ಕಟ್ಟು ಕಥೆಗಳನ್ನ ನಿಜ ಮಾಡಿದ ಯಶ್ ಅಂಡ್ ಟೀಂ.!
Recommended Video

ಕೆಜಿಎಫ್ ಚಿತ್ರದ ಯಶಸ್ಸಿನಿಂದ ರಾಕಿಂಗ್ ಯಶ್ ಹಾಗೂ ಚಿತ್ರತಂಡ ಫುಲ್ ಖುಷಿಯಾಗಿದೆ. ಐದು ಭಾಷೆಯಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಎಲ್ಲರಿಗೂ ಧನ್ಯವಾದಗಳನ್ನ ತಿಳಿಸಿದ್ದಾರೆ.
ಈ ನಡುವೆ ಕನ್ನಡದಲ್ಲಿ ನೂರು ಕೋಟಿ ಗಳಿಸಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಸ್ಯಾಂಡಲ್ ವುಡ್ ಹಿರಿಮೆಯನ್ನ ಹೆಚ್ಚಿಸಿದೆ. ಮೊದಲ ಬಾರಿಗೆ ಕನ್ನಡ ಚಿತ್ರವೊಂದು ನೂರು ಕೋಟಿ ಗಳಿಸಿರುವ ಬಗ್ಗೆ ಮಾತನಾಡಿದ ಯಶ್ ''ಕಟ್ಟು ಕಥೆಗಳನ್ನ ನಿಜ ಮಾಡಿದ್ದೇವೆ'' ಎಂದು ಖುಷಿಯಿಂದ ಹೇಳಿದ್ದಾರೆ.
''ಕನ್ನಡದಲ್ಲಿ ನೂರು ಕೋಟಿ ಬಿಸಿನೆಸ್, ಇಷ್ಟು ದೊಡ್ಡ ರಿಲೀಸ್ ಆಗುತ್ತಾ, ದೊಡ್ಡ ಬಜೆಟ್ ಸಿನಿಮಾ ಎಂಬುದನ್ನ ಕಟ್ಟುಕಥೆಗಳು ಎನ್ನುತ್ತಿದ್ದರು. ಅದಕ್ಕೆ ತಕ್ಕಂತೆ ಕೆಲವು ಕಟ್ಟುಕಥೆಗಳು ಇರ್ತಿದ್ವು. ಬಟ್, ಈಗ ಅದನ್ನೆಲ್ಲಾ ನಿಜ ಮಾಡಿದ್ದೀವಿ. ಇದು ಸತ್ಯ ಆಗಿದೆ, ಇದು ನಮ್ಮ ತಂಡದಿಂದ ಸಾಧ್ಯವಾಗಿದೆ'' ಎಂದು ಯಶ್ ದಿಟ್ಟೆದೆಯಿಂದ ಹೇಳಿದರು.

ಅಂದ್ಹಾಗೆ, ಕನ್ನಡದಲ್ಲಿ ಇದುವರೆಗೂ ಯಾವ ಚಿತ್ರವೂ ನಿರ್ದಿಷ್ಟವಾದ ಬಜೆಟ್ ಮತ್ತು ನಿರ್ದಿಷ್ಟವಾದ ಗಳಿಕೆಯನ್ನ ಅಧಿಕೃತವಾಗಿ ಘೋಷಿಸಿಲ್ಲ. ಬಟ್, ಮುಂಗಾರು ಮಳೆ, ಕಿರಿಕ್ ಪಾರ್ಟಿ, ರಾಜಕುಮಾರ ಅಂತಹ ಚಿತ್ರಗಳು ಹೆಚ್ಚು ಗಳಿಕೆ ಕಂಡಿದೆ ಎಂಬ ದಾಖಲೆಯಿದೆ.


Click it and Unblock the Notifications











