For Quick Alerts
  ALLOW NOTIFICATIONS  
  For Daily Alerts

  ಥಿಯೇಟರ್‌ನಲ್ಲಿ ಬಿರುಗಾಳಿ, ಯೂಟ್ಯೂಬ್‌ನಲ್ಲಿ ತೂಫಾನ್: ನಿಂತಿಲ್ಲ 'ಕೆಜಿಎಫ್ 2' ಹವಾ

  |

  ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆಜಿಎಫ್‌ ಚಾಪ್ಟರ್ 2' ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಂಡು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ಆದರೂ 'ಕೆಜಿಎಫ್ 2' ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಈಗಲೂ ಸಹ ಹಲವು ಕಡೆ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

  'ಕೆಜಿಎಫ್‌ 2' ಚಿತ್ರ ಈಗ ಒಟಿಟಿಗೆ ಪ್ಲಾಟ್ ಫಾರ್ಮ್‌ಗೆ ಲಗ್ಗೆ ಇಟ್ಟಿದೆ. ಸದ್ಯಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ 199 ರೂಪಾಯಿ ಪಾವತಿಸಿ ಸಿನಿಮಾ ನೋಡಬಹುದಾಗಿದೆ. ಆದರೆ, ಇದು ಸ್ವಲ್ಪ ದಿನಗಳ ಕಾಲ ಇರಲಿದ್ದು, ನಂತರ ಎಲ್ಲಾ ಚಂದಾದಾರರಿಗೂ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ. ಸದ್ಯ ಸಿನಿಮಾ ಈವರೆಗೂ ಸುಮಾರು 1200 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. 'ಕೆಜಿಎಫ್‌ 2' ಆ ಮಟ್ಟಿಗೆ ಸಿನಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಟ ಯಶ್‌ ಕೂಡ ಈ ಸಿನಿಮಾದಿಂದ ವಿಶ್ವದಾದ್ಯಂತ ಫೇಮಸ್ ಆಗಿದ್ದಾರೆ.

  'ಸಲಾರ್' ಲುಕ್ ಗೆ ಅಭಿಮಾನಿಗಳು ಫಿದಾ, 'ಕೆಜಿಎಫ್' ಜೊತೆ ಹೋಲಿಕೆ'ಸಲಾರ್' ಲುಕ್ ಗೆ ಅಭಿಮಾನಿಗಳು ಫಿದಾ, 'ಕೆಜಿಎಫ್' ಜೊತೆ ಹೋಲಿಕೆ

  ಸಿನಿಮಾದಲ್ಲಿ ಕಥೆ ಎಷ್ಟು ಮುಖ್ಯವಾಗುತ್ತೋ ಹಾಗೇ ಹಾಡುಗಳು ಕೂಡ ಅಷ್ಟೇ ಮುಖ್ಯ ಪಾತ್ರ ವಹಿಸುತ್ತವೆ. ಅದರಂತೆ 'ಕೆಜಿಎಫ್‌ 2' ಸಿನಿಮಾದಲ್ಲೂ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಮೋಡಿ ಜೋರಾಗಿಯೇ ಇದೆ. ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿದೆ. ಸಿನಿಮಾ ರಿಲೀಸ್‌ಗೂ ಮುನ್ನ ಚಿತ್ರತಂಡ ಲಿರಿಕಲ್ ಹಾಡುಗಳನ್ನ ಬಿಡುವ ಮೂಲಕ ಜನರನ್ನು ರಂಜಿಸಿತ್ತು. ಅದರಲ್ಲೂ 'ತೂಫಾನ್' ಸಾಂಗ್ ಅಂತು ಚಿಕ್ಕ ಮಕ್ಕಳಿಂದ ದೊಡ್ಡವರಿಗೂ ಅಚ್ಚುಮೆಚ್ಚಾಗಿತ್ತು. ಆ ಮಟ್ಟಿಗಿನ ಕ್ರೇಜ್ ಈ ಹಾಡಿಗೆ ಸಿಕ್ಕಿತ್ತು. ಸದ್ಯ ಈಗ ಇದೇ ಹಾಡಿನ ವಿಡಿಯೋ ಸಾಂಗ್ ಲಹರಿ ಮ್ಯೂಸಿಕ್ ಯ್ಯೂಟೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.

  ಇಂದು (ಮೇ 18) 'ಕೆಜಿಎಫ್‌ 2' ಸಿನಿಮಾದ ತೂಫಾನ್‌ ವಿಡಿಯೋ ವರ್ಷನ್ ರಿಲೀಸ್ ಆಗಿದ್ದು, ಯೂಟ್ಯೂಬ್‌ನಲ್ಲಿ ಭರ್ಜರಿ ವೀಕ್ಷಣೆ ಪಡೆದುಕೊಳ್ಳುತ್ತಿದೆ. 'ಕೆಜಿಎಫ್‌ 2' ಸಿನಿಮಾದಲ್ಲಿ ತೂಫಾನ್ ಸಾಂಗ್ ಪ್ರಮುಖವಾಗಿದ್ದು, ಈ ಹಾಡು ಮೊದಲಾರ್ಧದಲ್ಲಿ ರಾಕಿ ಭಾಯ್ ಏನು ಮಾಡಿದ್ದ ಎಂಬುದನ್ನು ಕಥಾನಾಯಕಿಗೆ ಹೇಳುವ ರೀತಿಯಲ್ಲಿ ಈ ಹಾಡು ಮೂಡಿ ಬಂದಿದೆ. ಚಿತ್ರಮಂದಿರಗಳಲ್ಲಿ ಈ ಹಾಡು ಬಂದಾಗ ಯಶ್ ಅಭಿಮಾನಿಗಳು ಹುಚ್ಚೆದು ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಈಗ ಈ ಹಾಡು ವಿಡಿಯೋ ವರ್ಷನ್‌ನಲ್ಲಿ ರಿಲೀಸ್ ಆಗಿದ್ದು, ಯಶ್ ಅಭಿಮಾನಿಗಳಲ್ಲಿ ಸಂತಸ ಹೆಚ್ಚು ಮಾಡಿದೆ.

  'ಕೆಜಿಎಫ್' ಅನ್ನು ಹಿಯಾಳಿಸಿದ್ದ ನಿರ್ದೇಶಕನಿಂದ ಪ್ರಶಾಂತ್ ನೀಲ್‌ ಭೇಟಿ'ಕೆಜಿಎಫ್' ಅನ್ನು ಹಿಯಾಳಿಸಿದ್ದ ನಿರ್ದೇಶಕನಿಂದ ಪ್ರಶಾಂತ್ ನೀಲ್‌ ಭೇಟಿ

  'ಕೆಜಿಎಫ್‌ ಚಾಪ್ಟರ್‌ 2' ಸಿನಿಮಾದಲ್ಲಿ ತಾಯಿಯ ಸೆಂಟಿಮೆಂಟ್, ಅದ್ಬುತವಾದ ಮೇಕಿಂಗ್, ಆಕ್ಷನ್ ಸ್ವಿಕ್ವೇನ್ಸ್‌, ಹಾಗೂ ಸಿನಿಮಾ ಹಾಡುಗಳು ಜನರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಲು ಪ್ರಮುಖ ಕಾರಣವಾಗಿದೆ. ಐದು ಭಾಷೆಗಳಲ್ಲಿ ರಿಲೀಸ್ ಆದ 'ಕೆಜಿಎಫ್‌ 2' ಎಲ್ಲಾ ಭಾಷೆಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಹಿಂದಿ ಪ್ರೇಕ್ಷಕರನ್ನು ಗೆಲ್ಲುವ ಮಟ್ಟಕ್ಕೆ ಸಿನಿಮಾ ಯಶಸ್ವಿಯಾಗಿದ್ದು, ಬಾಲಿವುಡ್‌ ಸ್ಟಾರ್ ಸಿನಿಮಾಗಳನ್ನೇ ಹಿಂದಿಕ್ಕಿ 'ಕೆಜಿಎಫ್‌ 2' ಬಾಲಿವುಡ್ ಖಜಾನೆಯನ್ನು ತನ್ನದಾಗಿಸಿಕೊಂಡಿದೆ.

  'ಕೆಜಿಎಫ್‌ 2' ಚಿತ್ರದ ಮೂಲಕ ದಕ್ಷಿಣ ಭಾರತದ ಸಿನಿಮಾಗಳು ಹಾಗೂ ನಟ ನಟಿಯರಿಗೆ ಒಳ್ಳೆಯ ಹೈಪ್ ಕ್ರಿಯೇಟ್ ಆಗಿದೆ. ಬಾಲಿವುಡ್ ನಿರ್ದೇಶಕರು, ನಿರ್ಮಾಪಕರೇ ಈಗ ದಕ್ಷಿಣ ಭಾರತದ ನಟ ನಟಿಯರ ಜೊತೆ ಸಿನಿಮಾ ಮಾಡಲು ಮುಂದಾಗುತ್ತಿದ್ದಾರೆ. ಜೊತೆಗೆ ಆಫರ್‌ಗಳನ್ನು ನೀಡುತ್ತಿದ್ದಾರೆ. ಆ ಮಟ್ಟಿಗೆ 'ಕೆಜಿಎಫ್‌ 2' ಮಾರ್ಕೆಟ್‌ ಕ್ರಿಯೇಟ್ ಮಾಡಿದೆ. ಈಗಾಗಲೇ 'ಕೆಜಿಎಫ್‌ 2' ಜೊತೆ ಬಂದ 'RRR', 'ಪುಷ್ಪ' ಸಿನಿಮಾಗಳೂ ಕೂಡ ಭರ್ಜರಿ ಕಲೆಕ್ಷನ್ ಮಾಡಿದೆ. ಹೀಗಾಗಿ ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಹೆಚ್ಚು ಭರವಸೆ ಮೂಡುವಂತಾಗಿದೆ.

  Yash Starrer KGF 2 Cinema Toofan Video Song Release

  'KGF 2' 14ನೇ ದಿನವೂ ಅದ್ಭುತ ಕಲೆಕ್ಷನ್? ಅತೀ ಹೆಚ್ಚು ಗಳಿಕೆ ಕಂಡ 3ನೇ ಬಾಲಿವುಡ್ ಸಿನಿಮಾ!'KGF 2' 14ನೇ ದಿನವೂ ಅದ್ಭುತ ಕಲೆಕ್ಷನ್? ಅತೀ ಹೆಚ್ಚು ಗಳಿಕೆ ಕಂಡ 3ನೇ ಬಾಲಿವುಡ್ ಸಿನಿಮಾ!

  ಒಟ್ಟಿನಲ್ಲಿ 'ಕೆಜಿಎಫ್‌ 2' ಸಿನಿಮಾದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್‌ಗೆ ಒಳ್ಳೆಯ ಬೇಡಿಕೆ ಕ್ರಿಯೇಟ್ ಆಗಿದೆ. ನಟ ಯಶ್ ಸೇರಿದಂತೆ ಸಿನಿಮಾದಲ್ಲಿ ನಟಿಸಿದ ಎಲ್ಲಾ ಪಾತ್ರಾಧಾರಿಗಳಿಗೂ ಕೂಡ ಈ ಸಿನಿಮಾ ಮೂಲಕ ಒಳ್ಳೆಯ ಆಫರ್‌ಗಳು ಸಿಗುತ್ತಿದ್ದು, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಡಿಮ್ಯಾಂಡ್ ಶುರುವಾಗಿದೆ.

  English summary
  Yash Starrer KGF 2 Cinema Toofan video Song Release.
  Thursday, May 19, 2022, 15:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X