For Quick Alerts
  ALLOW NOTIFICATIONS  
  For Daily Alerts

  Yash vs Vijay: ಹೆಚ್ಚಿನ ಬೇಡಿಕೆ ಇರೋದು ರಾಕಿಂಗ್ ಸ್ಟಾರ್‌ ಯಶ್‌ಗೆ, ಸಮೀಕ್ಷೆ ಇಲ್ಲಿದೆ!

  |

  ಏಪ್ರಿಲ್‌ನಲ್ಲಿ 'ಕೆಜಿಎಫ್ 2' ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದ ಹವಾ ಯಾವ ಮಟ್ಟಿಗೆ ಇದೆ ಎಂದರೆ ಇದರ ಜೊತೆಗೆ ಬರಲು ಮತ್ಯಾವ ಚಿತ್ರವೂ ತಯಾರಿಲ್ಲ. 'ಕೆಜಿಎಫ್ 2' ಜೊತೆಗೆ ಬಾಕ್ಸಾಫೀಸ್ ಕಾಳಗ ಮಾಡಲು ಯಾರು ಧೈರ್ಯ ಮಾಡಲಿಲ್ಲ. ಹಾಗಾಗಿ ಕೆಲವು ಸಣ್ಣ, ಪುಟ್ಟ ಸಿನಿಮಾಗಳು ಈ ಚಿತ್ರದ ಆಸು, ಪಾಸಿನಲ್ಲಿ ರಿಲೀಸ್ ಆಗುತ್ತವೆ ಎನ್ನಲಾಗಿತ್ತು.

  'ಜೇಮ್ಸ್' ಚಿತ್ರದ ಬಳಿಕ ಕನ್ನಡದ ಮತ್ತೊಂದು ದೊಡ್ಡ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 2' ಸದ್ದು ಮಾಡೋಕೆ ಸಜ್ಜಾಗಿದೆ. ಕನ್ನಡದ ಈ ಚಿತ್ರ ಎಲ್ಲಿಲ್ಲದ ಕುತೂಹಲ, ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಹಾಗಾಗಿ ಈ ಚಿತ್ರಕ್ಕೆ ಇಡೀ ವಿಶ್ವವೇ ಕಾಯುತ್ತಿದೆ ಅಂದರೆ ತಪ್ಪಾಗಲಾರದು. ಆದರೆ ಕೆಜಿಎಫ್ 2 ಚಿತ್ರಕ್ಕೆ ತಮಿಳು ಚಿತ್ರವೊಂದು ಸವಾಲು ಹಾಕಿದೆ.

  KGF 2 vs Beast : 'ಕೆಜಿಎಫ್ 2' Vs 'ಬೀಸ್ಟ್'; ಬಾಕ್ಸಾಫೀಸ್ ಯುದ್ಧ ಗೆಲ್ಲೋರು ಯಾರು?KGF 2 vs Beast : 'ಕೆಜಿಎಫ್ 2' Vs 'ಬೀಸ್ಟ್'; ಬಾಕ್ಸಾಫೀಸ್ ಯುದ್ಧ ಗೆಲ್ಲೋರು ಯಾರು?

  Recommended Video

  KGF 2 vs Beast | ಯಾವ ಚಿತ್ರದ ಮೇಲೆ ಜನರಿಗೆ ಹೆಚ್ಚು ಆಸಕ್ತಿ..? | Yash | Sanjay Dutt | Raveena Tandon

  'ಕೆಜಿಎಫ್ 2' ಚಿತ್ರದ ಎದುರು ನಿಲ್ಲಲು ತಮಿಳಿನ ದೊಡ್ಡ ಚಿತ್ರವೇ ಬರುತ್ತಿದೆ. ತಮಿಳು ಸ್ಟಾರ್ ನಟ ವಿಜಯ್ ಅವರ 'ಬೀಸ್ಟ್' ಸಿನಿಮಾ 'ಕೆಜಿಎಫ್ 2' ಜೊತೆಗೆ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ. ಇತ್ತೀಚೆಗೆ ಬೀಸ್ಟ್ ಸಿನಿಮಾ ನಿರ್ಮಾಣ ಸಂಸ್ಥೆಯೆ ಈ ವಿಚಾರವನ್ನು ಅಧಿಕೃತವಾಗಿ ಹೇಳಿಕೊಂಡಿದೆ. ಆದರೆ ಈ ಎರಡು ಚಿತ್ರಗಳ ಪೈಕಿ ಹೆಚ್ಚು ಮಂದಿ ನೋಡಲಿಚ್ಛಿಸಿರುವ ಸಿನಿಮಾ ಯಾವುದು? ಇಲ್ಲಿದೆ ಉತ್ತರ...

  'ಬೀಸ್ಟ್'ಗಿಂತಲೂ 'ಕೆಜಿಎಫ್ 2' ಬಗ್ಗೆ ಹೆಚ್ಚಿನ ಆಸಕ್ತಿ!

  'ಬೀಸ್ಟ್'ಗಿಂತಲೂ 'ಕೆಜಿಎಫ್ 2' ಬಗ್ಗೆ ಹೆಚ್ಚಿನ ಆಸಕ್ತಿ!

  ಕೆಜಿಎಫ್ 2 ಮತ್ತು ಬೀಸ್ಟ್ ಚಿತ್ರಗಳು ತಮ್ಮದೇ ದಾಟಿಯಲ್ಲಿ ಹೆಚ್ಚು ಪ್ರಭಾವ ಇರುವ ಸಿನಿಮಾಗಳು. ಹಾಗಾಗಿ ಈ ಎರಡು ಚಿತ್ರಗಳ ಮೇಲೆಯೂ ಸಾಕಷ್ಟು ನಿರೀಕ್ಷೆ ಇದೆ. ಹಾಗಾಗಿ ಈ ಚಿತ್ರಗಳಲ್ಲಿ ಯಾವ ಸಿನಿಮಾ ಹೆಚ್ಚು ಸದ್ದು ಮಾಡಲಿದೆ ಎನ್ನುವ ಚರ್ಚೆ ಈಗಾಗಲೆ ಶುರುವಾಗಿದೆ. ಅದಕ್ಕೆ ಪೂರಕ ಎಂಬಂತೆ ಈಗ ಯಾವ ಸಿನಿಮಾ ನೋಡಲು ಜನರು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎನ್ನುವ ಸಮೀಕ್ಷೆ ಹೊರ ಬಿದ್ದಿದೆ. ಇದರಲ್ಲಿ 'ಬೀಸ್ಟ್' ಚಿತ್ರಕ್ಕಿಂತಲೂ 'ಕೆಜಿಎಫ್ 2' ಚಿತ್ರವನ್ನು ನೋಡಲು ಹೆಚ್ಚು ಜನ ಆಸಕ್ತರಾಗಿದ್ದಾರೆ.

  KGF 2: 'ತೂಫಾನ್' ಹಾಡಿನ ಸಂಗೀತದ ಬಗ್ಗೆ ಅಪಸ್ವರ: ಎಡವಿದ್ರಾ 'ರವಿಬಸ್ರೂರು'?KGF 2: 'ತೂಫಾನ್' ಹಾಡಿನ ಸಂಗೀತದ ಬಗ್ಗೆ ಅಪಸ್ವರ: ಎಡವಿದ್ರಾ 'ರವಿಬಸ್ರೂರು'?

  ಕೆಜಿಎಫ್ 2- 599 ಸಾವಿರ, ಬೀಸ್ಟ್- 114.7 ಸಾವಿರ ರೇಟಿಂಗ್!

  ಕೆಜಿಎಫ್ 2- 599 ಸಾವಿರ, ಬೀಸ್ಟ್- 114.7 ಸಾವಿರ ರೇಟಿಂಗ್!

  ಕೆಜಿಎಫ್ ಮತ್ತು ಬೀಸ್ಟ್ ಸಿನಿಮಾಗಳಲ್ಲಿ ಜನ ಯಾವ ಚಿತ್ರದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎನ್ನುವುದು ತೆರೆದ ಉತ್ತರ ಆಗಿದೆ. ಬುಕ್ ಮೈ ಶೋನಲ್ಲಿ ಇರುವ ಸಮೀಕ್ಷೆಯ ಅಂಕಿ ಅಂಶದ ಪ್ರಕಾರ ಕೆಜಿಎಫ್ 2 ಚಿತ್ರವನ್ನು ನೋಡಬೇಕು ಎನ್ನುವ ಆಸಕ್ತಿ ಇರುವ ಜನ 599 ಸಾವಿರ ಮಂದಿ ಇದ್ದಾರೆ. ಹಾಗೆ ತಮಿಳಿನ 'ಬೀಸ್ಟ್' ಚಿತ್ರವನ್ನು ನೋಡಬೇಕು ಎಂದು ಆಸಕ್ತಿಯುಳ್ಳವರು 114.7 ಸಾವಿರ ಜನ ಇದ್ದಾರೆ.

  ಏಪ್ರಿಲ್ 14 'ಕೆಜಿಎಫ್ 2', ಏಪ್ರಿಲ್ 13 'ಬೀಸ್ಟ್'!

  ಏಪ್ರಿಲ್ 14 'ಕೆಜಿಎಫ್ 2', ಏಪ್ರಿಲ್ 13 'ಬೀಸ್ಟ್'!

  ಕನ್ನಡದಲ್ಲಿ ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಸದ್ಯ ರಿಲೀಸ್‌ಗೆ ರೆಡಿಯಾಗಿದೆ. ಅತ್ತ ತಮಿಳು ಚಿತ್ರರಂಗದಲ್ಲಿ ತಮಿಳಿನಲ್ಲಿ ನಿರೀಕ್ಷಿತ ಸಿನಿಮಾ 'ಬೀಸ್ಟ್' ಕೂಡ ತೆರೆಗೆ ಬರುತ್ತಿದೆ. ಆದರೆ ಈ ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿದ್ದು, ಏಪ್ರಿಲ್‌ನಲ್ಲಿ ರಿಲೀಸ್ ಆಗಲಿವೆ. ತಿಂಗಳು ಒಂದೇ ಹಾಗಂತ ಹೆಚ್ಚು ದಿನಗಳ ಅಂತರ ಇಲ್ಲ. 'ಕೆಜಿಎಫ್ 2' ಚಿತ್ರಕ್ಕೂ ಒಂದು ದಿನ ಮೊದಲು, ಏಪ್ರಿಲ್ 13ಕ್ಕೆ 'ಬೀಸ್ಟ್' ರಿಲೀಸ್ ಆಗುತ್ತಿದೆ. ಹಾಗಾಗಿ ಈ ಎರಡು ಚಿತ್ರಗಳ ರಿಲೀಸ್ ನಡುವೆ ಅಷ್ಟೇನು ಅಂತರ ಇಲ್ಲ. ಆದರೂ ಕೂಡ ಹೀಗೆ ಎರಡು ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದರೆ ಕಲೆಕ್ಷನ್ ಮೇಲೆ ಹೊಡೆತ ಬೀಳುವುದು ಖಚಿತ.

  KGF 2 Trailer Launch Event : ಕೆಜಿಎಫ್ 2 ಟ್ರೈಲರ್‌ ಲಾಂಚ್ ಸಂಪೂರ್ಣ ಮಾಹಿತಿ; ಸಮಯ, ಸ್ಥಳ, ಅತಿಥಿಗಳ ವಿವರ ಇಲ್ಲಿದೆ!KGF 2 Trailer Launch Event : ಕೆಜಿಎಫ್ 2 ಟ್ರೈಲರ್‌ ಲಾಂಚ್ ಸಂಪೂರ್ಣ ಮಾಹಿತಿ; ಸಮಯ, ಸ್ಥಳ, ಅತಿಥಿಗಳ ವಿವರ ಇಲ್ಲಿದೆ!

  'ಕೆಜಿಎಫ್ 2' vs 'ಬೀಸ್ಟ್', ಬಾಕ್ಸಾಫೀಸ್ ಕಾಳಗ!

  'ಕೆಜಿಎಫ್ 2' vs 'ಬೀಸ್ಟ್', ಬಾಕ್ಸಾಫೀಸ್ ಕಾಳಗ!

  'ಕೆಜಿಎಫ್ 2' ಮತ್ತು 'ಬೀಸ್ಟ್' ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗುವುದು ಎಂದರೆ ಸುಮ್ಮನೇ ಅಲ್ಲ. ಈ ಎರಡೂ ಚಿತ್ರಗಳಿಗೆ ತನ್ನದೆ ಆದ ತೂಕ ಇದೆ. ವಿಜಯ್ ಅಭಿನಯದ 'ಬೀಸ್ಟ್' ಕೂಡ ಸಾಕಷ್ಟು ನಿರೀಕ್ಷೆ ಹೊಂದಿರುವ ಸಿನಿಮಾ. ಈ ಚಿತ್ರಕ್ಕೆ ನೆಲ್ಸನ್ ನಿರ್ದೇಶನವಿದೆ. ಹಲವು ದಿನಗಳ ಬಳಿಕ ವಿಜಯ್ ಸಿನಿಮಾ ರಿಲೀಸ್ ಆಗುತ್ತಿರುವ ಕಾರಣ ಅಭಿಮಾನಿಗಳು ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇನ್ನು 'ಕೆಜಿಎಫ್ 2' ಬಗ್ಗೆ ಮಾತಾಡೋದೆ ಬೇಡ ಅಷ್ಟರ ಮಟ್ಟಿಗೆ ಈ ಚಿತ್ರದ ಮೇಲೆ ನಿರೀಕ್ಷೆ ಮನೆ ಮಾಡಿದೆ. ಹಾಗಾಗಿ 'ಬೀಸ್ಟ್', 'ಕೆಜಿಎಫ್ 2' ಚಿತ್ರಕ್ಕೂ ಒಂದು ದಿನ ಮುಂಚೆ ರಿಲೀಸ್ ಆದರೂ ಬಾಕ್ಸಾಫೀಸ್‌ನಲ್ಲಿ ಈ ಎರಡೂ ಚಿತ್ರಗಳೂ ಹೊಡೆತ ತಿನ್ನ ಬೇಕಾಗಬಹುದು.

  English summary
  Yash Starerr KGF 2 Film Beat Thalapathy Vijay Starrer Tamil Movie Beast In Book My Show Rating,
  Saturday, March 26, 2022, 17:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X