Related Articles
'ಮಫ್ತಿ' ಆದ್ಮೇಲೆ ನಿರ್ದೇಶಕ ನರ್ತನ್ ಕಣ್ಣು ಯಶ್ ಮೇಲೆ.!
ಯಶ್ ಗಿದೆ ಹೀಗೊಂದು ಆಸೆ: ಯಾವಾಗ ಈಡೇರುತ್ತೋ.?
ಅಭಿಮಾನಿ ಪ್ರಶ್ನೆ: ರಾಧಿಕಾ-ಯಶ್ ಮತ್ತೆ ಒಟ್ಟಿಗೆ ನಟಿಸ್ತಾರಾ?
ಸುದೀಪ್ ಜೊತೆ ಸಿನಿಮಾ ಮಾಡ್ತಾರಂತೆ ರಾಕಿಂಗ್ ಸ್ಟಾರ್
ಚುನಾವಣಾ ಪ್ರಚಾರಕ್ಕೆ ಯಶ್ ಬರಬೇಕಂದ್ರೆ ರಾಜಕಾರಣಿಗಳು 'ಈ' ಕಂಡೀಷನ್ ನ ಒಪ್ಪಿಕೊಳ್ಳಲೇಬೇಕು.!
'ನಾನು ಒಳ್ಳೆಯವನಲ್ಲ, ನನ್ನನ್ನ ಒಳ್ಳೆಯವನು ಅಂತ ಅಂದುಕೊಳ್ಳಬೇಡಿ' ಎಂದ ಯಶ್.!
ನಿರ್ದೇಶಕರೇ ಕೇಳಿಸಿಕೊಳ್ಳಿ... ದರ್ಶನ್ ಜೊತೆಗೆ ಸಿನಿಮಾ ಮಾಡಲು ಯಶ್ ರೆಡಿ!
ಕೆಲಸ ಮಾಡುವ ಹುಡುಗರು ಸ್ಟಾರ್ ಗಳನ್ನೇ ಹೆದರಿಸುತ್ತಾರಂತೆ.!
'ರೌಡಿ ಅಟ್ಯಾಕ್' ಬಗ್ಗೆ ಕೊನೆಗೂ ಮೌನ ಮುರಿದು ನಿಜ ಹೇಳಿದ ಯಶ್.!
ಯಶ್ ಗಡ್ಡಕ್ಕೆ ಕತ್ತರಿ ಹಾಕಲು ಡೇಟ್ ಫಿಕ್ಸ್ !
ಕನ್ನಡದ ಕೋಟ್ಯಾಧಿಪತಿ ಆಂಕರಿಂಗ್ ಬಗ್ಗೆ ಯಶ್ ಮಾತು
ಹಠಕ್ಕೆ ಬಿದ್ದ ನಟ ಯಶ್: ದಿಢೀರ್ ಅಂತ ಪೆಂಟ್ ಹೌಸ್ ಖರೀದಿಸಿದ ರಹಸ್ಯ ಬಯಲು.!
ಈ 'ಸಿಕ್ಸ್ ಪ್ಯಾಕ್' ಹುಡುಗ ಯಾವ ಕನ್ನಡ ನಟಿಯ ಸಹೋದರ.?

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಇದೆ. ಒಬ್ಬ ನಟನನ್ನ ಕಂಡ್ರೆ, ಮತ್ತೊಬ್ಬ ನಟನಿಗೆ ಆಗಲ್ಲ. ಅದೇ ರೀತಿ ಸ್ಟಾರ್ ಅಭಿಮಾನಿಗಳು ಕೂಡ ಕಿತ್ತಾಡ್ತಾರೆ ಎಂಬ ಆರೋಪವಿದೆ. ಇದನ್ನ ಕನ್ನಡ ಸಿನಿತಾರೆಯರು ಒಪ್ಪುವುದಿಲ್ಲ. ಅದು ನಿಜ ಕೂಡ ಹೌದು.
ಈಗ ಕಾಲಬದಲಾಗಿದೆ. ಒಬ್ಬರ ಸಿನಿಮಾವನ್ನ ಮತ್ತೊಬ್ಬರು ನೋಡುತ್ತಾರೆ, ಹೊಗಳುತ್ತಾರೆ, ಇಷ್ಟಪಡ್ತಾರೆ. ಅದೇ ರೀತಿ ವೈಯಕ್ತಿಕವಾಗಿ ಕೂಡ ಅವರ ವ್ಯಕ್ತಿತ್ವವನ್ನ ಮೆಚ್ಚಿಕೊಳ್ತಾರೆ. ಇದೀಗ, ರಾಕಿಂಗ್ ಸ್ಟಾರ್ ಯಶ್ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕನ್ನಡ ಸ್ಟಾರ್ ನಟರ ಬಗ್ಗೆ ಮಾತನಾಡಿದ್ದಾರೆ. ಅವರಲ್ಲಿ ಏನು ಇಷ್ಟವೆಂದು ಹೇಳಿಕೊಂಡಿದ್ದಾರೆ.
ಯಶ್ ಹೊಸ ಕಾರನ್ನ ಮೊದಲು ಓಡಿಸೋದು ಇವರೇ
ಬರಿ ಸಿನಿಮಾ ನಟರ ಬಗ್ಗೆ ಮಾತ್ರವಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಕರ್ನಾಟಕ ರಾಜಕಾರಣಿಗಳ ಬಗ್ಗೆಯೂ ಕಾಂಮೆಂಟ್ ಮಾಡಿದ್ದಾರೆ. ಹಾಗಿದ್ರೆ, ಯಾವ ನಟನ ಬಗ್ಗೆ ಏನಂದ್ರು? ಮುಂದೆ ಓದಿ.....
ನರೇಂದ್ರ ಮೋದಿ
ಗ್ರೇಟ್ ವ್ಯಕ್ತಿ. ಒಬ್ಬ ಚಾಯ್ ವಾಲಾ ಆಗಿದ್ದವರು ದೇಶದ ಪ್ರಧಾನಿ ಆದರು. ದೇಶಕೋಸ್ಕರ ಇಡಿ ಜೀವನ ಮುಡಿಪಾಗಿಟ್ಟಿದ್ದಾರೆ. ದೇಶದ ಬಗ್ಗೆ ಕನಸು ಹೊತ್ತು ಅಭಿವೃದ್ದಿಪಡಿಸುತ್ತಿದ್ದಾರೆ.
ಸುದೀಪ್
ಇನ್ನು ಕನ್ನಡ ನಟರ ಬಗ್ಗೆ ಮಾತನಾಡಿದ ಯಶ್, ''ಸುದೀಪ್ ಅವರ ಹೈಟ್ ಮತ್ತು ಅವರ ವಾಯ್ಸ್ ಇಷ್ಟ''ವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಚ್.ಡಿ ದೇವೇಗೌಡ
ಕರ್ನಾಟಕದಿಂದ ಪ್ರಧಾನ ಮಂತ್ರಿಯಾಗಿ ಇಡೀ ದೇಶವನ್ನ ಕರ್ನಾಟಕದತ್ತ ನೋಡುವಂತೆ ಮಾಡಿದ ವ್ಯಕ್ತಿ. ಅವರನ್ನ ಭೇಟಿ ಮಾಡಿದಾಗ ನಮಗೆ ಒಂಥರಾ ಮುಜುಗರ ಆಗುತ್ತೆ. ಅಷ್ಟು ತೂಕವಾಗಿ ನಡೆದುಕೊಳ್ಳುತ್ತಾರೆ. ನಾನು ಮದುಗೆ ಕಾರ್ಡ್ ಕೊಡೋಕೆ ಹೋದಾಗಲು, ನಾವು ಅವರಿಗೆ ಸನ್ಮಾನ ಮಾಡಬೇಕೆಂದು ಹೂವು ತಗೊಂಡು ಹೋಗಿದ್ವಿ. ಅದನ್ನ ನನಗೆ ಹಾಕಿ ನನಗೆ ಸನ್ಮಾನ ಮಾಡಿದ್ದರು.
ದರ್ಶನ್
ದರ್ಶನ್ ಅವರಲ್ಲಿ ಏನಿಷ್ಟ ಎಂದು ಕೇಳಿದಾಗ, ''ಅವರ ಪರ್ಸನಾಲಿಟಿ ಇಷ್ಟವೆಂದರು ಯಶ್. ಅವರೆದರು ನಿಂತರೇ ಬೇರೆ ಯಾರೂ ಕಾಣಲ್ಲ. ಈಗ ಕುರುಕ್ಷೇತ್ರದಲ್ಲಿ ಸೂಪರ್ ಆಗಿ ಕಾಣಿಸ್ತಿದ್ದಾರೆ. ಅವರಿಗೆ ಮಾಸ್ ಇಮೇಜ್ ಚೆನ್ನಾಗಿ ಹೋಲುತ್ತೆ. ನಮ್ಮವರು ಎಂಬ ಭಾವನೆ.
ಹೈದರಾಬಾದ್ ಹೋಟೆಲ್ ನಲ್ಲಿ ಕನ್ನಡಕ್ಕಾಗಿ 'ಡಿ-ಬಾಸ್' ಜಗಳ
ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ತುಂಬ ಸ್ಟ್ರಾಂಗ್ ನಾಯಕ. ಅವರ ಪ್ರತಿಯೊಂದು ಭಾಷಣವನ್ನ ಗಮನಿಸಿದಾಗ, ಎಷ್ಟೇ ಗಂಭೀರವಾದ ವಿಷ್ಯವನ್ನ ಕೂಲ್ ಮಾಡಿ, ಕೌಂಟರ್ ಕೊಟ್ಟು ಮುಂದೆ ಹೋಗುವ ಕಲೆ ಇದೆ. ಗ್ರಾಮೀಣ ಸೊಗಡು ಇರುವ ನಾಯಕ.
ಪುನೀತ್ ರಾಜ್ ಕುಮಾರ್
ಅಪ್ಪು ಒಂಥರಾ ಸ್ವೀಟ್ ಹಾರ್ಟ್. ಪುನೀತ್ ಅವರ ಡ್ಯಾನ್ಸ, ಫೈಟ್ಸ್ ಇಷ್ಟ. ಸರಳತೆಯ ವ್ಯಕ್ತಿತ್ವ. ಎಲ್ಲ ಇದ್ರು ಆರಾಮಾಗ್ತಿರ್ತಾರೆ.
ಹೆಚ್.ಡಿ ಕುಮಾರಸ್ವಾಮಿ
ಕುಮಾರಣ್ಣ ಅವರನ್ನ ತುಂಬ ಹತ್ತಿರದಿಂದ ನೋಡಿದ್ದೀನಿ. ಅವರು ತುಂಬ ಸರಳತೆಯ ವ್ಯಕ್ತಿ. ಎಲ್ಲರಿಗೂ ಗೌರವ ಕೊಡುವ ವ್ಯಕ್ತಿ. ಒಬ್ಬ ಸಣ್ಣ ವ್ಯಕ್ತಿ ಬಂದಾಗಲೂ ಎದ್ದು ನಿಂತು ಗೌರವ ಕೊಡುವ ಮನುಷ್ಯ.
ಯಡಿಯೂರಪ್ಪ
ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರರು. ಬಹಳಷ್ಟು ಹೋರಾಟ ಮಾಡಿದ್ದಾರೆ ಅಂತ ಕೇಳಿದ್ದೀವಿ. ತುಂಬ ಶ್ರಮಜೀವಿ ಅಂತಾನೂ ಹೇಳುತ್ತಿರುತ್ತಾರೆ. ನಿದ್ದೆಯಲ್ಲ ಬಿಟ್ಟು ಕೆಲಸ ಮಾಡ್ತಾರೆ ಅಂತ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.