ರಾಕಿಭಾಯ್ ವೈಲೆನ್ಸ್ ನೋಡಿ ಜಪಾನಿಯರು ಫಿದಾ: ಜಪಾನ್‌ ಬಾಕ್ಸಾಫೀಸ್‌ನಲ್ಲಿ 'ಮುತ್ತು', 'RRR' ದಾಖಲೆಗಳಿಗೆ ಕುತ್ತು!

ರಾಕಿಂಗ್ ಸ್ಟಾರ್ ಯಶ್ ನಟನೆಯ 'KGF' ಸರಣಿ ಸಿನಿಮಾಗಳು ಜಪಾನ್‌ ದೇಶದಲ್ಲಿ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಾಡುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ 2ನೇ ದಿನ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. 'KGF' ಸರಣಿ ಅನಾಯಾಸವಾಗಿ ಜಪಾನ್ ಬಾಕ್ಸಾಫೀಸ್‌ನಲ್ಲಿ 'ಮುತ್ತು' ಸಿನಿಮಾ ದಾಖಲೆಗಳನ್ನು ಮುರಿಯುವ ಸುಳಿವು ಸಿಗುತ್ತಿದೆ.

ಈ ವಾರ ಜಪಾನ್‌ನಲ್ಲಿ ಕನ್ನಡದ 'KGF' ಚಾಪ್ಟರ್‌ -1 ಹಾಗೂ ಚಾಪ್ಟರ್-2 ಸಿನಿಮಾಗಳು ತೆರೆಗಪ್ಪಳಿಸಿವೆ. 'RRR' ಬಳಿಕ ಭಾರತದ ಸಿನಿಮಾಗಳು ಸಾಲು ಸಾಲಾಗಿ ಜಪಾನ್‌ ದೇಶಕ್ಕೆ ಲಗ್ಗೆ ಇಟ್ಟಿವೆ. ಈ ವಾರ ರಾಮ್‌ಚರಣ್ ನಟನೆಯ 'ರಂಗಸ್ಥಳಂ' ಸಿನಿಮಾ ಕೂಡ ಅಲ್ಲಿ ರಿಲೀಸ್ ಆಗಿದೆ. ಮೊದಲ ದಿನದ ಅಡ್ವಾನ್ಸ್ ಬುಕ್ಕಿಂಗ್ ಲೆಕ್ಕಾಚಾರದಲ್ಲಿ ರಾಕಿ ಭಾಯ್‌ಗಿಂತ ಚಿಟ್ಟಿಬಾಬು ಆರ್ಭಟ ಜೋರಾಗಿತ್ತು. ಆದರೆ 2ನೇ ದಿನದ ಬುಕ್ಕಿಂಗ್‌ನಲ್ಲಿ ಮ್ಯಾಜಿಕ್ ಆಗಿದೆ. 'KGF' ಸರಣಿ ಸಿನಿಮಾಗಳ ಬುಕ್ಕಿಂಗ್ ಗಣನೀಯವಾಗಿ ಹೆಚ್ಚಾಗಿದೆ.

Yash-KGF-In- Japan-collection

ರಾಕಿ ಭಾಯ್ ಆರ್ಭಟ ನೋಡಿದ ಜಪಾನ್ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಯಶ್ ನಟನೆ ಜೊತೆಗೆ ಕಂಪ್ಲೀಟ್ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದು ಸಹಜವಾಗಿಯೇ ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರುವಂತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಗಳಿಕೆ ಹೆಚ್ಚಾಗುವ ಸುಳಿವು ಸಿಗುತ್ತಿದೆ.

ಚಿಟ್ಟಿಬಾಬುಗೆ ರಾಕಿ ಟಫ್ ಫೈಟ್

ಮೊದಲ ದಿನದ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ 'ರಂಗಸ್ಥಳಂ'ಗೆ ರೆಸ್ಪಾನ್ಸ್ ಚೆನ್ನಾಗಿತ್ತು. ಈಗಾಗಲೇ ರಾಮ್‌ಚರಣ್ ನಟನೆಯ 'RRR' ಸಿನಿಮಾ ಜಪಾನ್ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿದೆ. ಹಾಗಾಗಿ ಮೆಗಾ ಪವರ್ ಸ್ಟಾರ್ ಅಲ್ಲಿನ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಅದೇ ಕಾರಣಕ್ಕೆ 'ರಂಗಸ್ಥಳಂ' ಬುಕ್ಕಿಂಗ್ ಚೆನ್ನಾಗಿತ್ತು. ಆದರೆ 2ನೇ ದಿನಕ್ಕೆ ಕಥೆ ಬದಲಾಗಿದೆ. ರಾಕಿಭಾಯ್ ಆರ್ಭಟ ಹೆಚ್ಚಾಗಿದೆ. ಮೌತ್‌ ಟಾಕ್‌ನಿಂದ ಪ್ರೇಕ್ಷಕರು ಪ್ರಶಾಂತ್‌ ನೀಲ್ ಚಿನ್ನದ ಕಥೆ ನೋಡಲು ಮುಗಿಬೀಳುತ್ತಿದ್ದಾರೆ. ಇದರಿಂದ ಸಹಜವಾಗಿಯೇ 2 ಸಿನಿಮಾಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

Yash-KGF-In- Japan-collection

ಜಪಾನಿ ಪ್ರೇಕ್ಷಕರ ರಿವ್ಯೂ ವೈರಲ್

ಟ್ವಿಟ್ಟರ್‌ನಲ್ಲಿ ಕೆಲ ಜಪಾನ್ ಪ್ರೇಕ್ಷಕರು 'KGF' ಸಿನಿಮಾ ನೋಡಿ ತಮ್ಮ ರಿವ್ಯೂ ನೀಡುತ್ತಿದ್ದಾರೆ. ನಿಧಾನವಾಗಿ ಇಂತಹ ರಿವ್ಯೂಗಳು ಜಪಾನ್ ದೇಶದಲ್ಲಿ ಸದ್ದು ಮಾಡಲು ಶುರು ಮಾಡಿದೆ. ಈ ಪೋಸ್ಟ್‌ಗಳನ್ನು ಇಲ್ಲಿರುವ ಯಶ್ ಅಭಿಮಾನಿಗಳು ಕೂಡ ವೈರಲ್ ಮಾಡುತ್ತಿದ್ದಾರೆ. ಟ್ವಿಟ್ಟರ್ ಮಾತ್ರವಲ್ಲ ಜಪಾನಿನ ಕೆಲ ಸೋಶಿಯಲ್ ಮೀಡಿಯಾ ಫ್ಲಾಟ್‌ಪಾರ್ಮ್‌ಗಳಲ್ಲಿ 'KGF' ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. ಹಾಗಾಗಿ ರಾಕಿಭಾಯ್ ನಿಧಾನವಾಗಿ ಅಲ್ಲಿ ಬೇರೂರುವ ಸಾಧ್ಯತೆ ದಟ್ಟವಾಗಿದೆ.

ನಿಧಾನವಾಗಿ ಗೆದ್ದಿದ್ದ ರಾಮ್‌-ಭೀಮ್

ಕಳೆದ ವರ್ಷ ನವೆಂಬರ್ 21ರಂದು ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಕೂಡ ಸಾಧಾರಣ ಓಪನಿಂಗ್ ಪಡೆದುಕೊಂಡಿತ್ತು. ಆದರೆ ರೆಸ್ಪಾನ್ಸ್ ಚೆನ್ನಾಗಿತ್ತು. ಹಾಗಾಗಿ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆದಿತ್ತು. ನೋಡ ನೋಡುತ್ತಲೇ ರಜನಿಕಾಂತ್ ನಟನೆಯ 'ಮುತ್ತು' ಸಿನಿಮಾ ದಾಖಲೆ ಮುರಿದ ಸಿನಿಮಾ ಸಕ್ಸಸ್ ಕಂಡಿತ್ತು. ಜಪಾನ್ ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. 'ಮುತ್ತು' ಚಿತ್ರಕ್ಕಿಂತ ಹಲವು ಪಟ್ಟು ಹೆಚ್ಚು ಗಳಿಕೆ ಕಂಡಿತ್ತು.

ದಾಖಲೆ ಬರೆದಿದ್ದ 'KGF' ಸರಣಿ

ಕನ್ನಡ ಸಿನಿಮಾಗಳು 50 ಕೋಟಿ ಕಲೆಕ್ಷನ್ ಮಾಡುವುದೇ ಕಷ್ಟ ಎನ್ನುವ ಸಮಯದಲ್ಲಿ 'KGF' ಚಾಪ್ಟರ್- 1 ಬರೋಬ್ಬರಿ 250 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಪ್ರಶಾಂತ್ ನೀಲ್ ಟೇಕಿಂಗ್, ಯಶ್ ಆಕ್ಟಿಂಗ್, ರವಿ ಬಸ್ರೂರು ಮ್ಯೂಸಿಕ್‌ಗೆ ಭಾರತೀಯ ಚಿತ್ರರಂಗ ಶೇಕ್ ಆಗಿತ್ತು. ಇನ್ನು ಕಳೆದ ವರ್ಷ ಬಂದ 'KGF' ಚಾಪ್ಟರ್- 2 ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಬರೋಬ್ಬರಿ 1200 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಪರಭಾಷಿಕರು ಈ ಚಿತ್ರವನ್ನು ತಮ್ಮದಾಗಿಸಿಕೊಂಡಿದ್ದರು.

More from Filmibeat

English summary
Yash Starrer KGF 1 and 2 marks a good start at the Japan box office with massive advance booking. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X