For Quick Alerts
  ALLOW NOTIFICATIONS  
  For Daily Alerts

  'KGF-2' ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಕ್ತಾಯ; ಸಂಜಯ್ ದತ್ ರನ್ನು ಬೀಳ್ಕೊಟ್ಟ ಪ್ರಶಾಂತ್ ನೀಲ್ ತಂಡ

  |

  ಭಾರತೀಯ ಸಿನಿಮಾರಂಗ ಉಸಿರು ಬಿಡಿಹಿಡಿದು ಕಾಯುತ್ತಿರುವ ಸಿನಿಮಾಗಳಲ್ಲಿ ಕನ್ನಡದ ಕೆಜಿಎಫ್-2 ಸಿನಿಮಾ ಕೂಡ ಒಂದು. ಸುಮಾರು ಎರಡು ವರ್ಷಗಳಿಂದ ಚಿತ್ರೀಕರಣ ಮಾಡುತ್ತಿದ್ದ ಕೆಜಿಎಫ್ ತಂಡ ಇದೀಗ ಕ್ಲೈಮ್ಯಾಕ್ಸ್ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

  ಹೌದು, ಲಾಕ್ ಡೌನ್ ಬಳಿಕ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭ ಮಾಡಿದ್ದ ಕೆಜಿಎಫ್-2 ಟೀಂ ಇದೀಗ ಚಿತ್ರೀಕರಣ ಮುಗಿಸಿದೆ. ಈ ಬಗ್ಗೆ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ. ಅನೇಕ ದಿನಗಳಿಂದ ಬಾಲಿವುಡ್ ನಟ ಸಂಜಯ್ ದತ್ ಎಂಟ್ರಿಗಾಗಿ ಕೆಜಿಎಫ್-2 ತಂಡ ಕಾಯುತ್ತಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸಂಜಯ್ ದತ್ ಚಿಕಿತ್ಸೆ ಪಡೆದು, ಕ್ಯಾನ್ಸರ್ ಗೆದ್ದ ನಂತರ ಕೆಜಿಎಫ್-2 ತಂಡ ಸೇರಿಕೊಂಡಿದ್ದರು.

  ಕೆಜಿಎಫ್ 2 ತಂಡದಿಂದ ಭರ್ಜರಿ ಅಪ್‌ಡೇಟ್: ಟ್ರೈಲರ್ ಬಿಡುಗಡೆ?

  ಕೆಜಿಎಫ್-2 ಸಿನಿಮಾದ ರಾಕಿ ಭಾಯ್ ಮತ್ತ ಅಧೀರ ನಡುವಿನ ಫೈಟ್ ದೃಶ್ಯ ಸೆರೆಹಿಡಿಯಲಾಗಿದೆ. ಭಯಾನಕ ಫೈಟ್ ದೃಶ್ಯಕ್ಕಾಗಿ ಅನೇಕ ದಿನಗಳಿಂದ ತಯಾರಿ ನಡೆಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಹೈದರಾಬಾದ್ ನಲ್ಲಿ ಚಿತ್ರದ ಫೈಟ್ ದೃಶ್ಯ ಸೆರೆಹಿಡಿಯಲಾಗುತ್ತಿತ್ತು. ಇದೀಗ ಚಿತ್ರೀಕರಣ ಮುಗಿಸಿ ಇಡೀ ಸಿನಿಮಾತಂಡ ಕ್ಲಿಕ್ಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಸಂಜಯ್ ದತ್ ಗೆ ಬೀಳ್ಕೊಟ್ಟ ಸಿನಿಮಾತಂಡ

  ಸಂಜಯ್ ದತ್ ಗೆ ಬೀಳ್ಕೊಟ್ಟ ಸಿನಿಮಾತಂಡ

  ನಿರ್ದೇಶಕ ಪ್ರಶಾಂತ್ ನೀಲ್ ಇಡೀ ತಂಡದ ಮಧ್ಯೆ ನಿಂತು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ವಿಶೇಷ ಎಂದರೆ ತಂಡದ ಜೊತೆ ಅಧೀರ ಸಂಜಯ್ ದತ್ ಸಹ ಸೆರೆಯಾಗಿದ್ದಾರೆ. ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಗಿಸುವ ಮೂಲಕ ಸಂಜಯ್ ದತ್ ಗೆ ಅದ್ದೂರಿ ಬೀಳ್ಕೊಟ್ಟಿದ್ದಾರೆ. ಮೊದಲ ಬಾರಿಗೆ ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ನಟಿಸಿದ್ದು, ಚಿತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.

  ಸಂಜಯ್ ದತ್ ನಿಜ ಜೀವನದ ಯೋಧ

  ಸಂಜಯ್ ದತ್ ನಿಜ ಜೀವನದ ಯೋಧ

  ಕ್ಲೈಮ್ಯಾಕ್ಸ್ ಮುಗಿಸಿದ ಸಂತಸವನ್ನು ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅತಿಯಾದ ಕ್ರೇಸ್, ಬಳಲಿಕೆ ಮತ್ತು ತೃಪ್ತಿದಾಯಕ ಶೂಟ್. ಅದ್ಭುತವಾದ ಟೀಂ ನನ್ನ ಜೊತೆ ಇದೆ. ಸಂಜಯ್ ದತ್ ಸರ್ ನಿಜ ಜೀವನದ ನಿಜವಾದ ಯೋಧ. ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಕ್ತಾಯವಾಗಿದೆ. ದೊಡ್ಡ ಪರದೆಯಲ್ಲಿ ಕೆಜಿಎಫ್-2 ನೋಡಲು ಇಡೀ ಜಗತ್ತು ಕಾಯುತ್ತಿದೆ' ಎಂದು ಬರೆದುಕೊಂಡಿದ್ದಾರೆ.

  ಕೆಜಿಎಫ್ ಕ್ಲೈಮ್ಯಾಕ್ಸ್ ಅನುಭವವನ್ನು ಫೋಟೋ ಮೂಲಕ ಹಂಚಿಕೊಂಡ ಕಾರ್ತಿಕ್

  ಡಿಸೆಂಬರ್ 21ಕ್ಕೆ ಮಹತ್ವದ ಅಪ್ ಡೇಟ್

  ಡಿಸೆಂಬರ್ 21ಕ್ಕೆ ಮಹತ್ವದ ಅಪ್ ಡೇಟ್

  ಡಿಸೆಂಬರ್ 21 ರಂದು ಕೆಜಿಎಫ್ 2 ಸಿನಿಮಾದಿಂದ ಮಹತ್ವದ ಅಪ್‌ಡೇಟ್ ಸಿಗಲಿದೆ. ಈ ಬಗ್ಗೆ ಸಿನಿಮಾತಂಡ ಈಗಾಗಲೇ ಬಹಿರಂಗ ಪಡಿಸಿದೆ. ಡಿಸೆಂಬರ್ 21 ಬೆಳಗ್ಗೆ 10 ಗಂಟೆಗೆ ಕೆಜಿಎಫ್-2 ಸಿನಿಮಾದಿಂದ ಸಿಗುವ ಅಪ್ ಡೇಟ್ ಏನು ಎನ್ನುವ ಕುತೂಹಲ ಚಿತ್ರಪ್ರಿಯರಲ್ಲಿ ಮನೆಮಾಡಿದೆ.

  ಕೆಜಿಎಫ್ ರಿಲೀಸ್ ಆದ ದಿನ

  ಕೆಜಿಎಫ್ ರಿಲೀಸ್ ಆದ ದಿನ

  ಡಿಸೆಂಬರ್ 21 ರ ದಿನ ಕೆಜಿಎಫ್ ತಂಡಕ್ಕೆ ಅತ್ಯಂತ ಮಹತ್ವದ್ದು, ಕಳೆದ ಎರಡು ವರ್ಷಗಳ ಹಿಂದೆ ಇದೇ ದಿನದಂದು ಕೆಜಿಎಫ್ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಿ ಇತಿಹಾಸ ಸೃಷ್ಟಿಸಿತ್ತು. ಈಗ ಇದೇ ದಿನ ಸಿನಿಮಾ ಕುರಿತಂತೆ ಪ್ರಮುಖ ಅಪ್‌ಡೇಟ್ ಒಂದು ಪ್ರೇಕ್ಷಕರಿಗೆ ನೀಡಲು ಸಜ್ಜಾಗಿದೆ ಚಿತ್ರತಂಡ.

  English summary
  Yash starrer KGF-2 movie Climax shooting is wrap up. prashanth neel shares photo with KGF-2 team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X