For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್-2' ಚಿತ್ರದ ಈ ಒಂದು ದೃಶ್ಯಕ್ಕೆ ಯಶ್ 6 ತಿಂಗಳ ತಯಾರಿ

  |

  ಇಡೀ ಭಾರತೀಯ ಚಿತ್ರರಂಗವೆ ಕುತೂಹಲದಿಂದ ಕಾಯುತ್ತಿರುವ ಕೆಜಿಎಫ್-2 ಚಿತ್ರದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ. ಕೆಜಿಎಫ್ ಮೊದಲ ಭಾಗಕ್ಕಿಂತ ಎರಡನೆ ಭಾಗ ಮತ್ತಷ್ಟು ರೋಚಕವಾಗಿ ಮೂಡಿ ಬರಲಿದೆಯಂತೆ. ರಾಕಿಭಾಯ್ ಮತ್ತು ಬಾಲಿವುಡ್ ಮುನ್ನಾಭಾಯ್ ನಡುವಿನ ಭಯಾನಕ ಕಾಳಗ ನೋಡಲು ಚಿತ್ರಾಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.

  Yash has been preparing for a little scene for 8 months

  ಈಗಾಗಲೆ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ಮುಗಿಸಿದೆಯಂತೆ ಚಿತ್ರತಂಡ. ಸದ್ಯ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಯಶ್ ಇತ್ತೀಚಿಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಯಶ್ ಕೆಜಿಎಫ್-2 ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಈ ಸಮಯದಲ್ಲಿ ಒಂದು ಪುಟ್ಟ ದೃಶ್ಯಕ್ಕಾಗಿ 6 ತಿಂಗಳಿಂದ ತಯಾರಿ ನಡೆಸಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

  ಫಿಲ್ಮ್ ಸಿಟಿ ಮೈಸೂರಿನಲ್ಲಿ ಆದರೆ ಒಳ್ಳೆಯದು: ನಟ ಯಶ್ಫಿಲ್ಮ್ ಸಿಟಿ ಮೈಸೂರಿನಲ್ಲಿ ಆದರೆ ಒಳ್ಳೆಯದು: ನಟ ಯಶ್

  ಫ್ಲ್ಯಾಶ್ ಬ್ಯಾಕ್ ದೃಶ್ಯಕ್ಕಾಗಿ 6 ತಿಂಗಳ ತಯಾರಿ

  ಫ್ಲ್ಯಾಶ್ ಬ್ಯಾಕ್ ದೃಶ್ಯಕ್ಕಾಗಿ 6 ತಿಂಗಳ ತಯಾರಿ

  ಕೆಜಿಎಫ್-2 ಚಿತ್ರದಲ್ಲಿ 1971ರ ಕಾಲಘಟ್ಟದ ಒಂದು ದೃಶ್ಯ ಬರುತ್ತಂತೆ. ಫ್ಲ್ಯಾಶ್ ಬ್ಯಾಕ್ ದೃಶ್ಯಕ್ಕಾಗಿ ಯಶ್ 6 ತಿಂಗಳಿಂದ ಭರ್ಜರಿ ತಯಾರಿಗಳನ್ನು ನಡೆಸಿದ್ದಾರೆ. ಈ ದೃಶ್ಯ ಚಿತ್ರದಲ್ಲಿ 10 ನಿಮಿಷ ಮಾತ್ರ ಇರಲಿದೆಯಂತೆ. ಪುಟ್ಟ ದೃಶ್ಯಕ್ಕಾಗಿ ಯಶ್ ತೂಕ ಕೂಡ ಇಳಿಸಿಕೊಂಡಿದ್ದಾರಂತೆ.

  'KGF-2' ಚಿತ್ರದ 10 ನಿಮಿಷದ ದೃಶ್ಯಕ್ಕೆ ರಾಕಿ ಭಾಯ್ 6 ತಿಂಗಳ ತಯಾರಿ'KGF-2' ಚಿತ್ರದ 10 ನಿಮಿಷದ ದೃಶ್ಯಕ್ಕೆ ರಾಕಿ ಭಾಯ್ 6 ತಿಂಗಳ ತಯಾರಿ

  ರಿಲೀಸ್ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇವೆ

  ರಿಲೀಸ್ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇವೆ

  ಕೆಜಿಎಫ್-2 ಏಪ್ರಿಲ್ ನಲ್ಲಿ ತೆರೆಗೆ ಬರುತ್ತೆ ಎಂದು ಹೇಳಲಾಗಿತ್ತು. ಆದರೆ ಇನ್ನು ಚಿತ್ರೀಕರಣ ಮುಗಿಯದ ಕಾರಣ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಸದ್ಯ ಕೆಜಿಎಫ್-2 ಜುಲೈ ಅಥವಾ ಅಕ್ಟೋಬರ್ ನಲ್ಲಿ ರಿಲೀಸ್ ಆಗುತ್ತೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಯಶ್ "ಸಧ್ಯದಲ್ಲೇ ರಿಲೀಸ್ ಬಗ್ಗೆ ಹೇಳುತ್ತೇವೆ. ಆದರೆ ಈ ವರ್ಷವೆ ರಿಲೀಸ್ ಆಗುತ್ತೆ" ಎಂದರು.

  RRRಸಿನಿಮಾದ ಜೊತೆ ಕ್ಲ್ಯಾಶ್ ಆಗಲ್ಲ

  RRRಸಿನಿಮಾದ ಜೊತೆ ಕ್ಲ್ಯಾಶ್ ಆಗಲ್ಲ

  ದಕ್ಷಿಣ ಭಾರತೀಯ ಚಿತ್ರರಂಗದ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ RRR ಮತ್ತು ಜಿಕೆಎಫ್ ನಡುವೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗುತ್ತೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಈ ಬಗ್ಗೆ ಮಾತನಾಡಿದ ಯಶ್ ಈ ಬಗ್ಗೆ ಈಗಾಗಲೆ ಮಾತನಾಡಿದ್ದೇವೆ. ಎರಡು ಸಿನಿಮಾಗಳ ಬಾಲಿವುಡ್ ರೈಟ್ಸ್ ಅನ್ನು ಅನಿಲ್ ತದಾನಿ ತೆಗೆದುಕೊಂಡಿದ್ದಾರೆ. ಚರ್ಚೆ ಮಾಡಿಯೇ ರಿಲೀಸ್ ಮಾಡುವುದು. ಪ್ಯಾನ್ ಇಂಡಿಯ ಸಿನಿಮಾವಿದು. ಟಾಪ್ ಲೆವೆಲ್ ನಲ್ಲಿ ಈ ತರ ಎಲ್ಲಾ ಇರುವುದಿಲ್ಲ. ಎಂದು ಹೇಳಿದ್ದಾರೆ.

  ಕೊರೊನಾ ಎಫೆಕ್ಟ್: ನಟಿ ರಾಧಿಕಾ ಪಂಡಿತ್ ಹುಟ್ಟುಹಬ್ಬ ಆಚರಣೆ ಕ್ಯಾನ್ಸಲ್ಕೊರೊನಾ ಎಫೆಕ್ಟ್: ನಟಿ ರಾಧಿಕಾ ಪಂಡಿತ್ ಹುಟ್ಟುಹಬ್ಬ ಆಚರಣೆ ಕ್ಯಾನ್ಸಲ್

  ಇಂಡಿಯನ್ ಆರ್ಮಿ ಟ್ರಕ್ ಫೋಟೋ ಲೀಕ್

  ಇಂಡಿಯನ್ ಆರ್ಮಿ ಟ್ರಕ್ ಫೋಟೋ ಲೀಕ್

  ಕೆಜಿಎಫ್-2 ಚಿತ್ರದ ಕ್ಲ್ಯಮ್ಯಾಕ್ಸ್ ನಲ್ಲಿ ಇಂಡಿಯನ್ ಆರ್ಮಿ ಟ್ರಕ್ ಗಳನ್ನು ಬಳಸಿಕೊಳ್ಳಲಾಗಿದೆ. ನೂರಾರು ಟ್ರಕ್ ಗಳು ಭಾಗಿಯಾಗಿರುವ ಫೋಟೋ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿದ ಯಶ್ "ಫೋಟೋಗಳು ಅದೇಗೊ ರಿವೀಲ್ ಆಗುತ್ತೆ. ಎಷ್ಟು ಕಂಟ್ರೋಲ್ ಮಾಡಿದರು ಲೀಕ್ ಆಗುತ್ತೆ. ಆದರೆ ಯಾವುದೂ ಮುಖ್ಯವಾದ ಫೋಟೋಗಳು ಲೀಕ್ ಆಗಿಲ್ಲ" ಎಂದಿದ್ದಾರೆ.

  English summary
  Kannada Actor Yash six months preparation for KGF-2 Flashback scene.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X