'KGF-2' ಅಪ್ ಡೇಟ್: ಲಾಕ್ ಡೌನ್ ನಡುವೆಯೂ ನಡೆಯುತ್ತಿದೆ ಮ್ಯೂಸಿಕ್ ಸೆಷನ್
'ಕೆಜಿಎಫ್-2' ಕೇವಲ ಕನ್ನಡಿಗರು ಮಾತ್ರ ಕಾತರದಿಂದ ಕಾಯುತ್ತಿರುವ ಸಿನಿಮಾವಲ್ಲ, ಇಡೀ ಭಾರತೀಯ ಚಿತ್ರರಂಗ ಕೆಜಿಎಫ್-2ಗಾಗಿ ಎದುರು ನೋಡುತ್ತಿದೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊರೊನಾ ಲಾಕ್ ಡೌನ್ ನಿಂದ ಮನೆಯಲ್ಲಿಯೇ ಇರಬೇಕಾಗಿದೆ.
Recommended Video
ಆದರೀಗ ಕೆಜಿಎಫ್-2 ಸಿನಿಮಾದ ಕೆಲಸಗಳು ಪ್ರಾರಂಭವಾಗಿವೆ. ಈ ಬಗ್ಗೆ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಕೆಜಿಎಫ್-2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅಭಿಮಾನಿಗಳು ಚಿತ್ರದ ಟೀಸರ್ ಮತ್ತು ಟ್ರೈಲರ್ ಗಾಗಿ ಕಾಯುತ್ತಿದ್ದಾರೆ. ಆದರೆ ಚಿತ್ರತಂಡ ಯಾವುದೇ ಅಪ್ ಡೇಟ್ ನೀಡಿರಲಿಲ್ಲ. ಸದ್ಯ ಕೆಜಿಎಫ್-2 ಸಿನಿಮಾದ ಮ್ಯೂಸಿಕ್ ಕೆಲಸದ ಫೋಟೋವನ್ನು ಶೇರ್ ಮಾಡಿದೆ ಚಿತ್ರತಂಡ. ಮುಂದೆ ಓದಿ..

ಕೆಜಿಎಫ್-2 ಮ್ಯೂಸಿಕ್ ಸೆಷನ್
ಕೆಜಿಎಫ್-2 ಸಿನಿಮಾದ ಮ್ಯೂಸಿಕ್ ವರ್ಕ್ ನಡೆಯುತ್ತಿದೆ. ಲಾಕ್ ಡೌನ್ ನಡುವೆಯೂ ಚಿತ್ರತಂಡ ಬಹುನಿರೀಕ್ಷೆಯ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದೆ. ಸದ್ಯ ಚಿತ್ರದ ಸಂಗೀತ ಕೆಲಸ ನಡೆಯುತ್ತಿದೆ. ಈ ಬಗ್ಗೆ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದು, ಕೆಜಿಎಫ್-2 ಮ್ಯೂಸಿಕ್ ಸೆಷನ್ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರ್, ಭುವನ್ ಗೌಡ ಮತ್ತು ಕಾರ್ತಿಕ್ ಇದ್ದಾರೆ.

ಊರಿಂದ ಪಾವಸ್ ಆಗಿರುವ ರವಿ ಬಸ್ರೂರ್
ಕೊರೊನಾ ಲಾಕ್ ಡೌನ್ ಆಗುತ್ತಿದ್ದಂತೆ ಸಂಗೀತ ನಿರ್ದೇಶಕ ರವಿ ಬಸ್ರೂರ್ ಊರಿನ ಕಡೆ ಪಯಣ ಬೆಳೆಸಿದ್ದರು. ಚಿತ್ರರಂಗದ ಎಲ್ಲಾ ಕೆಲಸಗಳು ಸ್ಥಗಿತವಾಗಿದ್ದ ಕಾರಣ ರವಿ ಬಸ್ರೂರು ಊರು ಸೇರಿದ್ದರು. ಅಪ್ಪನ ಕುಲುಮೆಯಲ್ಲಿ ಕೆಲಸ ಮಾಡುತ್ತಿದ್ದ ರವಿ ಬಸ್ರೂರ್ ಈಗ ಮತ್ತೆ ಸಂಗೀತ ಕೆಲಸಕ್ಕೆ ಮರಳಿದ್ದಾರೆ.
ಕೆಜಿಎಫ್ ಸಿನಿಮಾಕ್ಕೆ ಪೈಪೋಟಿಯೇ ಇಲ್ಲ: ಟಿಕ್ ಟಾಕ್ ನಲ್ಲಿ ಹೊಸ ದಾಖಲೆ

25 ದಿನಗಳ ಶೂಟಿಂಗ್ ಬಾಕಿ
ಕೆಜಿಎಫ್-2 ಸಿನಿಮಾದ ಪ್ರಮುಖ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಆದರೆ ಇನ್ನೂ 25 ದಿನಗಳ ಚಿತ್ರೀಕರಣ ಬಾಕಿ ಇದೆಯಂತೆ. ಇದರಲ್ಲಿ 2 ಆಕ್ಷನ್ ದೃಶ್ಯಗಳಗಳನ್ನು ಚಿತ್ರೀಕರಣ ಮಾಡಬೇಕಿದೆ. ಒಂದು ಆಕ್ಷನ್ ದೃಶ್ಯ ಯಶ್ ಮತ್ತು ಸಂಜಯ್ ದತ್ ನಡುವಿನ ಫೈಟಿಂಗ್ ದೃಶ್ಯ ಸಹ ಇದೆಯಂತೆ.

ಅಕ್ಟೋಬರ್ ಗೆ ರಿಲೀಸ್ ಆಗುತ್ತಾ ಸಿನಿಮಾ?
ಕೊರೊನಾ ವೈರಸ್ ಅಟ್ಟಹಾಸದ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ 25 ದಿನಗಳ ಚಿತ್ರೀಕರಣ ಬಾಕಿ ಇದೆ. ಒಂದು ವೇಳೆ ಲಾಕ್ ಡೌನ್ ಮುಗಿದರೂ ಚಿತ್ರೀಕರಣಕ್ಕೆ ಅನುಮತಿ ಸಿಗುವುದು ಅನುಮಾನ. ಹಾಗಾಗಿ ಚಿತ್ರೀಕರಣ ತಡವಾಗುವ ಸಾಧ್ಯತೆ ಇದೆ. ಇದರಿಂದ ಸಿನಿಮಾ ಅಕ್ಟೋಬರ್ 23ಕ್ಕೆ ಆಗುವುದು ಅನುಮಾನ. ಸಿನಿಮಾ ರಿಲೀಸ್ ಮುಂದಕ್ಕೆ ಹೋಗುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











