For Quick Alerts
  ALLOW NOTIFICATIONS  
  For Daily Alerts

  ಸುಮಮ್ಮನಿಗೆ ಸಾಮಾನ್ಯವಾದ ಹೋರಾಟ ಆಗಿರಲ್ಲಿಲ್ಲ : ನಟ ಯಶ್

  |
  ಮಂಡ್ಯ ಚುನಾವಣೆ ಯುದ್ಧ ಗೆದ್ದೆವು ಎಂದ ಯಶ್ | Oneindia kannada

  ಮಂಡ್ಯದಲ್ಲಿ ನಡೆದ ಸ್ವಾಭಿಮಾನಿಗಳ ವಿಜಯೋತ್ಸವದಲ್ಲಿ ರಾಕಿಂಗ್ ಸ್ಟಾರ್ ಯಶ್ ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ಅವತ್ತೇ ಹೇಳಿದ್ದೆ ಅಂಬ್ರೀಶ್ ಅಣ್ಣನ ಹುಟ್ಟುಹಬ್ಬಕ್ಕೆ 23ಕ್ಕೆ ಮಂಡ್ಯ ಜನ ಗಿಫ್ಟ್ ಕೊಡ್ತಾರೆ ಅಂತ ಆ ಮಾತು ನಿಜವಾಗಿದೆ". "ಅಂಬರೀಶ್ ಅವರು ಯಾವಾಗಲು ಮಂಡ್ಯದ ಗಂಡು" ಎಂದು ಯಶ್ ಹೇಳಿದ್ದಾರೆ.

  "ಇಷ್ಟು ದೊಡ್ಡ ಗೆಲುವು ಕೊಟ್ಟಿರುವ ಮಂಡ್ಯದ ಜನತೆಗೆ ಯಾವರೀತಿ ಕೃತಜ್ಞತೆ ಸಲ್ಲಿಸಬೇಕು ಎಂದು ಗೊತ್ತಾಗುತ್ತಿಲ್ಲ. ದರ್ಶನ್ ಹೇಳಿದ ಹಾಗೆ ಚರ್ಮ ತೆಗೆದು ಚಪ್ಪಲಿ ಮಾಡಿಕೊಟ್ರು ಸಾಲದು" ಎಂದು ಹೇಳುವ ಮೂಲಕ ದರ್ಶನ್ ಮಾತನ್ನು ಮತ್ತೊಮ್ಮೆ ನೆನಪಿಸಿದ್ರು ಯಶ್.

  'ಸ್ವಾಭಿಮಾನ' ವೇದಿಕೆಯಲ್ಲಿ ಮಂಡ್ಯ ಜನರ ಪಾದಕ್ಕೆ ನಮಸ್ಕರಿಸಿದ ದರ್ಶನ್

  "ಸುಮಮ್ಮನ ಹೋರಾಟ ಸಾಮಾನ್ಯಾ ಆಗಿರಲ್ಲಿಲ್ಲ. ಆದ್ರೆ ಮಂಡ್ಯದ ಜನತೆಗೆ ಅಂಬಿ ಅಣ್ಣನ ಬಗ್ಗೆ ಗೊತ್ತಿತ್ತು. ಹಾಗಾಗಿ ಗೆಲ್ಲಿಸಿಕೊಟ್ಟಿದ್ದಾರೆ" ಎಂದು ವಿಜಯೋತ್ಸವದಲ್ಲಿ ಯಶ್ ಹೇಳಿದ್ದಾರೆ. ಮಾತಿನ ಮಧ್ಯೆ ಸ್ಟೀಮ್ ಬೋಟಿನ ಕಥೆಯನ್ನು ಮಂಡ್ಯ ಜನರ ಮುಂದೆ ಹೇಳಿದ್ರು.

  "ನಮ್ಮ ಗೆಲುವಿಗೆ ನಮಗಿಂತ್ತ ಜಾಸ್ತಿ ನೀವು ಸಹಾಯ ಮಾಡಿದ್ರಿ.

  ಈಗಾಗಲೆ ಜನ ಪಾಠ ಕಲಿಸಿದ್ದಾರೆ. ಮತ್ತೆ ಮತ್ತೆ ಆ ತಪ್ಪುಗಳನ್ನು ಮಾಡಬೇಡಿ. ನಾವ್ಯಾರು ವಿರೋಧಿಗಳಲ್ಲ. ದ್ವೇಷ ರಾಜಕಾರಣ ಬೇಡ" ಎಂದು ಕಿವಿ ಮಾತು ಹೇಳುತ್ತಲೆ ವಿರೋಧಿಗಳಿಗೆ ಟಾಂಗ್ ಕೊಟ್ಟರು ಯಶ್.

  English summary
  Rocking star yash spoke about Sumalatha and Mandya election in Swabhimanigala Vijayotsava at Mandya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X