Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಜಿಎಫ್ 2 ಟೀಸರ್ ಬಿಡುಗಡೆ: ರಾಕಿ ಭಾಯ್ ಗತ್ತಿಗೆ ಯಾರಿಲ್ಲ ಸಾಟಿ
ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಟೀಸರ್ ಅವಧಿಗೂ ಮುನ್ನವೇ ಬಿಡುಗಡೆಗೆ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
Recommended Video
ಕೆಜಿಎಫ್ 2 ಸಿನಿಮಾದ ಟೀಸರ್ ಅನ್ನು ನಾಳೆ (ಜನವರಿ 08) ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಕೆಜಿಎಫ್ ಟೀಸರ್ ಜನವರಿ 08 ರಂದು ಬೆಳಿಗ್ಗೆ 10:18 ಕ್ಕೆ ಹೊಂಬಾಳೆ ಸಿನಿಮಾದ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಲಿತ್ತು. ಆದರೆ ವಿಡಿಯೋ ಲೀಕ್ ಆದ ಕಾರಣ ಬೇಗನೆ ಟೀಸರ್ ಬಿಡುಗಡೆ ಮಾಡಲಾಗಿದೆ.
ನಿಗದಿಗೊಳಿಸಿದ್ದ ಅವಧಿಗೂ ಮುನ್ನ ಅಂದರೆ ಗುರುವಾರ ರಾತ್ರಿ 9:29 ಕ್ಕೆ ಟೀಸರ್ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದರು.
ರಾಕಿ ಭಾಯ್ ಸ್ಟೈಲ್ ಅದ್ಭುತ
ಟೀಸರ್ನಲ್ಲಿ ನರಾಚಿಯ ಏರಿಯಲ್ ಲುಕ್ಗಳು ಭೀತಿ ಹುಟ್ಟಿಸುವಂತಿದೆ. ಆಧುನಿಕ ಸ್ಟೆನ್ ಗನ್ಗಳನ್ನು ಬಳಸಿ ವೈರಿಗಳ ಸೆದೆ ಬಡಿಯುತ್ತಿರುವ ರಾಕಿ ಭಾಯ್, ಬಿಸಿಯಾದ ಗನ್ ನಿಂದ ಸಿಗರೇಟು ಹೊತ್ತಿಸುವ ಸ್ಟೈಲ್ ಅಭಿಮಾನಿಗಳಿಗೆ ಹುಚ್ಚು ಹಿಡಿಸುವುದು ಗ್ಯಾರೆಂಟಿ.
ಅದ್ಭುತವಾದ ಹಿನ್ನೆಲೆ ಸಂಗೀತ
ರಾಕಿ ಭಾಯ್ಗಾಗಿ ಆರತಿ ತಟ್ಟೆ ಹಿಡಿದು ಕಾಯುತ್ತಿರುವ ಮೀರಾ, ರಾಕಿ ಭಾಯ್ ಅನ್ನು ಮುಗಿಸಲು ಬರುವ ದೊಡ್ಡ ಜನಸಾಗರ, ನರಾಚಿಯೊಳಗೆ ನುಗ್ಗುವ ಸರ್ಕಾರದ ಸೇನೆ ಎಲ್ಲವೂ ಟೀಸರ್ನಲ್ಲಿದೆ. ಟೀಸರ್ನ ವೇಗಕ್ಕೆ ತಕ್ಕಂತೆ ದಂಗುಬಡಿಸುವ ಹಿನ್ನೆಲೆ ಸಂಗೀತವೂ ಇದೆ.
ಸ್ಲೋಗನ್ ಬದಲಾಗಿದೆ
ಕೆಜಿಎಫ್ ನಲ್ಲಿ 'ಪವರ್ಫುಲ್ ಪೀಪಲ್ಸ್ ಕಮ್ ಫ್ರಂ ಪವರ್ಫುಲ್ ಪ್ಲೇಸಸ್' ಎಂದಿದ್ದ ಸ್ಲೋಗನ್ ಕೆಜಿಎಫ್ 2 ಬದಲಾಗಿದೆ. 'ಪವರ್ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್ಫುಲ್' ಎಂದು ಬದಲು ಮಾಡಿರುವುದು ಈ ಟೀಸರ್ನಲ್ಲಿ ಗೊತ್ತಾಗುತ್ತಿದೆ.
ರವೀನಾ ಟಂಡನ್ ಲುಕ್ ಸೂಪರ್
ಪಾರ್ಲಿಮೆಂಟ್ನಲ್ಲಿ ಗತ್ತಿನಿಂದ ಹೆಜ್ಜೆ ಹಾಕುತ್ತಿರುವ ನಟಿ ರವೀನಾ ಟಂಡನ್, ಉದ್ದ ಜಡೆ ಬಿಟ್ಟು ಮಾರುದ್ದದ ಕತ್ತಿ ಹಿಡಿದು ನಿಂತಿರುವ ಸಂಜಯ್ ದತ್ ಲುಕ್ಗಳು ಹುಬ್ಬೇರಿಸುವಂತಿವೆ. ಟೀಸರ್ನ ಕೊನೆಯಲ್ಲಿ ಯಶ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ಕೋರಲಾಗಿದೆ.