ?

ಕೆಜಿಎಫ್-2 ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಇಡೀ ದೇಶವೆ ಕಾತರದಿಂದ ಕಾಯುತ್ತಿದೆ. ಈ ಮೊದಲು ಚಿತ್ರವನ್ನು ಬೇಸಿಗೆ ರಜೆಯ ಸಮಯದಲ್ಲಿ ತೆರೆಗೆ ತರುವ ಪ್ಲಾನ್ ಮಾಡಿತ್ತು ಚಿತ್ರತಂಡ. ಆದರೆ ಚಿತ್ರೀಕರಣ ಇನ್ನು ತಡವಾದ ಕಾರಣ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಚಿತ್ರ ಅಕ್ಟೋಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

More from Filmibeat

English summary
Kannada Actor Yash six months preparation for 10 minutes shot in KGF-2.
Read more about: yash kgf 2 ಯಶ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X