ಹೈದರಾಬಾದ್‌ಗೆ ಬಂದಿಳಿದ ರಾಕಿ ಭಾಯ್: ಏರ್‌ಪೋರ್ಟ್ ಫೋಟೋ ವೈರಲ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಕೊನೆಯ ಹಂತದ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ಇಂದಿನಿಂದ ಹೈದರಾಬಾದ್‌ನಲ್ಲಿ ಅಂತಿಮ ಹಂತದ ಶೂಟಿಂಗ್ ಆರಂಭವಾಗಿದ್ದು, ನಟ ಯಶ್ ಸಹ ಪಾಲ್ಗೊಂಡಿದ್ದಾರೆ.
ಕೆಜಿಎಫ್ ಶೂಟಿಂಗ್ ಹಿನ್ನಲೆ ಇಂದು ಬೆಳಗ್ಗೆ ರಾಕಿಂಗ್ ಸ್ಟಾರ್ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಯಶ್ ಏರ್‌ಪೋರ್ಟ್‌ಗೆ ಬಂದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಾಕ್‌ಡೌನ್‌ಗೂ ಮುಂಚೆ ಅರ್ಧದಷ್ಟು ಚಿತ್ರೀಕರಣ ಮಾಡಿದ್ದ ಕೆಜಿಎಫ್ ತಂಡ ನಂತರ ಶೂಟಿಂಗ್‌ಗೆ ಬ್ರೇಕ್ ಹಾಕಿತ್ತು. ಲಾಕ್‌ಡೌನ್‌ಗೆ ಸಡಿಲಿಕೆ ನೀಡಿದ ನಂತರ ಮತ್ತೆ ಚಿತ್ರೀಕರಣ ಆರಂಭಿಸಿದ ಕೆಜಿಎಫ್ ಬೆಂಗಳೂರು, ಮಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಿದೆ.

ಈಗ ಕೊನೆಯ ಹಂತದ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ಹಾರಿದೆ. ಇನ್ನು ಅಧೀರ ಪಾತ್ರದಲ್ಲಿ ನಟಿಸುತ್ತಿರುವ ಸಂಜಯ್ ದತ್ ಇದೇ ತಿಂಗಳು ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಕೆಜಿಎಫ್‌ಗಾಗಿ ಈಗಾಗಲೇ ತಯಾರಿ ನಡೆಸಿರುವ ಸಂಜಯ್ ದತ್ ನವೆಂಬರ್‌ನಲ್ಲಿ ಶೂಟಿಂಗ್ ಆರಂಭಿಸಲಿದ್ದೇನೆ ಎಂದು ಮಾಹಿತಿ ನೀಡಿದ್ದರು.
ಇನ್ನುಳಿದಂತೆ ಕೆಜಿಎಫ್ 2 ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ರವೀನಾ ಟಂಡನ್, ಸಂಜಯ್ ದತ್, ಪ್ರಕಾಶ್ ರೈ, ಆರ್ ಜೆ ರೋಹಿತ್ ಸೇರಿದಂತೆ ಕೆಲವು ಹೊಸ ನಟರು ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











